fbpx
ದೇವರು

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ಈ ದೇವಸ್ಥಾನದಲ್ಲಿ ಹನುಮಂತನ ಬಾಲಕ್ಕೆ ಬೆಣ್ಣೆ ಹಚ್ಚಿ ಪೂಜೆ ಮಾಡುತ್ತಾರೆ !

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ಹನುಮಂತನ ಬಾಲಕ್ಕೆ ಬೆಣ್ಣೆ ಹಚ್ಚುವ ದೇವಸ್ಥಾನ .

 

ಹನುಮಂತನ ಬಾಲಕ್ಕೆ ಆಂಜನೇಯ ಸ್ವಾಮಿಯ ಭಕ್ತರು ಏಕೆ ಬೆಣ್ಣೆಯನ್ನು ಹಚ್ಚುತ್ತಾ ಪೂಜಿಸುತ್ತಾರೆ ಎಂದು ತಿಳಿದುಕೊಳ್ಳೋಣ ಬನ್ನಿ ….

 

 

ರಾಮಾಯಣದಲ್ಲಿ ರಾವಣನಿಂದ ಅಪಹರಿಸಿದ್ದ ಸೀತೆಯನ್ನು ಕಂಡು ಹಿಡಿಯುವುದಕ್ಕೆ ರಾಮನು ಹನುಮಂತನನ್ನು ಕಳುಹಿಸುತ್ತಾನೆ. ಇದರ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಸೀತೆಯ ಅನ್ವೇಷಣೆಯ ಭಾಗವಾಗಿ ಲಂಕೆಗೆ ಹನುಮಂತನು ಹೋದಾಗ ಆಕೆಯನ್ನು ಕಂಡು ಹಿಡಿಯುತ್ತಾನೆ .

ಹನುಮಂತನನ್ನು ನೋಡಿದ ಲಂಕೆ ಯಲ್ಲಿರುವ ರಾಕ್ಷಸರು ರಾವಣನ ಆದೇಶದ ಮೇರೆಗೆ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚುತ್ತಾರೆ. ಆದರೆ ಹನುಮಂತನು ಸುಮ್ಮನೆ ಇರುತ್ತಾನೆಯೇ ಆ ಬಾಲದ ಬೆಂಕಿಯಿಂದಲೇ ಇಡೀ ಲಂಕೆಗೆ ಬೆಂಕಿಯನ್ನು ಹಚ್ಚುತ್ತಾನೆ. ಆಗ ಹೆಚ್ಚಿನ ಲಂಕೆಯ ಭಾಗವು ಸುಟ್ಟು ಭಸ್ಮವಾಗುತ್ತದೆ ಆದರೆ ಅದೆಷ್ಟೋ ಹೊತ್ತಿಗಾಗಲೇ ಹನುಮಂತನ ಬಾಲ ಬಹಳಷ್ಟು ಸುಟ್ಟು ಹೋಗಿರುತ್ತದೆ ಮತ್ತೆ ಹಾಗೆ ಸುಟ್ಟುಹೋದ ಬಾಲಕ್ಕೆ ಏನೋ ಒಂದು ಉಪಶಮನ ಮಾಡಬೇಕು ಅಲ್ಲವೇ ಅದಕ್ಕೆ ಈ ರೀತಿಯಾಗಿ ಹನುಮಂತನ ಭಕ್ತರು ಸುಟ್ಟ  ಗಾಯ ವಾಸಿಯಾಗಲಿ ಎಂದು ಬಾಲಕ್ಕೆ ಬೆಣ್ಣೆಯನ್ನು ಈಗಲೂ ಸಹ ಹಚ್ಚುತ್ತಿದ್ದಾರೆ.

 

 

ತಮಿಳುನಾಡಿನಲ್ಲಿರುವ ಕನ್ಯಾಕುಮಾರಿ ಜಿಲ್ಲೆಯ ಸುಚೀಂದ್ರಂ ಎಂಬ ಈ ಕ್ಷೇತ್ರದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಸೇರಿ ಒಂದೇ ಲಿಂಗ ರೂಪದಲ್ಲಿ ಉದ್ಭವಿಸಿದ್ದಾರೆ ಎಂದು ಐತಿಹಾಸಿಕ ಪುರಾಣಗಳು ಆಧಾರಗಳ ಸಹಿತ ಇಲ್ಲಿ ಕಾಣಿಸುತ್ತವೆ.

ಹೀಗೆ ಈ ಕ್ಷೇತ್ರ  ತುಂಬಾ ಪ್ರಖ್ಯಾತಿಯನ್ನು ಪಡೆದ ಪ್ರದೇಶವಾಗಿ ಭಕ್ತರಿಂದ ಪೂಜಿಸಲ್ಪಡುತ್ತಿದೆ. ಎಷ್ಟೋ ಜನರು ಈ ಕ್ಷೇತ್ರಕ್ಕೆ ಬಂದು ದೇವರನ್ನು ದರ್ಶನ ಮಾಡಿಕೊಂಡು ಹೋಗುತ್ತಿದ್ದಾರೆ.

 

 

ಈ ಕ್ಷೇತ್ರದಲ್ಲಿ ಹನುಮಂತನ ಹದಿನೆಂಟು ಅಡಿ ಎತ್ತರದ ವಿಗ್ರಹವಿದೆ .ಇಲ್ಲಿ ವಿಶೇಷ ಪೂಜೆಗಳಿಂದ ಈ ವಿಗ್ರಹವನ್ನು ಪೂಜಿಸಲಾಗುತ್ತದೆ .ಆದರೆ ಈ ಹನುಮಂತನ ವಿಗ್ರಹಕ್ಕೆ ಒಂದು ಪ್ರತ್ಯೇಕತೆ ಇದೆ. ಅದೇನೆಂದರೆ ಲಂಕೆಯ ದಹನದಲ್ಲಿ ಹನುಮಂತನ ಬಾಲ ಬಹಳ ಸುಟ್ಟು ಹೋಗಿತ್ತು ಎಂದು ಹೇಳುತ್ತಿದ್ದೇವೆ. ಅಲ್ಲವೇ ?  ಸುಟ್ಟು ಆ ಬಾಲಕ್ಕೆ ವಾಸಿಯಾಗಲಿ , ಗುಣವಾಗಲಿ ಎಂದು ಬಾಲಕ್ಕೆ ಬೆಣ್ಣೆಯನ್ನು  ಹಚ್ಚುತ್ತಿದ್ದಾರಂತೆ. ಈ ರೀತಿಯಾಗಿ   ಸುಚೇಂದ್ರ ಕ್ಷೇತ್ರದಲ್ಲಿರುವ ಹನುಮಂತನ ವಿಗ್ರಹದ ಬಾಲಕ್ಕೆ ಭಕ್ತರೆಲ್ಲರೂ ಸಹ ಬೆಣ್ಣೆಯನ್ನು ಹಚ್ಚುತ್ತಿದ್ದಾರೆ.

 

 

ಹಾಗೆ ಹಚ್ಚಿದರೆ ಆತನಿಗೆ ಬಾಲಕ್ಕೆ ಆಗಿರುವ ಗಾಯವೂ ವಾಸಿಯಾಗುತ್ತದೆ ಎಂದು ಭಕ್ತರ ನಂಬಿಕೆಯಾಗಿದೆ. ಅಷ್ಟೇ ಅಲ್ಲ ಹಾಗೆ ಮಾಡುವುದರಿಂದ ಸ್ವಾಮಿಯು ಆಯಸ್ಸು, ಆರೋಗ್ಯಗಳನ್ನು, ಅಷ್ಟ ಐಶ್ವರ್ಯಗಳನ್ನು ಸಹ ನೀಡುತ್ತಾನೆಂದು  ಇಲ್ಲಿಗೆ ಬಂದ ಭಕ್ತರು ಯಾರೇ ಆಗಲಿ ಸ್ವಾಮಿಯ ಬಾಲಕ್ಕೆ ಬೆಣ್ಣೆ ಹಚ್ಚದೆ ಮರಳುವುದಿಲ್ಲ .

ಇನ್ನೊಂದು ವಿಷಯವೇನೆಂದರೆ ಹಾಗೆ ಆಂಜನೇಯ ಸ್ವಾಮಿಯ ಬಾಲಕ್ಕೆ ಬೆಣ್ಣೆ ಹಚ್ಚುವ ಸಂಪ್ರದಾಯ ಈಗ ಬಂದಿರುವುದಲ್ಲ. ಇದು ಅನೇಕ ಪುರಾಣ ಯುಗಗಳಿಂದಲೂ ಸಹ ಈ ಸಂಪ್ರದಾಯ ನಡೆದುಕೊಂಡು  ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top