fbpx
ಉಪಯುಕ್ತ ಮಾಹಿತಿ

ಮಾಡಿದ ತಪ್ಪಿಗೆ ಜೈನರಲ್ಲಿ ಕ್ಷಮೆ ಕೇಳಿದ ರಾಘವೇಂದ್ರ ಹುಣಸೂರು: ಸಾಮಾನ್ಯ ಕನ್ನಡಿಗನಿಗೆ ಸಿಕ್ಕ ಜಯ..!

ಮಾಡಿದ ತಪ್ಪಿಗೆ ಜೈನರಲ್ಲಿ ಕ್ಷಮೆ ಕೇಳಿದ ರಾಘವೇಂದ್ರ ಹುಣಸೂರು: ಸಾಮಾನ್ಯ ಕನ್ನಡಿಗನಿಗೆ ಸಿಕ್ಕ ಜಯ..!

 

 

ಝೀ ಕನ್ನಡ ಚಾನೆಲ್ ನ ಬ್ಯುಸಿನೆಸ್ ಹೆಡ್ ಆಗಿರುವ ರಾಘವೇಂದ್ರ ಹುಣಸೂರು ರವರು ಜೈನ ಸಮುದಾಯದವರ ಬಳಿ ಕ್ಷಮೆಯನ್ನು ಕೇಳಿದ್ದಾರೆ.. ಅಷ್ಟಕ್ಕೂ ರಾಘವೇಂದ್ರ ಹುಣಸೂರು ರವರು ಜೈನ ಸಮುದಾಯದವರ ಬಳಿ ಕ್ಷಮೆ ಯಾಕೆ ಅವರು ಮಾಡಿದ ತಪ್ಪೇನು ಅಂತೀರಾ.. ಮುಂದೆ ಓದಿ.

 

 

ಜೀ ಕನ್ನಡ ವಾಹಿನಿಯ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟವಾಗಿದ್ದ ಗೋಮ್ಮಟೇಶ್ವರ ದೇವರಿಗೆ ಅವಹೇಳನಕಾರಿ ಪ್ರಹಸನದ ಬಗ್ಗೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥರು ರಾಘವೇಂದ್ರ ಹುಣಸೂರು ಜಿಎ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ..ಅಲ್ಲದೆ ಮುಂದೆ ಈ ರೀತಿ ಆಗದ ಹಾಗೆ ಎಚ್ಚರವಹಿಸುವುದಾಗಿ ಹೇಳಿದ್ದಾರೆ.

 

 

 

  ಇದನ್ನೂ ಓದಿ..        

ಶಿವರಾಜ್ ಕೆ ಆರ್ ಪೇಟೆ ಮತ್ತು ಸಂಜು ಬಸಯ್ಯ ವಿರುದ್ಧ ‘ಸಾಮಾನ್ಯಕನ್ನಡಿಗ’ FIR ದಾಖಲಿಸಲು ನಿರ್ಧರಿಸಿದ್ದಕ್ಕೆ ಕೊಟ್ಟ ಕಾರಣಗಳು!

 

 

ಝೀ ಕನ್ನಡ ಚಾನೆಲ್’ನಲ್ಲಿ ಪ್ರಸಾರವಾಗುವ ‘ಕಿಲಾಡಿ ಕುಟುಂಬ’ ಎಂಬ ಕಾರ್ಯಕ್ರಮದ ಪ್ರಚಾರಕ್ಕೆಂದು ಸಿದ್ದಪಡಿಸಿದ್ದ 19 ಸೆಕೆಂಡುಗಳ ವಿಡಿಯೋ ತುಣಿಕಿನಲ್ಲಿ ಕರ್ನಾಟದ ಐತಿಹಾಸಿಕ ಹೆಮ್ಮೆಯಾಗಿರುವ ಶ್ರೀ ಶ್ರಾವಣಬೆಳಗೊಳದ ಗೊಮ್ಮಟೇಶ್ವರ ಸ್ವಾಮಿಗೆ ಹೀನಾಯವಾಗಿ ಅವಮಾನ ಮಾಡಲಾಗಿದೆ. ಈ ವಿಡಿಯೋವನ್ನು ಝೀ ಕನ್ನಡ ಚಾನೆಲ್’ನ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿರುತ್ತಾರೆ. ಈ ವಿಡಿಯೋಯಿಂದ ಕನ್ನಡಿಗರ ಭಾವನೆಗೆ ಧಕ್ಕೆಯುಂಟಾಗಿರುತ್ತದೆ. ಎಂದು ಜೈನ ಸಮುದಾಯದವರು ಮತ್ತು ಸಾಮಾನ್ಯ ಕನ್ನಡಿಗ ಪ್ರತಿಷ್ಠಾನ ಟ್ರಸ್ಟ್ ವಿರೋಧಿಸಿದ್ದವು.

 

  ಇದನ್ನೂ ಓದಿ..         ಕರ್ನಾಟಕದ ಹೆಮ್ಮೆಯ ಕೀರ್ತಿ ಕಿರೀಟವಾದ ಗೊಮ್ಮಟೇಶ್ವರನಿಗೆ ಅವಮಾನ ಮಾಡಿದ ಝೀ ಕನ್ನಡ!

 

  ಇದನ್ನೂ ಓದಿ..        ಗೊಮ್ಮಟೇಶ್ವರನಿಗೆ ಅವಮಾನ ಮಾಡಿದ್ದಕ್ಕೆ ಕ್ಷಮೆ ಕೇಳೋದಿಲ್ಲ ಎಂದು ಅಧಿಕೃತವಾಗಿ ಹೇಳಿದ ದುರಹಂಕಾರಿ ಜೀ ಕನ್ನಡ.

 

ಝೀ ಕನ್ನಡ ವಾಹಿನಿಯವರು ಗೊಮ್ಮಟೇಶ್ವರನಿಗೆ ಅವಮಾನಿಸಿದ್ದ ವಿಡಿಯೋವನ್ನು ಇಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top