fbpx
ಸಮಾಚಾರ

ಟಿಪ್ಪುವನ್ನು ಹಾಡಿ ಹೊಗಳಿದ ರಾಷ್ಟ್ರಪತಿ ಕೋವಿಂದ್ ..! ಬಿಜೆಪಿಯವರಿಗೆ ಮುಜುಗರ.

ಟಿಪ್ಪುವನ್ನು ಹಾಡಿ ಹೊಗಳಿದ ರಾಷ್ಟ್ರಪತಿ ಕೋವಿಂದ್ ..! ಬಿಜೆಪಿಯವರಿಗೆ ಮುಜುಗರ.

 

 

ಸಿದ್ದರಾಮಯ್ಯ ಸರ್ಕಾರದ ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ರಾಷ್ಟ್ರಪತಿಯಾಗಿರುವ ರಾಮನಾಥ್ ಕೋವಿಂದ್ಅವರು ಮೈಸೂರು ಹುಲಿ ಟಿಪ್ಪುಸುಲ್ತಾನ್ ರನ್ನು ಹಾಡಿ ಹೊಗಳಿದ್ದಾರೆ. ವಿಧಾನಸೌಧ ವಜ್ರ ಮಹೋತ್ಸವ ಅಂಗವಾಗಿ ಬುಧವಾರ ರಾಜ್ಯ ವಿಧಾನ ಮಂಡಲದ ವಿಶೇಷ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ಟಿಪ್ಪು ಸುಲ್ತಾನ್ ರನ್ನು ಸ್ಮರಿಸಿಕೊಂಡಿದ್ದಾರೆ.

 

 

ಕನ್ನಡನಾಡು ನುಡಿಗೆ ಕೊಡುಗೆ ನೀಡಿದ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಸೇರಿದಂತೆ ಸ್ವಾತಂತ್ರ್ಯ ಸೇನಾನಿಗಳ ಹೆಸರುಗಳನ್ನು ಸ್ಮರಿಸುವ ವೇಳೆ ಟಿಪ್ಪು ಸುಲ್ತಾನ್‌ ಹೆಸರನ್ನು ಉಲ್ಲೇಖಿಸಿದ ರಾಷ್ಟ್ರಪತಿಗಳು “ಟಿಪ್ಪು ಸುಲ್ತಾನ್ ಒಬ್ಬ ವೀರ ಸೇನಾನಿಯಾಗಿದ್ದನು, ಬ್ರಿಟೀಷರ ವಿರುದ್ಧ ಹೊರಾಡಿ ಐತಿಹಾಸಿಕ ಮರಣವನ್ನಪ್ಪಿದ್ದಾರೆ. ಯುದ್ಧದಲ್ಲಿ ರಾಕೆಟ್’ಗಳನ್ನು ಬಳಸಿದ ಮೊದಲ ಅರಸ ಟಿಪ್ಪು ಸುಲ್ತಾನ್.. ಟಿಪ್ಪು ಸುಲ್ತಾನ್ ರ ರಾಕೆಟ್‌ಗಳ ತಂತ್ರಜ್ಞಾನವನ್ನು ನಂತರ ಯುರೋಪ್ ರಾಷ್ಟ್ರಗಳು ಬಳಸಿಕೊಂಡವು” ಎಂದು ಹೇಳಿದರು..

 

 

ರಾಷ್ಟ್ರಪತಿ ಕೋವಿಂದ್‌’ಅವರು ಟಿಪ್ಪು ಸುಲ್ತಾನ್ ಕುರಿತು ಮಾತನಾಡುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಮೇಜು ತಟ್ಟಿ ಸಂಭ್ರಮಿಸಿದರೆ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವ ಬಿಜೆಪಿ ಮಂದಿಗೆ ಪೇಚು ಮೋರೆ ಹಾಕುವಂತಾಯಿತು..ರಾಜ್ಯದಲ್ಲಿ ಟಿಪ್ಪು ಜಯಂತಿ ವಿರೋಧಿಸುತ್ತಿರುವ ಬಿಜೆಪಿ ಪಕ್ಷದ ಮುಖಂಡರಿಗೆ ಕೋವಿಂದ್ ಅವರ ಈ ಭಾಷಣ ಮುಜುಗರವನ್ನುಂಟು ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top