fbpx
ಭವಿಷ್ಯ

ಶನಿಕಾಟ ಅಥವಾ ಸಾಡೇ ಸಾತಿ ತೊಂದರೆಯಿಂದ ನಿವಾರಣೆ ಹೊಂದಲು ಯಾವ ರಾಶಿಯವರು ಏನು ಮಾಡಬೇಕೆಂದು ತಿಳಿಯೋಣ

 

ಶನಿಕಾಟ ಅಂದರೆ ಶನೈಶ್ಚರನ ಕಾಟದಿಂದ ದೂರವಿರಲು ಯಾವ ರಾಶಿಯವರು ಏನು ಮಾಡಬೇಕೆಂದು ತಿಳಿಯೋಣ .

 

ಶನೈಶ್ಚರ ದೇವನ ಕಾಟ ಅಥವಾ ಶನಿ ಗ್ರಹದ ಕಾಟದಿಂದ ದೂರವಾಗಲು  ಆನೇಕರು ಹಲವಾರು ರೀತಿಯ ಮಾರ್ಗಗಳನ್ನು ಅನುಸರಿಸುತ್ತಾರೆ . ಸಾಮಾನ್ಯವಾಗಿ ಈ ಶನಿಕಾಟ ಇರುವ ರಾಶಿಯವರು ಈ ಉತ್ತಮ ಮಾರ್ಗಗಳನ್ನು ಅನುಸರಿಸಿದರೆ ಶನಿಕಾಟದಿಂದ ದೂರವಾಗಿ ಮುಕ್ತರಾಗಬಹುದು.ಅವು ಯಾವುವೆಂದು ಇಂದು ತಿಳಿದುಕೊಳ್ಳೋಣ…

ಮೇಷ (Mesha)

ಮೇಷ ರಾಶಿಯವರು ಶನಿ ಕಾಟದಿಂದ ದೂರವಾಗಲು ಪ್ರತಿದಿನ ಹನುಮಾನ್ ಚಾಲೀಸವನ್ನು ಪಠಿಸಿದರೆ ಅವರಿಗೆ ತುಂಬಾ ಒಳ್ಳೆಯದಾಗುವುದು.

ವೃಷಭ (Vrushabh)


ವೃಷಭ ರಾಶಿಯವರು ಶನೈಶ್ಚರನ ಕಾಟದಿಂದ ದೂರವಾಗಲು ಶನಿ ಅಷ್ಟೋತ್ತರ ಶತನಾಮಾವಳಿಯನ್ನು ಜಪಿಸಿದರೆ ಇವರಿಗೆ ಶನೈಶ್ಚರ ದೇವನ ಕಾಟದಿಂದ ಮುಕ್ತಿ ದೊರೆಯುವುದು.

ಮಿಥುನ (Mithuna)


ಕಪ್ಪು ಉದ್ದಿನ ಬೇಳೆಯನ್ನು ಶನೈಶ್ವರ ದೇವನಿಗೆ ಶನೈಶ್ಚರ ಜಯಂತಿಯಂದು ಶನೇಶ್ಚರ ದೇವಸ್ಥಾನಕ್ಕೆ ಹೋಗಿ ಅರ್ಪಿಸಿದರೆ ಶನಿದೋಷದಿಂದ ಮುಕ್ತಿಯನ್ನು ಪಡೆಯಬಹುದು.

 

ಕರ್ಕ (Karka)


ಕಟಕ ರಾಶಿಯವರು ರಾಜ ದಶರಥ ಶನಿ ಸ್ತೋತ್ರವನ್ನು ಪಠಿಸಬೇಕು. ಇದರಿಂದ ಶನೈಶ್ಚರ ದೇವನು   ಪ್ರಸನ್ನನಾಗಿ ಶನಿ ಕಾಟದ  ಪ್ರಮಾಣವು ಕಡಿಮೆಯಾಗುವುದು .

 

ಸಿಂಹ (Simha)

ಸಿಂಹ ರಾಶಿಯವರು ಹನುಮಂತ ದೇವರಿಗೆ ಕಡ್ಲೆಕಾಳು ಅಥವಾ ಕೆಂಪು ವಸ್ತ್ರವನ್ನು ಮಂಗಳವಾರದ ದಿನವೇ ಹನುಮಂತ ದೇವನ ದೇವಾಲಯಕ್ಕೆ ಹೋಗಿ ಅರ್ಪಿಸುವುದರಿಂದ ಶನಿಕಾಟದಿಂದ ಮುಕ್ತಿ ದೊರೆಯುವುದು. ಶನಿಯು ಸಹ ಪ್ರಸನ್ನ ನಗುವನು.

ಕನ್ಯಾರಾಶಿ (Kanya)


ಕನ್ಯಾ ರಾಶಿಯವರು ಶನಿ ಬೀಜ ಮಂತ್ರವನ್ನು ಜಪಿಸಿದರೆ ಅವರಿಗೆ ಎಲ್ಲವೂ ಶುಭ ಫಲಿತಾಂಶಗಳೇ ದೊರೆಯುತ್ತವೆ.

 

ತುಲಾ (Tula)


ತುಲಾ ರಾಶಿಯವರು ಶನಿದೇವನಿಗೆ ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿಸಬೇಕು ಇದರಿಂದ ಶನಿ ಕಾಟದಿಂದ ಮುಕ್ತರಾಗಲು ಸಹಾಯವಾಗುತ್ತದೆ.

 

ವೃಶ್ಚಿಕ (Vrushchika)


ವೃಶ್ಚಿಕ ರಾಶಿಯವರು ಗೋಧಿಯನ್ನು ಕಪ್ಪು ಇರುವೆಗಳಿಗೆ ಆಹಾರವಾಗಿ ಹಾಕಿದರೆ ಇದರಿಂದ ಇವರು ಸಂಪೂರ್ಣವಾಗಿ ಶನೈಶ್ಚರ ದೇವನ ಕ್ರೂರ ದೃಷ್ಟಿಯಿಂದ ಮುಕ್ತರಾಗಬಹುದು.

 

ಧನು ರಾಶಿ (Dhanu)


ಧನಸ್ಸು ರಾಶಿಯವರು  ಅಶ್ವಥ  ಅಥವಾ ಅರಳಿ ಮರದ ಕೆಳಗೆ ಹನ್ನೊಂದು ದೀಪವನ್ನು ಹಚ್ಚಿದರೆ  ಅದು ಶನಿವಾರದ ದಿನವೇ  ಹಚ್ಚಿದರೆ   ಇದರಿಂದ ಶನಿಯು ಪ್ರಸನ್ನನಾಗಿ ಅವನ ಕ್ರೂರ ದೃಷ್ಟಿಯನ್ನು ಕಡಿಮೆ ಮಾಡುವನು.

 

ಮಕರ (Makara)


ಮಕರ ರಾಶಿಯವರು ವೇದ ಮಂತ್ರ ಜಪ ಮಾಡಿ ಅಥವಾ “ಓಂ ನಮೋ ಶನೈಶ್ಚರಾಯ ನಮಃ” ಎಂಬ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಬೇಕು.

 

ಕುಂಭರಾಶಿ (Kumbha)


ಕುಂಭ ರಾಶಿಯವರು ದೇವರ ಪೂಜೆಯನ್ನು ಮಾಡುವಾಗ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿ ದೇವರ ಪೂಜೆಯನ್ನು ಮಾಡಬೇಕು. ಇದರಿಂದ ಶನಿಯು ಪ್ರಸನ್ನನಾಗಿ ಅವನ ಕ್ರೂರ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು.

 

ಮೀನರಾಶಿ (Meena)


ಮೀನ ರಾಶಿಯವರು ಶನಿ ಕಾಟದಿಂದ ಮುಕ್ತರಾಗಲು ಕುಷ್ಠ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯ ಮಾಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top