fbpx
ಮನೋರಂಜನೆ

ಹೊರರಾಜ್ಯದಲ್ಲಿ ಶೂಟಿಂಗ್ ಮಾಡುತ್ತಿರುವ ’ಕುರುಕ್ಷೇತ್ರ’ ಚಿತ್ರತಂಡ, ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದು ಹೇಗೆ ಗೊತ್ತಾ?

ಹೊರರಾಜ್ಯದಲ್ಲಿ ಶೂಟಿಂಗ್ ಮಾಡುತ್ತಿರುವ ’ಕುರುಕ್ಷೇತ್ರ’ ಚಿತ್ರತಂಡ, ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದು ಹೇಗೆ ಗೊತ್ತಾ?

 

 

ನೆನ್ನೆ ರಾಜ್ಯಾದ್ಯಂತ 62ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಿ ಜನರಿಗೆ ಶುಭಾಶಯ ಕೋರಿದ್ದಾರೆ. ಅದೇ ರೀತಿ ಹೈದರಾಬಾದ್ ನಲ್ಲಿ ಶೂಟಿಂಗ್ ನಟಸುತ್ತಿರುವ ‘ಕುರುಕ್ಷೇತ್ರ’ ಚಿತ್ರತಂಡವು ಕೂಡ ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಿ ಕನ್ನಡ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ.

 

 

ಹೊರರಾಜ್ಯದ ಹೈದರಾಬಾದ್’ನಲ್ಲಿ ಶೂಟಿಂಗ್ ‘ಕುರುಕ್ಷೇತ್ರ’ ಚಿತ್ರತಂಡ ಕನ್ನಡ ರಾಜ್ಯೋತ್ಸವನ್ನು ಅಲ್ಲಿಯೇ ಕನ್ನಡ ಬಾವುಟ ಹಾರಿಸಿ ಕನ್ನಡಾಂಬೆಗೆ ನಮಸ್ಕರಿಸಿದ್ದಾರೆ. ಕನ್ನಡ ಬಾವುಟ ಹಾರಿಸಿ, ಭುವನೇಶ್ವರಿ ದೇವಿಗೆ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನಿರ್ಮಾಪಕ ಮುನಿರತ್ನ, ನಿರ್ದೇಶಕ ನಾಗಣ್ಣ ಸೇರಿದಂತೆ ನಟ ದರ್ಶನ್, ನಿಖಿಲ್ ಕುಮಾರ್, ಶಶಿಕುಮಾರ್, ಭಾರತಿ ವಿಷ್ಣುವರ್ಧನ್, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಹಾಗು ಇತರ ಕಲಾವಿದರು ಈ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದರು.

 

 

ಕಳೆದ ಎರಡು ತಿಂಗಳಿನಿಂದ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸತತ ಚಿತ್ರೀಕರಣ ಮಾಡುತ್ತಿರುವ ‘ಕುರುಕ್ಷೇತ್ರ’ ಚಿತ್ರ ಸದ್ಯ ಕನ್ನಡ ಚಿತ್ರರಂಗದ ಬಹುನೀರಿಕ್ಷೆಯ ಚಿತ್ರವಾಗಿದೆ..’ಕುರುಕ್ಷೇತ್ರ’ ಚಿತ್ರತಂಡ ಕನ್ನಡ ರಾಜ್ಯೋತ್ಸವ ಆಚರಿಸಿದ ವಿಡಿಯೋವನ್ನು ಇಲ್ಲಿ ನೋಡಿ..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top