fbpx
ದೇವರು

ಅಕ್ಟೋಬರ್ 26ನೇ ತಾರೀಖು ಈ ರೀತಿ ಸೂರ್ಯ ದೇವನನ್ನು ಪೂಜೆ ಮಾಡಿದ್ರೆ ಗ್ರಹ ದೋಷ ಮತ್ತೆ ಜಾತಕ ದೋಷ ದೂರ ಆಗುತ್ತೆ !

ಅಕ್ಟೋಬರ್ ಇಪ್ಪತ್ತಾರನೇ ತಾರೀಖಿನಂದು ಚತ ಪೂಜಾ ಎಂದು ಆಚರಿಸಲಾಗುತ್ತದೆ. ಇದು ಸೂರ್ಯ  ದೇವನನ್ನು ಪೂಜೆಯ ಪೂಜೆ ಮಾಡುವ ದಿನ.

 

ಅಕ್ಟೋಬರ್ ಇಪ್ಪತ್ತಾರನೇ ತಾರೀಖು ಚತ ಪೂಜಾ ಅಂದರೆ ಸೂರ್ಯ ದೇವನನ್ನು ಪೂಜೆ ಮಾಡುವ ದಿನ. ಒಂದು ತಾಮ್ರದ ಚೊಂಬಿನಲ್ಲಿ ನೀರನ್ನು ತೆಗೆದುಕೊಂಡು ಅದರೊಳಗೆ ಸಿಂಧೂರವನ್ನು ಮಿಶ್ರಣ ಮಾಡಿ ಸೂರ್ಯದೇವನಿಗೆ ಅರ್ಪಿಸಬೇಕು.

 

 

ಸೂರ್ಯ ದೇವನನ್ನು  ಪೂಜೆ ಮಾಡುವುದು ಅತಿ ಹೆಚ್ಚಿನ ಮಹತ್ವವನ್ನು ಹೊಂದಿದೆ. ಇದು ಭಾರತ ದೇಶದ  ಬಿಹಾರ ,ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಅತಿ ಹೆಚ್ಚಾಗಿ ಆಚರಣೆಯಲ್ಲಿದೆ. ಆದರೆ ಇದು ಎಲ್ಲ ಹಿಂದೂ ಧರ್ಮದವರಿಗೂ ಸಹ ಮೀಸಲಾಗಿದೆ. ಎಲ್ಲಾ ಹಿಂದೂಗಳು ಯಾರೇ ಆಗಲಿ  ಸೂರ್ಯ ದೇವನನ್ನು ಪ್ರಸನ್ನಗೊಳಿಸವುದರಿಂದ ಉತ್ತಮ ಫಲಗಳು ದೊರೆಯುವುದು.ಚತ ಪೂಜೆಯನ್ನು ಮಾಡುವುದು ಸೂರ್ಯನನ್ನು ಪೂಜಿಸಿದರೆ ವರ್ಷಪೂರ್ತಿ ನಮಗೆಸೂರ್ಯ ದೇವನ ಆಶೀರ್ವಾದವು ದೊರೆಯುವುದು.

ನಮ್ಮ ಹಿಂದೂ ವೇದ ಪುರಾಣಗಳಲ್ಲಿ ಸೂರ್ಯ ದೇವನನ್ನು ಈ ಸಂಪೂರ್ಣ ಜಗತ್ತಿನ ಆತ್ಮವೆಂದು ಹೇಳಲಾಗಿದೆ. ಸೂರ್ಯನಿಂದಲೇ ಈ ಪೃಥ್ವಿಯ ಮೇಲೆ ಜೀವನ ಸಾಗುತ್ತಿರುವುದು.ಹಾಗೆ ಈ ಪೃಥ್ವಿಯ ಮೇಲೆ ಜೀವನ ನಡೆಸುವುದಕ್ಕೆ ಸೂರ್ಯನು ಇರುವುದರಿಂದ ಮಾತ್ರ  ಸಾಧ್ಯ. ಸೂರ್ಯ ದೇವನಿಲ್ಲದೇ ಹೋದರೆ ಈ ಭೂಮಿಯ ಮೇಲೆ ಯಾವ ಜೀವಿಯೂ ಇರಲು ಸಾಧ್ಯವಿಲ್ಲ .

 

 

ಸೂರ್ಯದೇವನ ಪೂಜೆಯನ್ನು ಮೊದಲು ಶುರು ಮಾಡಿದ್ದು ಮಹಾಭಾರತದ  ಕರ್ಣ . ಇವನು ಅನೇಕ ಗಂಟೆಗಳವರೆಗೆ ನೀರಿನಲ್ಲಿ ನಿಂತುಕೊಂಡು ಸೂರ್ಯನಿಗೆ ಅರ್ಘ್ಯವನ್ನು ಸಮರ್ಪಿಸುತ್ತಿದ್ದನು.ಇದನ್ನು ಅರ್ಪಿಸಿದ ನಂತರ ಕರ್ಣನು ದಾನ, ದಕ್ಷಿಣೆಯನ್ನು ಸಹ ಅವಶ್ಯವಾಗಿ ಕೊಡುತ್ತಿದ್ದನು.

ಹೀಗೆ ನೀವು ಚತ ಪೂಜೆಯ ದಿನ ಸೂರ್ಯ ದೇವನಿಗೆ ಹೇಗೆ ಪೂಜೆ ಮಾಡಿದರೆ ಸೂರ್ಯದೇವನು ಪ್ರಸನ್ನನಾಗುವನು ಎಂದು ತಿಳಿದುಕೊಳೋಣ ಬನ್ನಿ ………..

ಸೂರ್ಯದೇವನನ್ನು ಪೂಜೆ ಮಾಡುವುದರಿಂದ ಸೂರ್ಯ  ದೇವನ ಆಶೀರ್ವಾದವೂ ಅವನು ಭಕ್ತರಿಗೆ ದೊರೆಯುವುದು. ಅದರ ಜೊತೆಗೆ ಧನ, ಸಂಪತ್ತು, ಕೆಲಸ, ವ್ಯಾಪಾರ, ಸಂತಾನ, ಅಭಿವೃದ್ಧಿ, ಮನೆ ,ವಾಹನ , ಉತ್ತಮ  ಆರೋಗ್ಯ ಎಲ್ಲವೂ ಸಹ ಪ್ರಾಪ್ತಿಯಾಗುತ್ತದೆ.

ಸಂತಾನ ಭಾಗ್ಯ ಇಲ್ಲದೇ ಇರುವವರಿಗೆ ಮಕ್ಕಳನ್ನು ಕರುಣಿಸುವವನು ಸೂರ್ಯದೇವನು. ನಿಮ್ಮ ಮನೆಯಲ್ಲಿ  ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳಿದ್ದರೆ ಅವುಗಳನ್ನು ಸಹ ಬಗೆಹರಿಸುವನು. ಮನೆಯಲ್ಲಿ ಕೆಲವು ಬಗೆಹರಿಯದಂತಹ  ಸಮಸ್ಯೆಗಳು ಇದ್ದರೆ ಆವು ಸಹ ಬಗೆಹರಿಯುತ್ತವೆ.  ನಿಮಗೆ ವಾಹನ ಖರೀದಿಸಬೇಕು ಎನ್ನುವ ಆಸೆ ಇದ್ದರೆ ಅದು ಸಹ ಬೇಗನೆ ಪೂರ್ಣಗೊಳ್ಳುತ್ತದೆ.

 

ಹಾಗೆಯೇ ನಿಮ್ಮಲ್ಲಿ ಅನೇಕ ವ್ಯಕ್ತಿಗಳು ಸೂರ್ಯದೇವನಿಗೆ ಪ್ರತಿದಿನ ಅರ್ಘ್ಯವನ್ನು ಅರ್ಪಿಸುತ್ತಿರಬಹುದು. ಅರ್ಘ್ಯ ಎಂದರೆ ನೀರು ಸೂರ್ಯ ದೇವನಿಗೆ ಪ್ರತಿದಿನ ಬೆಳಗ್ಗೆ ನೀರನ್ನು ಅರ್ಪಿಸುವುದೇ ಅರ್ಘ್ಯ.

ಆದರೆ ಚತ ಪೂಜೆಯ ದಿನ   ಅರ್ಘ್ಯವನ್ನು  ಅರ್ಪಿಸುವುದರಿಂದ ಬಹಳ ಉತ್ತಮ ಫಲಗಳು ದೊರೆಯುವವು. ನೀವು ಸಹ ಒಂದು ತಾಮ್ರದ ಲೋಟದಿಂದ ಅಥವಾ ತಾಮ್ರದ ಚೊಂಬಿನಿಂದ ಸೂರ್ಯದೇವನಿಗೆ ನೀರನ್ನು ಅರ್ಪಿಸಿ.

ಆದರೆ ಬರೀ ನೀರನ್ನು ಮಾತ್ರ  ಯಾವುದೇ ಕಾರಣಕ್ಕೂ  ಅರ್ಪಿಸಬೇಡಿ. ಅದರ ಜೊತೆಗೆ ಸಿಂಧೂರವನ್ನು ಅಂದರೆ ಕುಂಕುಮವನ್ನು ಮಿಶ್ರಣ ಮಾಡಿ ಅರ್ಪಿಸಿ.

ಅದರ ಜೊತೆಗೆ ಅಕ್ಷತೆ ಅಂದರೆ ಅಕ್ಕಿಯನ್ನು ಸಹ ನೀವು ಬೆರೆಸಿ ಸಮರ್ಪಿಸಬಹುದು.

ಕೆಂಪು ಬಣ್ಣದ ಹೂವನ್ನು ಅರ್ಪಿಸಿ ಅಥವಾ ಕೆಂಪು ಬಣ್ಣದ ಹೂವಿನ ದಳಗಳನ್ನು ಸಹ ನೀರಿನಲ್ಲಿ ಹಾಕಿ ಅರ್ಪಿಸಬಹುದು. ಹೀಗೆ ಅರ್ಪಿಸಿದರೂ ಸಹ ತುಂಬಾ ಒಳ್ಳೆಯದು. ಇದಕ್ಕಿಂತ ಉತ್ತಮವಾದ ಉಪಾಯ ಇನ್ನೊಂದಿಲ್ಲ.

 

 

ಇದರ ಜೊತೆಗೆ ನೀವು ನೀರಿನಲ್ಲಿ ಬೆಲ್ಲವನ್ನು ಸಹ ಮಿಶ್ರಣ ಮಾಡಿ ಸೂರ್ಯನಿಗೆ ಸಮರ್ಪಿಸಬಹುದು.

ನೀವು ಅರ್ಘ್ಯವನ್ನು ಅರ್ಪಿಸುವುದಕ್ಕೆ ಮುನ್ನ ಚಪ್ಪಲಿಯನ್ನು ದೂರದಲ್ಲೇ ಬಿಟ್ಟು ಬಿಡಿ. ನದಿ, ಕೆರೆ ,ಬಾವಿಯ ಬಳಿ ನಿಂತು ಅರ್ಘ್ಯವನ್ನು  ಅರ್ಪಿಸಬಹುದು. ನಂತರ ಹಾಗೆ ಧೂಪ, ದೀಪಗಳಿಂದಲೂ ಸಹ ಪೂಜೆ ಮಾಡಿ ಸೂರ್ಯದೇವನನ್ನು ಪ್ರಸನ್ನಗೊಳಿಸಬಹುದು.

 

 

ನಂತರ ದಾನ ದಕ್ಷಿಣೆಯನ್ನು ನಿಮ್ಮ ಯೋಗ್ಯತೆಗೆ ತಕ್ಕಂತೆ ಮಾಡಬಹುದು . ಅಂದರೆ ನಿಮ್ಮ ಆಸೆಯ ಅನುಸಾರ 11,21, ಮತ್ತು 101 ರೂಪಾಯಿಗಳನ್ನು ಅಥವಾ ಭೋಜನ, ಫಲಹಾರವನ್ನು ಸಹ ಬಡವರಿಗೆ ದಾನ ಮಾಡಬಹುದು. ಇದರಿಂದ ಸೂರ್ಯನು ಪ್ರಸನ್ನನಾಗಿ ಸೂರ್ಯನ ಆಶೀರ್ವಾದವೂ ವರ್ಷಪೂರ್ತಿ ನಿಮ್ಮ ಮೇಲೆ ಇರುವುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top