fbpx
ಕನ್ನಡ

“ರಾಜಕುಮಾರ್ ಕನ್ನಡ ಚಿತ್ರ ಬಿಟ್ಟು ಬೇರೆ ಸಿನಿಮಾದಲ್ಲಿ ನಟಿಸಲ್ಲ ಅಂತ ನಿರ್ಧಾರ ಮಾಡ್ದೆ ಇದ್ದಿದ್ರೆ ಕನ್ನಡ ಚಿತ್ರರಂಗ ಅನ್ನೋ ಅಸ್ತಿತ್ವ ಇರ್ತಿರ್ಲಿಲ್ಲ” ಹೀಗೆ ಒಬ್ರು ಮಹಾನ್ ವ್ಯಕ್ತಿ ಹೇಳಿದ್ರು

“ರಾಜಕುಮಾರ್ ಕನ್ನಡ ಚಿತ್ರ ಬಿಟ್ಟು ಬೇರೆ ಸಿನಿಮಾದಲ್ಲಿ ನಟಿಸಲ್ಲ ಅಂತ ನಿರ್ಧಾರ ಮಾಡ್ದೆ ಇದ್ದಿದ್ರೆ ಕನ್ನಡ ಚಿತ್ರರಂಗ ಅನ್ನೋ ಅಸ್ತಿತ್ವ ಇರ್ತಿರ್ಲಿಲ್ಲ”
ಹೀಗೆ ಒಬ್ರು ಮಹಾನ್ ವ್ಯಕ್ತಿ ಹೇಳಿದ್ರು

ಹೌದು ಈ ಮಾತುಗಳನ್ನು ಹೇಳಿದ್ದು ಬೇರೆ ಯಾರು ಅಲ್ಲ ಕರ್ನಾಟಕದ ಶ್ರೇಷ್ಠ ಕಾದಂಬರಿಕಾರ , “ಕಾದಂಬರಿ ಸಾರ್ವಬೌಮ” ಎನಿಸಿಕೊಂಡ ಅ.ನ.ಕೃ ರವರು.

ಗೋಕಾಕ್ ಚಳುವಳಿಗಳಂತಹ ಜನ ಕೇಂದ್ರಿತ ಚಳುವಳಿಗಳ ಶಕ್ತಿ ಕೇಂದ್ರವಾಗಿ ನಿಂತಿದ್ದು ಡಾ ರಾಜಕುಮಾರ್ ರವರು , ಅಷ್ಟೆಲ್ಲಾ ಜನಪ್ರಿಯತೆ ಇದ್ದರು ರಾಜಕೀಯ ತಮಗೆ ಒಗ್ಗದ ವಿಷಯವೆಂದು ರಾಜಕೀಯದಿಂದ ದೂರ ಉಳಿದರು , ಸೂಪರ್ ಸ್ಟಾರ್ಗಳಾಗಿದ್ದ ಎನ್. ಟಿ .ಆರ್ ಹಾಗು ಎನ್ .ಜಿ .ಆರ್ ಗಳು ತಮ್ಮ ಜನಪ್ರಿಯತೆಯ ಮೇರೆಗೆ ರಾಜಕೀಯಕ್ಕೆ ಸೇರಿ ಮಹಾ ನಾಯಕರಾಗಿ ಹೊರಹೊಮ್ಮಿದರು ಸಹ ರಾಜಕುಮಾರ್ ರವರು ತೆರೆ ಮರೆಯಲ್ಲಿಯೇ ಸಾಕಷ್ಟು ಜನ ಪರ ಕೆಲಸಗಳನ್ನು ಮಾಡುತ್ತಾ ಯಾವತ್ತಿಗೂ ರಾಜಕೀಯ ಸೇರುವ ಆಸೆಯನ್ನು ವ್ಯಕ್ತಪಡಿಸಲಿಲ್ಲ.

ಜನ ಪ್ರಿಯ ರಾಜಕೀಯ ನಾಯಕಿಯಾಗಿದ್ದ ಇಂದಿರಾಗಾಂಧಿಯವರಿಗೆ ಒಮ್ಮೆ ನಡುಕ ಹುಟ್ಟಿಸಿದವರು ಡಾ ರಾಜಕುಮಾರ್ , ಚಿಕ್ಕಮಗಳೂರು ಕ್ಷೇತ್ರದಲ್ಲಿ ಒಮ್ಮೆ ಚುನಾವಣೆಗೆ ನಿಲ್ಲಬೇಕೆಂದುಕೊಂಡಿದ್ದ ಇಂದಿರಾಗಾಂಧಿಯವರಿಗೆ ರಾಜಕುಮಾರ್ ರವರು ತಮ್ಮ ಎದುರಾಳಿಯಾಗಿ ಚುನಾವಣೆಗೆ ನಿಲ್ಲುತ್ತಾರೆಂದು ತಿಳಿಯುತ್ತಿದ್ದಂತೆ ರಾಜಕುಮಾರ್ ರವರ ಬಗ್ಗೆ ಹಲವು ವಿಷಯಗಳನ್ನು ತಿಳಿದುಕೊಂಡರು ಈ ವಿಷಯಗಳು ಇಂದಿರಾಗಾಂಧಿಯವರಿಗೆ ತಾವು ಸೋಲುವುದು ಖಚಿತವೆಂಬುದು ಗೊತ್ತುಮಾಡಿದ್ದವು ಆದರೆ ರಾಜಕುಮಾರ್ ರವರ ಚುನಾವಣೆ ವಿಷಯ ಕೇವಲ ಗಾಳಿಮಾತಾಗಿತ್ತು.

ಚಿತ್ರ ರಂಗದ ಆರಂಭದ ದಿನಗಳಲ್ಲಿ ಬೇಡರ ಕಣ್ಣಪ್ಪ ಚಿತ್ರದ ತೆಲುಗು ಅವತರಣಿಕೆಯಲ್ಲಿ ಕಾಣಿಸಿದ್ದು ಬಿಟ್ಟರೆ ಬೇರೆ ಯಾವುದೇ ಭಾಷೆಯ ಚಿತ್ರಗಳಲ್ಲಿ ತಮ್ಮ ಕೊನೆಯ ಉಸಿರಿರುವವರೆಗೂ ಅಭಿನಯ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದರು
ಕೂಲಿ ಚಿತ್ರದಲ್ಲಿ ಅಭಿನಯ ಮಾಡುವಂತೆ ಸ್ವತಃ ಅಮಿತಾಬಚ್ಚನ್ ರವರು ರಾಜಕುಮಾರ್ ರ ಬಳಿ ಕೇಳಿಕೊಂಡಿದ್ದರು ಆಗಲು ರಾಜಕುಮಾರ್ ಒಪ್ಪಿಕೊಳ್ಳಲಿಲ್ಲ.

ಅಷ್ಟೇ ಅಲ್ಲದೆ ಕಸ್ತೂರಿ ನಿವಾಸ ಚಿತ್ರದ ಹಿಂದಿ ಅವತರಣಿಕೆಯಲ್ಲಿ ಅಭಿನಯಿಸಲು ಸಂಜೀವ್ ಕುಮಾರ ರವರಿಗೆ ಕೇಳಿಕೊಂಡಾಗ ಪೂರ್ತಿ ಸಿನಿಮಾ ನೋಡಿದ ಸಂಜೀವ್ ಕುಮಾರ್ ಈ ಚಿತ್ರಕ್ಕೆ ರಾಜಕುಮಾರ್ ಬಿಟ್ಟರೆ ಬೇರೆ ಯಾರು ನ್ಯಾಯ ಒದಗಿಸಲಾರರು ಎಂದು ಹೇಳಿದಾಗ ನಿರ್ಮಾಪಕರು ಕೊನೆಗೆ ರಾಜಕುಮಾರ್ ರವರಿಗೆ ನಟಿಸುವಂತೆ ಕೇಳಿಕೊಂಡರು ಆಗಲು ಸಹ ರಾಜ್ ಒಪ್ಪಿಕೊಳ್ಳಲಿಲ್ಲ .

ಇದಷ್ಟೇ ಅಲ್ಲದೆ ಇನ್ನು ಅನೇಕ ಚಿತ್ರ ರಂಗಗಳಿಂದ ಬಂದ ಅವಕಾಶಗಳನ್ನು ರಾಜಕುಮಾರ್ ಕನ್ನಡಕ್ಕಾಗಿ ಬಿಟ್ಟರು ಇಷ್ಟು ಸಾಕಲ್ಲವೇ “ಕರ್ನಾಟಕದ ಮುತ್ತು” ಎನ್ನಲು ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top