fbpx
ಸಣ್ಣ ಕಥೆ

ನೀತಿಕಥೆ : ದೇವರಿಗೆ ಮಾಡುವ ಸೇವೆ ಎಂದಿಗೂ ಸಹ ವ್ಯರ್ಥವಾಗುವುದಿಲ್ಲ 

ನೀತಿಕಥೆ : ದೇವರಿಗೆ ಮಾಡುವ ಸೇವೆ ಎಂದಿಗೂ ಸಹ ವ್ಯರ್ಥವಾಗುವುದಿಲ್ಲ 

 

ಋಷಿ ಮುನಿಗಳ ಮಾತು.

 

 

ಒಂದು ಊರಿನಲ್ಲಿ ಒಬ್ಬ ಜೈನ ಮುನಿಗಳು ಪಾದಯಾತ್ರೆ ಮಾಡುವ ಸಮಯದಲ್ಲಿ ಒಂದು ದೊಡ್ಡ ಗ್ರಾಮಕ್ಕೆ ಬಂದರು. ಅಲ್ಲಿ ಜೈನ ಶ್ರಾವಕರು ಅವರನ್ನು ಉಪಚರಿಸಿದರು. ನಂತರ ಆ ಗ್ರಾಮದ ಜನರ ಒತ್ತಾಯದ ಮೇರೆಗೆ ಅವರು ಪ್ರವಚನ ನೀಡಿದರು.

ಪ್ರವಚನದಲ್ಲಿ ಜೈನ ಮುನಿಯು ದಿನಾಲೂ ಬಸದಿಯ ಬಳಿ ಹೋಗಿ ಅಕ್ಷತೆಯನ್ನು ಇಟ್ಟು ಭಗವಂತನನ್ನು ಸ್ಮರಿಸಬೇಕು ಎಂದು ಹೇಳಿದರು.

ಆಗ ಅಲ್ಲಿ ಜನರ ಮಧ್ಯೆ ಕುಳಿತಿದ್ದ ಒಬ್ಬ ವ್ಯಕ್ತಿ ಎದ್ದು ನಿಂತು ದಿನಾಲು ಒಂದು ಮುಷ್ಠಿ ಅಕ್ಷತೆ ಎಲ್ಲಿಂದ  ತರೋದು. ಬೇಕಾದರೆ ನಾವು ಹೋಗಿ ಕೈಮುಗಿದು ಬರುತ್ತೇವೆ ಅಷ್ಟೇ ಎಂದ. ಆಗ ಜೈನ ಮುನಿಗಳು ಅಕ್ಷತೆ ಇಲ್ಲದೇ ಹೋದರೆ ಒಂದು ಮುಷ್ಟಿ ಮಣ್ಣನ್ನು  ತೆಗೆದುಕೊಂಡು ಹೋಗಿ ಬಸದಿಯ ಹಿಂದೆ ಹಾಕು ಎಂದರು.

ಆಗ ಆತ ಓಹೋ ಇದನ್ನು ಬೇಕಾದರೆ ಮಾಡುತ್ತೇನೆ ಎಂದು ಹೇಳಿದ. ಆಗ ಜೈನಮುನಿಗಳು ನಾವು ಪಾದಯಾತ್ರೆ ಮುಗಿಸಿಕೊಂಡು ಮತ್ತೆ ಪುನಃ ಇದೇ ಮಾರ್ಗವಾಗಿ ಬರುತ್ತೇವೆ ಎಂದು ಹೇಳಿದರು .

ಅಗ ನೀನು ನಿನ್ನ ಮಣ್ಣಿನ ರಾಶಿಯನ್ನು ನಮಗೆ ತೋರಿಸು ಎಂದರು. ಈ ಮಾತಿಗೆ ಒಪ್ಪಿಕೊಂಡ ವ್ಯಕ್ತಿಯು ದಿನಾಲು ಒಂದು ಮುಷ್ಟಿ ಮಣ್ಣನ್ನು ತೆಗೆದುಕೊಂಡು ಹೋಗಿ ಬಸದಿಯ ಹಿಂದೆ ಹಾಕಿ ಭಗವಂತನಿಗೆ ನಮಸ್ಕರಿಸಿ ಹೋಗುತ್ತಿದ್ದ.

ಹಲವಾರು ದಿನಗಳು ಕಳೆದ ನಂತರ ಆ ಜೈನಮುನಿಗಳು ಪುನಃ ಆ ಗ್ರಾಮಕ್ಕೆ ಬಂದರು. ಆಗ ಆ ವ್ಯಕ್ತಿಯನ್ನು ಕರೆಸಿ ನಿನ್ನ ಮಣ್ಣಿನ ರಾಶಿಯನ್ನು ತೋರಿಸು ಎಂದರು. ಆಗ ಆ ವ್ಯಕ್ತಿ ನೋಡಿ ಇದೇ ನನ್ನ ಮಣ್ಣಿನ ರಾಶಿ ಎಂದು ಕೈ ಮುಂದೆ ಮಾಡಿ ತೋರಿಸಿದ.

ನಂತರ ಮುನಿಗಳು ನೀನು ಆ ಮಣ್ಣನ್ನು ಎಲ್ಲಿಂದ ತಂದಿರುವೆ ಆ ಜಾಗವನ್ನು ತೋರಿಸು ಎಂದು ಹೇಳಿದರು. ಅದಕ್ಕೆ ಆ ವ್ಯಕ್ತಿ ಮುನಿಗಳನ್ನು ಕರೆದುಕೊಂಡು ಹೋಗಿ ಮಣ್ಣು ತಂದ ಸ್ಥಳವನ್ನು ತೋರಿಸಿದ.

ಅಲ್ಲಿ ಯಾವ ಬದಲಾವಣೆಯೂ ಇರಲಿಲ್ಲ. ಆಗ ಮುನಿಗಳು ಹೇಳಿದರು ಬಸದಿಯಲ್ಲಿ ಭಾರೀ ಗಾತ್ರದ ಮಣ್ಣಿನ ರಾಶಿ ಇದೆ. ಆದರೆ ಇಲ್ಲಿ ಯಾಕೆ ಈ ಸ್ಥಳದಲ್ಲಿ ಯಾವುದೇ ಹೊಂಡವೂ ಸಹ ಕಾಣುತ್ತಿಲ್ಲ ಎಂದರು.

ಆಗ ಆ ವ್ಯಕ್ತಿ ಅದು ಗಾಳಿ ಮಳೆಯಿಂದ ತುಂಬಿ ಮೊದಲಿನಂತಾಗಿದೆ ಎಂದು ನುಡಿದರು. ಅದಕ್ಕೆ ಮುನಿಗಳು ಹೇಳುತ್ತಾರೆ. ನೀನು ದಿನಾಲೂ ಮಣ್ಣು ಇಡುವ ಬದಲಾಗಿ ಅಕ್ಕಿ ಇಟ್ಟಿದ್ದರೆ ಆ ಹೊಂಡದ ರೀತಿಯಲ್ಲೇ ನಿನ್ನ ಮನೆಯೂ ಸಹ ದವಸ ಧಾನ್ಯಗಳಿಂದ ತುಂಬಿ ಹೋಗುತ್ತಿತ್ತು. ಆದರೆ ನೀನು ಅದನ್ನು ಕಳೆದುಕೊಂಡೆ ಎಂದರು.

ಆಗ ಆ ವ್ಯಕ್ತಿಗೆ ತನ್ನ ತಪ್ಪಿನ ಅರಿವಾಯಿತು. ತನ್ನ ತಪ್ಪನ್ನು ತಿದ್ದಿಕೊಂಡು ಮಡಿ ವಸ್ತ್ರ ಧರಿಸಿ ದಿನಾಲು ಬಸದಿಗೆ ಹೋಗಲು ಆರಂಭಿಸಿದನು.ಹೀಗೆ ನಾವು ದೇವರಿಗೆ ಮಾಡಿದ ಸೇವೆಗೆ ಎಂದಿಗೂ ಸಹ ವ್ಯರ್ಥವಾಗುವುದಿಲ್ಲ. ಅದು ಒಂದಲ್ಲ ಒಂದು ರೀತಿಯಲ್ಲಿ ನಮಗೆ ಒಳ್ಳೆಯದೇ ಆಗುತ್ತದೆ .ಒಳ್ಳೆಯದನ್ನೇ ಮಾಡುವುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top