fbpx
ಭವಿಷ್ಯ

ಯಾವ ನಕ್ಷತ್ರದವರು ಯಾವ ನಕ್ಷತ್ರದವರ ಜೊತೆ ಮದುವೆ ಆದರೆ ಒಳ್ಳೇದು , ನಕ್ಷತ್ರಕ್ಕೆ ಇರುವ ಅಧಿಪತಿ ಮತ್ತು ಪ್ರಾಣಿಗಳ ಬಗ್ಗೆ ತಿಳ್ಕೊಳ್ಳಿ ..

ಯಾವ ನಕ್ಷತ್ರದವರು ಯಾವ ನಕ್ಷತ್ರದವರ ಜೊತೆ ಮದುವೆ ಆದರೆ ಒಳ್ಳೇದು , ನಕ್ಷತ್ರಕ್ಕೆ ಇರುವ ಅಧಿಪತಿ ಮತ್ತು ಪ್ರಾಣಿಗಳ ಬಗ್ಗೆ ತಿಳ್ಕೊಳ್ಳಿ ..

ನಕ್ಷತ್ರಗಳು,ಅದರ ಅಧಿಪತಿ ಮತ್ತು ನಕ್ಷತ್ರಕ್ಕೆ ಇರುವ ಪ್ರಾಣಿಗಳು.

ನಕ್ಷತ್ರಗಳ ಬಗ್ಗೆ ನಿಮಗೆಷ್ಟು ಗೊತ್ತು?

ನಾವು ಹುಟ್ಟಿದ ತಕ್ಷಣ ನಮ್ಮ ನಕ್ಷತ್ರ ಯಾವುದು, ಯಾವ ಲಗ್ನ,ಯಾವ ರಾಶಿ,ಜನ್ಮ ಕುಂಡಲಿ ಎಲ್ಲವನ್ನು ನೋಡುತ್ತಾರೆ.ಒಟ್ಟಿಗೆ ಇಪ್ಪತ್ತೇಳು ನಕ್ಷತ್ರಗಳಿವೆ.ಪ್ರತಿಯೊಬ್ಬ ಮನುಷ್ಯನಿಗೆ ಒಂದು ಒಂದು ಬೇರೆ ಬೇರೆ ಯಾಗಿ ಅವರು ಹುಟ್ಟಿದ ದಿನ,ಸಮಯಕ್ಕೆ ತಕ್ಕಂತೆ ಜಾತಕ,ರಾಶಿ, ನಕ್ಷತ್ರಗಳಿರುತ್ತವೆ.

ಒಂದು ನಕ್ಷತ್ರದಲ್ಲಿ ಸಾಮಾನ್ಯವಾಗಿ ನಾಲ್ಕು ಪಾದಗಳಿರುತ್ತವೆ. ಇಪ್ಪತ್ತೇಳು ನಕ್ಷತ್ರಗಳಿಗೂ ಒಂದೊಂದು ಗ್ರಹ ಅಧಿಪತಿ ಯಾಗಿರುತ್ತದೆ. ಅದೇ ರೀತಿ ಒಂದೊಂದು ನಕ್ಷತ್ರಕ್ಕೂ ಒಂದೊಂದು ಪ್ರಾಣಿಯ ಲಕ್ಷಣಗಳಿರುತ್ತವೆ.ಆಯಾ ನಕ್ಷತ್ರಕ್ಕಿರುವ ಒಂದೊಂದು ಪ್ರಾಣಿಯೂ ಆಯಾ ನಕ್ಷತ್ರದಲ್ಲಿ ಹುಟ್ಟಿರುವವರು ಆ ಪ್ರಾಣಿಯಲ್ಲಿರುವ ಗುಣಗಳನ್ನು ಹೊಂದಿರುತ್ತಾರೆ. ಅವರು ನೆಡೆಯುವ,ಅವರ ಹಾವ, ಭಾವ,ಅವರು ನೆಡೆದು ಕೊಳ್ಳುವ ರೀತಿಯೂ ಕೂಡ ಅದೇ ಪ್ರಾಣಿಯ ರೀತಿಯಲ್ಲಿ ಇರುತ್ತದೆ.

ಈಗ ನೋಡೋಣ ಆ ಇಪ್ಪತ್ತೇಳು ನಕ್ಷತ್ರಗಳು ಯಾವುವು ಅವು ಯಾವ ಪ್ರಾಣಿಗಳ ಹೆಸರನ್ನು ಹೇಳುತ್ತವೆ ಎಂದು ತಿಳಿಯೋಣ.

1.ಅಷ್ವಿನಿ ನಕ್ಷತ್ರ,-ಕೇತು -ಗಂಡು ಕುದುರೆ.

2.ಭರಣಿ ನಕ್ಷತ್ರ- ಶುಕ್ರ-ಗಂಡು ಆನೆ.

3.ಕೃತಿಕಾ ನಕ್ಷತ್ರ-ಸೂರ್ಯ-ಹೆಣ್ಣು ಮೇಕೆ.

4.ರೋಹಿಣಿ -ಚಂದ್ರ-ಸರ್ಪ.

5.ಮೃಗಶಿರ-ಕುಜ-ಸರ್ಪ.

6.ಅರಿದ್ರ-ರಾಹು-ಶ್ವಾನ(ನಾಯಿ).

7.ಪುನರ್ವಸು-ಗುರು-ಬೆಕ್ಕು.

8.ಪುಷ್ಯ-ಶನಿ-ಗಂಡು ಮೇಕೆ.

9.ಆಶ್ಲೇಷ-ಬುಧ-ಬೆಕ್ಕು.

10.ಮಘಾ-ಕೇತು-ಇಲಿ.

11.ಪೂರ್ವಫಾಲ್ಗುಣಿ-ಶುಕ್ರ-ಇಲಿ.

12.ಉತ್ತರಫಾಲ್ಗುಣಿ-ಸೂರ್ಯ-ಗೂಳಿ.

13.ಹಸ್ತ-ಚಂದ್ರ-ಎಮ್ಮೆ.

14.ಚಿತ್ರ-ಕುಜ-ಹುಲಿ.

15.ಸ್ವಾತಿ-ರಾಹು-ಎಮ್ಮೆ.

16.ವಿಶಾಖ-ಗುರು-ಹುಲಿ.

17.ಅನುರಾಧ-ಶನಿ-ಜಿಂಕೆ.

18.ಜ್ಯೇಷ್ಠ-ಬುಧ-ಜಿಂಕೆ.

19.ಮೂಲ-ಕೇತು-ನಾಯಿ.

20.ಪೂರ್ವಾಷಾಡ-ಶುಕ್ರ-ಕೋತಿ.

21.ಉತ್ತರಾಷಾಡ-ಸೂರ್ಯ-ಮುಂಗುಸಿ.

22.ಶ್ರವಣ-ಚಂದ್ರ-ಕೋತಿ.

23.ಧನಿಷ್ಠ-ಕುಜ-ಹೆಣ್ಣು ಸಿಂಹ.

24.ಶತಭಿಷ-ರಾಹು-ಹೆಣ್ಣು ಕುದುರೆ.

25.ಪೂರ್ವಭಾದ್ರಪದ-ಗುರು-ಗಂಡು ಸಿಂಹ.

26.ಉತ್ತರಭಾದ್ರಪದ-ಶನಿ-ಹಸು.

27.ರೇವತಿ-ಬುಧ-ಹೆಣ್ಣು ಆನೆ.

ಮತ್ತು ಇನ್ನೊಂದು ವಿಷಯ ಏನೆಂದರೆ ಕೆಲವು ಪ್ರಾಣಿಗಳನ್ನು ಕಂಡರೆ ಮತೆ ಕೆಲವು ಪ್ರಾಣಿಗಳಿಗೆ ಆಗುವುದಿಲ್ಲ ಅದೇ ರೀತಿಯಾಗಿ ಇದು ನಕ್ಷತ್ರಕ್ಕೂ ಪರಿಣಮಿಸುತ್ತದೆ.

ಆದ್ದರಿಂದ ಈ ಜೋಡಿಯನ್ನು ಮುಖ್ಯವಾಗಿ ಮದುವೆಗಳಿಗೆ ಹೊಂದಾಣಿಕೆ ಮಾಡಬಾರದು. ರೀತಿ ಮಾಡಿದರೆ ಯಾವಾಗಲೂ ಜಗಳ,ಕೋಪ, ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ.ಹೊಂದಾಣಿಕೆ ,ಅನ್ಯೂನ್ಯತೆ ಇರುವುದಿಲ್ಲ.ಆ ಜೋಡಿಗಳು ಹೀಗಿವೆ…

ಹಸು ಮತ್ತು ಹುಲಿ.

ಆನೆ ಮತ್ತು ಸಿಂಹ.

ಕುದುರೆ ಮತ್ತು ಎಮ್ಮೆ.

ನಾಯಿ ಮತ್ತು ಬೆಕ್ಕು.

ಹಾವು ಮತ್ತು ಮುಂಗುಸಿ.

ಕೋತಿ ಮತ್ತು ಮೇಕೆ.

ಬೆಕ್ಕು ಮತ್ತು ಇಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top