fbpx
ದೇವರು

ದ್ವಾಪರ ಯುಗ ಕೊನೆಗೊಳ್ಳುವುದಕ್ಕೆ ಗಾಂಧಾರಿಯ “ಕೃಷ್ಣನಿಗೂ ಸಾವು ಬರಲಿ” ಅನ್ನೋ ಶಾಪವೇ ಕಾರಣ !

ದ್ವಾಪರ ಯುಗ ಕೊನೆಗೊಳ್ಳುವುದಕ್ಕೆ ಗಾಂಧಾರಿಯ ಶಾಪವೇ ಕಾರಣವಾಗುತ್ತದೆ .

 

ಮಹಾಭಾರತದ ಅಂತ್ಯದ ಕೊನೆಯಲ್ಲಿ ಕೃಷ್ಣ ಮತ್ತು ಪಾಂಡವರಿಗೆ ಏನು ಆಗುತ್ತದೆ ಎಂದು ತಿಳಿದರೆ ಆಶ್ಚರ್ಯ ಪಡುತ್ತೀರಿ….!ಕುರುಕ್ಷೇತ್ರ ಯುದ್ಧವೂ ಒಂದು ಘೋರ ಯುದ್ಧವಾಗಿತ್ತು.  ಮಹಾಭಾರತದಲ್ಲಿ ನಾವು ಯಾವ ರೀತಿ ಜೀವನ ನಡೆಸಬೇಕು ಅನ್ನುವುದಕ್ಕೆ ಉತ್ತಮ ಉದಾಹರಣೆ ಎಂದರೆ ಕುರುಕ್ಷೇತ್ರ ಯುದ್ಧ.

 

 ಆದ್ದರಿಂದ ಬನ್ನಿ ಮಹಾಭಾರತದ ಬಗ್ಗೆ ಇನ್ನಷ್ಟು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳೋಣ ……

 

 

1.ಕೃಷ್ಣನಿಗೂ ಸಾವು ಬರಲಿ ಅಂತ ಗಾಂಧಾರಿ ಶಾಪವನ್ನು ಕೊಡುತ್ತಾಳೆ .

 

 

ತನ್ನ ಮಕ್ಕಳನ್ನೆಲ್ಲ ಕಳೆದುಕೊಂಡ ದುಃಖ ಪಡುತ್ತಿರುವ ಗಾಂಧಾರಿಯು ಇದಕ್ಕೆ ಕೃಷ್ಣನೇ ಕಾರಣ ಎಂದು ತಿಳಿದುಕೊಂಡು ಹೀಗೆ ಶಾಪವನ್ನು ನೀಡುತ್ತಾಳೆ. ಕುರುಕ್ಷೇತ್ರದಲ್ಲಿ ದಿಗ್ವಿಜಯ ಸಾಧಿಸಿದ ಪಾಂಡವರನ್ನು ಹಸ್ತಿನಾಪುರದ ರಾಜರು ಎಂದು ಘೋಷಿಸಲಾಗುತ್ತದೆ. ಅವರಲ್ಲಿ ಹಿರಿಯವನಾದ ಧರ್ಮರಾಯನಿಗೆ ಪಟ್ಟಾಭಿಷೇಕವನ್ನು ಸಹ ಮಾಡಲಾಗುತ್ತದೆ.

 

 

2.ಗಾಂಧಾರಿಯ ಈ ಶಾಪದಿಂದ ಕೃಷ್ಣನ ಇಡೀ ಯಾದವ ಕುಲವೇ ಸರ್ವನಾಶವಾಗಿ ಹೋಗುತ್ತದೆ .

 

 

ಕುರುಕ್ಷೇತ್ರ ಯುದ್ಧ ಕಳೆದ 36 ವರ್ಷಗಳ ಕಾಲ ಪಾಂಡವರು ಹಸ್ತಿನಾಪುರ ರಾಜ್ಯವನ್ನು ಆಳುತ್ತಾರೆ. ಪಾಂಡವರು ರಾಜ್ಯಭಾರದಲ್ಲಿ ತೊಡಗಿದಂತೆಯೇ ಗಾಂಧಾರಿಯ ಶಾಪದ ಪರಿಣಾಮವಾಗಿ ಯಾದವ ಕುಲವು ಸಂಪೂರ್ಣವಾಗಿ ಹಾಳಾಗುತ್ತದೆ.

 

3.ಕೃಷ್ಣನಿಗೆ ಬೇಟೆಗಾರರು ಬಾಣವನ್ನು ಹೊಡೆಯುತ್ತಾನೆ .

 

 

ಕೃಷ್ಣನಿಗೆ ಒಬ್ಬ ಬೇಟೆಗಾರರು ದೂರದಿಂದ ನೋಡಿದಾಗ ಜಿಂಕೆಯ ಪ್ರಾಣಿಯ ರೀತಿಯಲ್ಲಿ ಕಾಣಿಸಿದಾಗ. ಜಿಂಕೆ ಎಂದು ತಿಳಿದು ಬಾಣವನ್ನು ಹೊಡೆಯುತ್ತಾನೆ. ಆ ಬಾಣದಿಂದಲೇ ಕೃಷ್ಣನು ಸತ್ತು ವಿಷ್ಣುವಿನ ವಿಗ್ರಹದಲ್ಲಿ ತಲ್ಲೀನನಾಗಿ ಹೋಗುತ್ತಾನೆ. ಇದಾದ ಮೇಲೆ ನಿನ್ನ ಹಾಗೂ ನಿನ್ನ ಸಹೋದರರ ಜೀವನದ ಉದ್ದೇಶ ಮುಗಿಯಿತು ಎಂದು ವೇದವ್ಯಾಸರು ಅರ್ಜುನನಿಗೆ ಹೇಳುತ್ತಾರೆ.

 

4.ಪರೀಕ್ಷಿತನಿಗೆ ಪಟ್ಟಾಭಿಷೇಕ ಮಾಡಿ ಪಾಂಡವರು ಮತ್ತು ದ್ರೌಪದಿಯೂ ಹಿಮಾಲಯಕ್ಕೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಾರೆ .

 

 

ಪಾಂಡವರು ಮತ್ತು ದ್ರೌಪದಿ ಎಲ್ಲರೂ ಸೇರಿ ಹಿಮಾಲಯಕ್ಕೆ ಹೋಗುವಾಗ ಯಮದೇವನ ನಾಯಿಯ ರೂಪದಲ್ಲಿ ಬಂದು ಅವರ ಹಿಂದೆಯೇ ಬರುತ್ತಾನೆ. ದ್ವಾಪರ ಯುಗ ಮುಗಿದು ಕಲಿಯುಗ ಶುರುವಾದಾಗ… ಪಾಂಡವರು ದ್ರೌಪದಿಯ ಜೊತೆಗೆ ಹಿಮಾಲಯಕ್ಕೆ ಹೊರಡುತ್ತಾರೆ. ಯಮಧರ್ಮನ ಒಂದು ನಾಯಿಯ ರೂಪದಲ್ಲಿ ಅವರ ಹಿಂದೆಯೇ ಹೋಗುತ್ತಾನೆ.

 

5.ಹಿಮಾಲಯದ ಬೆಟ್ಟವನ್ನು ಹತ್ತುತ್ತಿರುವಾಗ ಧರ್ಮರಾಯ ಒಬ್ಬನನ್ನು ಬಿಟ್ಟು ಬೇರೆ ಎಲ್ಲರೂ ಸಹ ಮಾರ್ಗದಲ್ಲಿಯೇ ಸತ್ತುಹೋಗುತ್ತಾರೆ.

 

 

ಮೊದಲಿಗೆ ದ್ರೌಪದಿ ಆಮೇಲೆ ಭೀಮ, ನಕುಲ ,ಸಹದೇವ, ಅರ್ಜುನ ಹೀಗೆ ಎಲ್ಲರೂ ಒಬ್ಬರಾದ ನಂತರ ಇನ್ನೊಬ್ಬರು ಅವರ ಆಸೆಗಳು ಮತ್ತು  ಅಹಂಕಾರಗಳಿಂದಾಗಿ ಸತ್ತುಹೋಗುತ್ತಾರೆ. ಯಾವುದೇ ಅಹಂಕಾರ ಆಸೆಗಳಿಲ್ಲದೆ ಇದ್ದ ಧರ್ಮರಾಯ ನಾಯಿಯ ಜೊತೆಗೆ ಹಿಮಾಲಯದ ತುತ್ತತುದಿಯಲ್ಲಿದ್ದ ಸ್ವರ್ಗದ ಬಾಗಿಲಿಗೆ ಹೋಗುತ್ತಾನೆ .

6.ಧರ್ಮರಾಯನನ್ನು ಮೊದಲು ನರಕಕ್ಕೆ ಕರೆದುಕೊಂಡು ಹೋಗುತ್ತಾನೆ ಯಮದೇವ .

 

 

ನರಕದ ಬಾಗಿಲಿನಲ್ಲಿ ಯಮ ಅಂದರೆ ನಾಯಿ ತನ್ನ ನಿಜರೂಪವನ್ನು ತೋರಿಸಿ ಮೊದಲಿಗೆ ಧರ್ಮರಾಯನನ್ನು ನರಕಕ್ಕೆ ಕರೆದುಕೊಂಡು ಹೋಗುತ್ತಾರೆ. ಆದರೆ ಸ್ವರ್ಗದ ರಾಜ ಇಂದ್ರದೇವ ಯುಧಿಷ್ಠಿರನನ್ನು ಪುನಃ ವಾಪಸ್ ಸ್ವರ್ಗಕ್ಕೆ  ಕರೆದುಕೊಂಡು ಹೋಗಿ ಅವನ ಹೆಂಡತಿ ಮತ್ತು ತಮ್ಮಂದಿರು ಇಲ್ಲಿಯೇ ಇದ್ದಾರೆ  ಎಂದು ತೋರಿಸುತ್ತಾನೆ .ಅಲ್ಲಿ ಎಲ್ಲರೂ ಸಹ ಮತ್ತೆ ಪುನಃ ಒಂದಾಗುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top