fbpx
ರಾಜಕೀಯ

ಭಾರಿ ವಿವಾದವನ್ನು ಹುಟ್ಟು ಹಾಕುತ್ತಿದೆ ಆರೆಸ್ಸೆಸ್,ಬಿಜೆಪಿ,ಮೋದಿ ವಿರುದ್ಧ ನಟಿ ರಮ್ಯಾ ಮಾಡಿರುವ ಟ್ವೀಟ್: ಆ ಟ್ವೀಟ್’ನಲ್ಲೇನಿದೆ..

ಭಾರಿ ವಿವಾದವನ್ನು ಹುಟ್ಟು ಹಾಕುತ್ತಿದೆ ಆರೆಸ್ಸೆಸ್,ಬಿಜೆಪಿ,ಮೋದಿ ವಿರುದ್ಧ ನಟಿ ರಮ್ಯಾ ಮಾಡಿರುವ ಟ್ವೀಟ್: ಆ ಟ್ವೀಟ್’ನಲ್ಲೇನಿದೆ..

 

 

 

ಸದಾ ಒಂದಿಲ್ಲೊಂದು ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುವ ಮಾಜಿ ಸಂಸದೆ, ಸ್ಯಾಂಡಲ್ ವುಡ್ ಕ್ವೀನ್ ಹಾಗೂ ಎಐಸಿಸಿಯ ಸಾಮಾಜಿಕ ಜಾಲತಾಣ ಮೇಲ್ವಿಚಾರಕಿ ರಮ್ಯಾ ತಮ್ಮ ಟ್ವಿಟರ್ ಖಾತೆಯಲ್ಲಿ ಕೇಂದ್ರ ಸರ್ಕಾರ,ಆರೆಸ್ಸೆಸ್ ಹಾಗೂ ಬಿಜೆಪಿ ಕುರಿತು ಅವಹೇಳನಕಾರಿ ಪೋಸ್ಟ್ ವೊಂದನ್ನು ಹಾಕಿದ್ದಾರೆ.. ಅವರ ಆ ಟ್ವೀಟ್ ಈಗ ಭಾರಿ ವಿವಾದವನ್ನು ಹುಟ್ಟುಹಾಕುತ್ತಿದೆ..

 

 

 

 

 

ವಾಟ್ಸ್​ಆಪ್ ಗ್ರೂಪ್ ರಚಿಸುವ ಶೈಲಿಯಲ್ಲಿ ಇರುವ ವಿಡಿಯೋ ತುಣಕಿನಲ್ಲಿ ಗಾಂಧೀಜಿಯನ್ನು ಸಾವರ್ಕರ್ ರಿಮೂವ್ ಮಾಡಿದರು, ಆಡ್ವಾಣಿ ಗಲಭೆ ಹಾಗೂ ಬಾಂಬ್ ಸ್ಫೋಟ, ಜಾತೀಯತೆಗಳನ್ನ ಸೇರಿಸಿದರು, ಅಡ್ವಾಣಿ ಬಾಬ್ರಿ ಮಸೀದಿಯನ್ನು ತೆಗೆದುಹಾಕಿದರು,, ಅಡ್ವಾಣಿ ಸೌಹಾರ್ದತೆಯನ್ನು ತೆಗೆದರು.. ಮುಂದೆ ಓದಿ.

 

 

 

 

ಆ ಬಳಿಕ ಬಿಜೆಪಿಯೇ ವಾಜಪೇಯಿಯನ್ನು ತೆಗೆದುಹಾಕಿತು ನಂತರ ಬಂದ ಪ್ರಧಾನಿ ಮೋದಿ ಗಲಭೆ,ಕಳ್ಳತನ, ದೀನ-ದಲಿತರ ಮೇಲೆ ದಾಳಿ, ಭ್ರಷ್ಟಾಚಾರ, ಕೋಮುವಾದ, ಹಿಂದುತ್ವ, ಸುಳ್ಳು,ಭಯ ದ್ವೇಷ ಸೇರಿಸಿದ್ದಾರೆ,, ಮೋದಿ ಸಂವಿಧಾನವನ್ನು ತೆಗೆದುಹಾಕಿದ್ದರೆ, ವಿಚಾರವಾದವನ್ನು, ಚರ್ಚೆಗಳನ್ನ, ಖಾಸಗಿತನವನ್ನ ತೆಗೆದುಹಾಕಿ ದೇಶದ ಅಭಿವೃದ್ಧಿಯಿಂದ ದೂರಮಾಡಿದ್ದಾರೆ ಎನ್ನುವ ಸಾಕಷ್ಟು ಅಂಶಗಳು ಈ ವಿವಾದಿತ ಟ್ವೀಟ್​ನಲ್ಲಿದೆ..

 

ರಮ್ಯರವರ ಈ ವಿವಾದಿತ ಟ್ವೀಟ್ ನ ವಿಡಿಯೋವನ್ನು ಇಲ್ಲಿ ನೋಡಿ..!

source:   twitter.com/divyaspandana

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top