fbpx
ಮನೋರಂಜನೆ

ಮಜಾ ಟಾಕೀಸ್ ಮುಗೀತು ಈಗ ‘ಸೃಜನ್ ಲೋಕೇಶ್’ ಜಡ್ಜ್ ಅಂತೇ ! ವಿಜಯ್ ಸೂರ್ಯಗೆ ಪ್ರಮೋಷನ್ ಅಂತೇ !

ಮಜಾ ಟಾಕೀಸ್ ಮುಗೀತು ಈಗ ‘ಸೃಜನ್ ಲೋಕೇಶ್’ ಜಡ್ಜ್ ಅಂತೇ ! ವಿಜಯ್

ಸೂರ್ಯಗೆ ಪ್ರಮೋಷನ್ ಅಂತೇ !

 

 

ನಟ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಹಿಟ್ ಕಾಮಿಡಿ ಶೋ ಮಜಾ ಟಾಕೀಸ್ ತೆರೆ ಎಳೆದಿದ್ದಾರೆ..ಇಂದು ಮಜಾ ಟಾಕೀಸ್ ನ ಕೊನೆಯ ಎಪಿಸೋಡ್ ಪ್ರಸಾರವಾಗಲಿದ್ದು ಕನ್ನಡ ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದೆ.

 

 

 

ಕನ್ನಡದಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಶೋಗಳಲ್ಲಿ ‘ಮಜಾ ಟಾಕೀಸ್‌’ ಕೂಡ ಒಂದು. ಅಪರ್ಣಾ, ವಿ.ಮನೋಹರ್‌ ಹಾಗೂ ಇಂದ್ರಜಿಲ್‌ ಲಂಕೇಶ್‌,ಶ್ವೇತಾ ಚೆಂಗಪ್ಪಾ, ದಯಾನಂದ್‌, ಪವನ್‌, ವಂದನ, ರೇಮೋ, ಮಂಡ್ಯ ರಮೇಶ್‌ ಮತ್ತು ಕುರಿ ಪ್ರತಾಪ್‌ ಅವರನ್ನೊಳಗೊಂಡ ಈ ಅಪರೂಪದ ಕಾರ್ಯಕ್ರಮ ಪ್ರೇಕ್ಷಕರಿಗೆ ಭರ್ಜರಿ ಮನೋರಂಜನೆ ನೀಡುವಲ್ಲಿ ಯಶಸ್ವಿಯಾಗಿತ್ತು.

 

 

ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಜಾ ಟಾಕೀಸ್ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಂಚಿಕೆಯ ಚಿತ್ರೀಕರಣ ಅದ್ಧೂರಿಯಾಗಿ ನಡೆದಿತ್ತು .

ನಟ ಸೃಜನ್ ಲೋಕೇಶ್  ಹೊಸ ಹಾಸ್ಯ ಕಾರ್ಯಕ್ರಮ `ಕಾಮಿಡಿ ಟಾಕೀಸ್’ನಲ್ಲಿ ತೀರ್ಪುಗಾರನಾಗಿ ಕೆಲಸ ಮಾಡಲಿದ್ದಾರೆ.

 

 

ಈ ಮೊದಲು ಡ್ಯಾನ್ಸ್ ರಿಯಾಲಿಟಿ ಶೋ ಗೆ ಜಡ್ಜ್ ಆಗಿದ್ದ ರಚಿತಾ, ಈಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಟಾಕೀಸ್ ಎಂಬ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಭಾಗವಹಿಸಲಿದ್ದಾರೆ.

 

 

ಈ ಕಾಮಿಡಿ ಟಾಕೀಸ್ ಕಾರ್ಯಕ್ರಮವನ್ನು ಕಿರುತೆರೆ ನಟ ಅಗ್ನಿ ಸಾಕ್ಷಿ ಧಾರಾವಾಹಿಯ ವಿಜಯ್ ಸೂರ್ಯ ನಿರೂಪಣೆ ಮಾಡಲಿದ್ದಾರೆ , ಈಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಟಾಕೀಸ್ ಗಾಗಿ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ .

 

 

ಇನ್ನು `ಸದಾ ನಿಮ್ಮೊಂದಿಗೆ’ ಅನ್ನೊ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top