fbpx
ಬಿಗ್ ಬಾಸ್

ಬಿಗ್’ಬಾಸ್ ನಲ್ಲಿ ಜೆಕೆ,ಶ್ರುತಿ,ಚಂದನ್ ನಡುವೆ ಹುಟ್ಟಿಕೊಂಡಿದೆ ತ್ರಿಕೋನ ಪ್ರೇಮ: ಅಷ್ಟಕ್ಕೂ ಲವ್ ಬಗ್ಗೆ ಚಂದನ್ ಹೇಳಿದ್ದೇನು..?

ಬಿಗ್’ಬಾಸ್ ನಲ್ಲಿ ಜೆಕೆ,ಶ್ರುತಿ,ಚಂದನ್ ನಡುವೆ ಹುಟ್ಟಿಕೊಂಡಿದೆ ತ್ರಿಕೋನ ಪ್ರೇಮ: ಅಷ್ಟಕ್ಕೂ ಲವ್ ಬಗ್ಗೆ ಚಂದನ್ ಹೇಳಿದ್ದೇನು..?

 

 

ಕನ್ನಡದ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ 5ನೇ ಸೀಸನ್ ಕಾರ್ಯಕ್ರಮದಲ್ಲಿ ದಿನಗಳು ಉರುಳುತ್ತಿದ್ದಂತೆ ಅನೇಕ ಕುತೂಹಲ ವಿಷಯಗಳು ಆಚೆ ಬರುತ್ತಿವೆ..ಒಂದೆರಡು ದಿನಗಳ ಹಿಂದೆ ಚಂದನ್‌, ಜಗನ್‌ ಹಾಗೂ ಆಶಿತಾ ಮಾತಾಡುತ್ತಾ ಕುಳಿತಿದ್ದರು ಆಗ ಚಂದನ್‌ ‘ನನಗೆ ಲವ್ ಆಗುತ್ತೆ ಅನ್ನಿಸುತ್ತಿದೆ’ ಎಂದು ಹೇಳಿಕೊಂಡರು ಆದರೆ ಯಾರ ಮೇಲೆ ಲವ್‌ ಆಗಿದೆ ಎಂಬ ವಿಚಾರ ಮಾತ್ರ ಹೇಳಿರಲಿಲ್ಲ.

 

 

ನೆನ್ನೆ ಬಿಗ್ ಬಾಸ್ ಮನೆಯ ಸದಸ್ಯರು ನಡೆಸಿದ ತ್ರಿಕೋನ ಪ್ರೇಮಕಥೆಯ ಸಂಭಾಷಣೆ ಚಂದನ್ ಗೆ ಲವ್ ಆಗಿರುವದಕ್ಕೆ ಉತ್ತರ ಸಿಕ್ಕಿದೆ.. ಎಲ್ಲರ ಜತೆ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದ ಸಂದರ್ಭದಲ್ಲಿ ಅನುಪಮಾರವರು “ಚಂದನ್ ಶ್ರುತಿಯನ್ನು ಲವ್ ಮಾಡುತ್ತಿದ್ದಾನಂತೆ” ತಮಾಷೆಗೆ ಎಂದು ದಯಾಳ್’ಗೆ ಹೇಳಿದರು. ಆಗ “ಚಂದನ್ ನಾನು ಶ್ರುತಿಯನ್ನು ಇಷ್ಟ ಪಡ್ತಿದ್ದೀನಿ ಅವರು ಜೆಕೆಯನ್ನು ಇಷ್ಟ ಪಡ್ತಿದ್ದಾರೆ” ಎಂದು ಶ್ರುತಿಯ ಕಾಲೆಳೆದರು.

 

 

ಚಂದನ್ ನ ಈ ಮಾತಿಗೆ ಪ್ರತಿಕ್ರಿಯಿಸಿದ ಶ್ರುತಿ, ಇಷ್ಟಪಡುವುದು ಹಾಗೂ ಲವ್‌ ಮಾಡುವುದಕ್ಕೂ ಬೇರೆ ಬೇರೆ ಅರ್ಥವಿದೆ. ಇಷ್ಟಪಡುವುದು ಹಾಗೂ ಲವ್‌ ಮಾಡುವುದು ಎರಡು ಒಂದೇ ಅಲ್ಲ.. ಹೇಗೆಲ್ಲಾ ಮಾತನಾಡಬೇಡಿ ಎಂದು ಹೇಳಿದರು.. ಬಿಗ್’ಬಾಸ್ ಮನೆಯಲ್ಲಿ ನಡೆಯುತ್ತಿರುವ ಸನ್ನಿವೇಶಗಳನ್ನ ಗಮನಿಸಿದರೆ ಕನ್ನಡ ರ್ಯಾಪರ್ ಚಂದನ್ ಶೆಟ್ಟಿಗೆ ಲವ್ ಆಗಿರುವುದು ಪಕ್ಕ ಅಂತಾಗಿದೆ.. ಆದರೆ ಯಾರ ಮೇಲೆ ಲವ್ ಆಗಿದೆ ಎಂದು ಬಾಯಿಬಿಡುತ್ತಿಲ್ಲ. ಒಟ್ಟಾರೆ ಬಿಗ್‌ಬಾಸ್‌ ಮನೆಯಲ್ಲಿ ತ್ರಿಕೋನ ಪ್ರೇಮವೊಂದು ನಡೆಯುತ್ತಿದೆ ಎಂಬ ಸುಳಿವು ಪ್ರೇಕ್ಷಕರಿಗೆ ಸಿಕ್ಕಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top