fbpx
ಸಮಾಚಾರ

ಸಕತ್ ವೈರಲ್ ಆಗಿರೋ ಈ ಅಜ್ಜಿ ಟೇಬಲ್ ಟೆನಿಸ್ ಆಡ್ತಿರೋದನ್ನ ನೋಡುದ್ರೆ ಬೆಚ್ಚಿ ಬೀಳ್ತಿರಾ.. 

ಸಕತ್ ವೈರಲ್ ಆಗಿರೋ ಈ ಅಜ್ಜಿ ಟೇಬಲ್ ಟೆನಿಸ್ ಆಡ್ತಿರೋದನ್ನ ನೋಡುದ್ರೆ ಬೆಚ್ಚಿ ಬೀಳ್ತಿರಾ.. 

 

 

ಎಪ್ಪತ್ತು ವರ್ಷ ವಯಸ್ಸಾಗಿರೋ ಅಜ್ಜಿಯೊಂದು ಸಕ್ಕಾಟಾಗಿ ಟೇಬಲ್ ಟೆನಿಸ್ ಆಡುತ್ತಿರುವ ವಿಡಿಯೋ ತುಂಬಾ ವೈರಲ್ ಆಗಿದೆ. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಅದೇ ಟ್ರೆಂಡಿಂಗ್..ಟೇಬಲ್‌ ಟೆನ್ನಿಸ್‌ ಆಟವನ್ನು ಸರಸ್ವತಿ ಎಂಬ 70 ವರ್ಷದ ಮಹಿಳೆಯೊಬ್ಬರು ಆಡಿ ಎದುರಾಳಿಯನ್ನು ತಮ್ಮ ಹೊಡೆತಗಳಿಂದ ಮಣ್ಣುಮುಕ್ಕಿಸಿರುವ ವಿಡಿಯೋಗೆ ಎಲ್ಲರೂ ಸಕತ್ ಫಿದಾ ಅಗಿದ್ದಾರೆ. ಮುಂದೆ ಓದಿ

 

 

ಬಿಎಸ್‌ಎನ್‌ಎಲ್‌ನಲ್ಲಿ ಉದ್ಯೋಗಿಯಾಗಿ ನಿವೃತ್ತರಾಗಿರುವ ಸರಸ್ವತಿಯವರಿಗೆ ಮೊದಲಿನಿಂದಲೂ ಟೇಬಲ್‌ ಟೆನ್ನಿಸ್‌ ಆಟವೆಂದರೆ ಪಂಚಪ್ರಾಣ. ಬಿಎಸ್‌ಎನ್‌ಎಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ಸಮಯ ಸಿಕ್ಕಾಗಲೆಲ್ಲಾ ಟೇಬಲ್‌ ಟೆನ್ನಿಸ್‌ ಆಡುತ್ತಿದ್ದ ಸರಸ್ವತಿ ಟೇಬಲ್ ಟೆನಿಸ್ ಆಡುವುದನ್ನು ಈಗಲೂ ನಿಲ್ಲಿಸಿಲ್ಲ..

 

 

“ಟೇಬಲ್‌ ಟೆನ್ನಿಸ್‌ ಆಡಲು ಶಕ್ತಿ ಮತ್ತು ಸಾಮರ್ಥ್ಯ ಬಹಳ ಮುಖ್ಯವಾಗುತ್ತದೆ. ಈ ಆಟ ಆಡುವುದರಿಂದ ನನ್ನ ಮನಸ್ಸಿಗೆ ರಿಲ್ಯಾಕ್ಸ್‌ ಸಿಗುತ್ತದೆ. ನನ್ನ ವಿಡಿಯೋವನ್ನು ನೋಡಿರುವ ಎಲ್ಲರಿಗೂ ಧನ್ಯವಾದಗಳು” ಎಂದು ಸರಸ್ವತಿ ಹೇಳುತ್ತಾರೆ.. ವಿಶೇಷವೆಂದರೆ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಇವರು ಕೆಲ ವರ್ಷಗಳ ಕಾಲ ಭಾರತ ಮತ್ತು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.

 

 

ಸರಸ್ವತಿಯರ ಟೇಬಲ್ ಟೆನಿಸ್ ಆಟವನ್ನು ಇಲ್ಲಿ ನೋಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top