fbpx
ಸಮಾಚಾರ

ತಾಜ್ ಮಹಲ್ ಅನ್ನುಯಾವಾಗ ಕೆಡವುತ್ತೀರಾ ಹೇಳಿ, ಮಕ್ಕಳಿಗೆ ಕೊನೆಯ ಭಾರಿ ತೋರಿಸುತ್ತೇನೆ : ಪ್ರಕಾಶ್ ರೈ..!

ತಾಜ್ ಮಹಲ್ ಅನ್ನುಯಾವಾಗ ಕೆಡವುತ್ತೀರಾ ಹೇಳಿ,

ಮಕ್ಕಳಿಗೆ ಕೊನೆಯ ಭಾರಿ ತೋರಿಸುತ್ತೇನೆ : ಪ್ರಕಾಶ್ ರೈ..!

 

 

ಕಳೆದ ಕೆಲವು ದಿನಗಳಿಂದ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ…ಉತ್ತರ ಪ್ರದೇಶ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಕೈಪಿಡಿಯಲ್ಲಿ ತಾಜ್ ಮಹಲ್ ತೆಗೆದುಹಾಕಿದ ದಿನಗಳಿಂದ ತಾಜ್ ಮಹಲ್ ಬಗೆಗಿನ ವಿವಾದ ಹುಟ್ಟಿಕೊಂಡಿದೆ.. ಈ ಬಗ್ಗೆ ನಟ ಪ್ರಕಾಶ್ ರಾಜ್‌ ತಮ್ಮ ಟ್ವಿಟ್ಟರ್​ ಮೂಲಕ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದಾರೆ.

 

ಈಗ ತಾಜ್ ಮಹಲ್ ಇರುವ ಜಗದಲ್ಲಿ ದೇವಸ್ಥಾನವಿತ್ತು, ಶಹಜಹಾನ್ ಆಕ್ರಮಿಸಿ ಆ ಜಾಗದಲ್ಲಿ ಆ ಕಟ್ಟಡ ಕಟ್ಟಿಸಿದ್ದಾರೆ ಎಂಬ ಅನೇಕ ಹೇಳಿಕೆಗಳನ್ನ ಅನೇಕರು ನೀಡುತ್ತಿದ್ದಾರೆ. ಕೆಲವರು ತಾಜ್ ಮಹಲ್‌’ನ್ನು ಕೆಡವಬೇಕು ಎಂದು ಮಾತನಾಡುತ್ತಿದ್ದಾರೆ.. ಈ ಹಿನ್ನೆಲೆಯಲ್ಲಿ ಪ್ರಕಾಶ್ ರೈ ತಾಜ್ ಮಹಲ್‌’ನ್ನು ಕೆಡವಬೇಕು ಎಂದು ಮಾತನಾಡುತ್ತಿರುವವರ ವಿರುದ್ಧ ಟ್ವೀಟ್ ಮಾಡಿದ್ದಾರೆ.. ಮುಂದೆ ಓದಿ

 

 

‘ಇದು ಯಾರಿಗೆ ಸಂಬಂಧಿಸಿದೆಯೋ ಅವರಿಗೆ ಮಾತ್ರ’ ಎಂದು ಶೀಷಿಕೆ ಕೊಟ್ಟು ಟ್ವೀಟ್ ಮಾಡಿರುವ ಪ್ರಕಾಶ್ ರೈ “ನೀವು ತಾಜ್ ಮಹಲ್ ಅಡಿಪಾಯವನ್ನು ಅಗೆಯಲು ಪ್ರಾರಂಭಿಸಿರುವುದರಿಂದ ತಾಜ್ ಮಹಲನ್ನು ಯಾವಾಗ ಕೆಡವಿ ಉರುಳಿಸಬೇಕು ಎಂದುಕೊಂಡಿದ್ದೀರಿ ಎಂದು ಹೇಳಿ..? ಕನಿಷ್ಠ ಪಕ್ಷ ನನ್ನ ಮಕ್ಕಳನ್ನು ಕರೆದುಕೊಂಡು ಹೋಗಿ ಕೊನೆಯ ಬಾರಿ ತಾಜ್ ಮಹಲನ್ನು ತೋರಿಸಿಕೊಂಡು ಬರುತ್ತೇವೆ,” ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ..

 

 

ನಂತರ “ಸುಮ್ಮನೆ ಕೇಳುತ್ತೇನೆ,, ವಿಶ್ವದ ಅಧ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಮುಂದಿನ ದಿನಗಳಲ್ಲಿ ಕಣ್ಮರೆಯಾಗಿ ಇತಿಹಾಸದ ಪುಟ ಸೇರುತ್ತಾ..!” ಎಂದು ತಾಜ್ ಮಹಲ್ ವಿವಾದದ ಕುರಿತು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top