fbpx
ಕರ್ನಾಟಕ

“ಕನ್ನಡವಿಲ್ಲದೆ ನಾವಿಲ್ಲ, ಕನ್ನಡವಿಲ್ಲದೆ ನಾವೇನೂ ಅಲ್ಲ” ಎಂದ ಸುದೀಪ್.. ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ದರ್ಶನ್.

“ಕನ್ನಡವಿಲ್ಲದೆ ನಾವಿಲ್ಲ, ಕನ್ನಡವಿಲ್ಲದೆ ನಾವೇನೂ ಅಲ್ಲ” ಎಂದ ಸುದೀಪ್.. ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ದರ್ಶನ್.!

 

 

ಇಂದು ರಾಜ್ಯಾದ್ಯಂತ 62ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಿ ಜನರಿಗೆ ಶುಭಾಶಯ ಕೋರುತ್ತಿದ್ದಾರೆ. ಅದೇ ರೀತಿ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕನ್ನಡಿಗರಿಗೆ ಶುಭಕೋರಿದ್ದಾರೆ. ಮುಂದೆ ಓದಿ.

 

 

ಸೋಷಿಯಲ್ ಮೀಡಿಯಾದ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಕನ್ನಡಿಗರಿಗೆ ವಿಶ್ ಮಾಡಿರುವ ಬಿಗ್’ಬಾಸ್ “ನನ್ನ ಪ್ರೀತಿಯ ಸ್ನೇಹಿತರೇ..
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡವಿಲ್ಲದೆ ನಾವಿಲ್ಲ,
ಕನ್ನಡವಿಲ್ಲದೆ ನಾವೇನೂ ಅಲ್ಲ.
ನಿಮ್ಮ..ಕಿಚ್ಚ.” ಎಂದು ಪೋಸ್ಟ್ ಮಾಡಿ ವಿಡಿಯೋವನ್ನು ಕೂಡ ಅಪ್ಲೋಡ್ ಮಾಡಿದ್ದಾರೆ..

 

 

ಚಾಲೆಂಜಿಂಗ್ ಸ್ಟಾರ್ ದರ್ಶನ ಕೂಡ ಟ್ವಿಟರ್ ನಲ್ಲಿ ಶುಭಕೋರಿದ್ದು “ಹರಿವ ನದಿಗಳಿಂದ ಹರಸೊ ರಸಋಷಿಗಳಿಂದ ಬರೆವ ಕವಿಗಳಿಂದ ಧನ್ಯ ನೀನು ಸವಿಯ ನುಡಿಯ ಆಡುವ ಅಮೃತ ಸವಿಯ ಸವಿಯುವ ಕನ್ನಡಿಗರು ನಾವು ಧನ್ಯ ಧನ್ಯ ಕನ್ನಡ ರಾಜ್ಯೋತ್ಸವದ ಶುಭಾಶಯಗಳು” ಎಂದು ಪೋಸ್ಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top