fbpx
ಸಾಧನೆ

ಕೇವಲ 2 ರೂಪಾಯಿಯಲ್ಲೇ ಚಿಕಿತ್ಸೆ ನೀಡುತ್ತಿರುವ ಈ ಹಿರಿಯ ವೈದ್ಯನ ಸಮಾಜಸೇವೆಯನ್ನ ಮೆಚ್ಚಲೇಬೇಕು..!

ಕೇವಲ 2 ರೂಪಾಯಿಯಲ್ಲೇ ಚಿಕಿತ್ಸೆ ನೀಡುತ್ತಿರುವ ಈ ಹಿರಿಯ ವೈದ್ಯನ ಸಮಾಜಸೇವೆಯನ್ನ ಮೆಚ್ಚಲೇಬೇಕು..!

 

 

ದುಡ್ಡಿಗೋಸ್ಕರ ರೋಗಿಗಳ ಜೀವದ ಜತೆ ಚೆಲ್ಲಾಟ ಆಡುವ ವೈದ್ಯರೇ ಹೆಚ್ಚು ಇರುವ ಈ ಕಾಲದಲ್ಲಿ ಇಲ್ಲೊಬ್ಬ ವೈದ್ಯ ಎಲ್ಲರು ಮೆಚ್ಚುವಂತ ಕೆಲಸಮಾಡುತ್ತಿದ್ದಾರೆ.. ಕಳೆದ ನಲವತ್ತು ವರ್ಷಗಳಿಂದ ಚೆನ್ನೈನಲ್ಲಿರುವ ಹಿರಿಯ ವೈದ್ಯರು ತಮ್ಮ ರೋಗಿಗಳಿಗೆ ಕೇವಲ 2 ರೂಪಾಯಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಉತ್ತರ ಚೆನ್ನೈ ಭಾಗದಲ್ಲಿರುವ 67 ವರ್ಷ ವಯಸ್ಸಿನ ತಿರುವೆಂಗಡಮ್ ವೀರರಾಘವನ್ ಎಂಬ ವೈದ್ಯರು ತಮ್ಮ ರೋಗಿಗಳಿಗೆ ಚಿಕಿತ್ಸೆ ನೀಡಲು ಕೇವಲ ಎರಡು ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಆದ ಕಾರಣ ಇವರು “ಎರಡು ರೂಪಾಯಿ ಡಾಕ್ಟರ್” ಎಂತಲೇ ಫೇಮಸ್ ಆಗಿದ್ದಾರೆ.ಚೆನ್ನೈನಲ್ಲಿರುವ ಸ್ಟಾನ್ಲಿ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿರುವ ವೀರರಘುವರನ್ ತನ್ನ ಕ್ಷೇತ್ರದ ಜನರಿಗೆ ಅನುಕೂಲವಾಗಲೆಂದು 1973 ರಿಂದ ಕೇವಲ 2 ರೂಪಾಯಿಗೆ ಚಿಕಿತ್ಸೆ ನೀಡಿಕೊಂಡು ಬಂದಿದ್ದಾರೆ.

 

 

ಎರಡು ರುಪಾಯಿಗೆ ಚಿಕಿತ್ಸೆ ದೊರೆಯುತ್ತದೆ ಎಂದು ತಿಳಿದ ಜನರು ಅವರ ಕ್ಲಿನಿಕ್ ಮುಂದೆ ಕ್ಯೂ ನಿಂತುಕೊಳ್ಳಲು ಪ್ರಾರಂಭಿಸಿದರು. ರೋಗಿಗಳ ಸಂಖ್ಯೆಯಲ್ಲಿ ಹಠಾತ್ ಇಳಿಕೆ ಕಂಡುಬಂದ ಇತರ ವೈದ್ಯರು ವೀರರಘುವರನ್ ವಿರುದ್ಧ ಪ್ರತಿಭಟನೆಯನ್ನು ಪ್ರಾರಂಭಿಸಿದರು ಮತ್ತು ಪ್ರತಿ ರೋಗಿಗೆ ಚಿಕಿತ್ಸೆ ನೀಡಲು ಕನಿಷ್ಟ ರೂ.100 ಶುಲ್ಕ ವಿಧಿಸಬೇಕೆಂದು ಆಗ್ರಹಿಸಿದ್ದರು. ಆದರೆ ವೈದ್ಯ ವೀರರಾಘವನ್ ಮಾತ್ರ ಯಾವುದೇ ಪ್ರತಿಭಟನೆಗೆ ಅಂಜದೆ ತನ್ನ ರೋಗಿಗಳಿಗೆ ಎರಡು ರುಪಾಯಲ್ಲೇ ಚಿಕಿತ್ಸೆ ನೀಡುವುದನ್ನು ಮುಂದುವರಿಸಿದರು..

 

 

ಚಿಕಿತ್ಸೆ ನೀಡಲು ಎರಡು ಪಡೆಯುತ್ತಿದ್ದ ವೀರರಘುವರನ್ ಕೆಲವು ದಿನಗಳ ನಂತರ ಆ ಎರಡು ರೂಪಾಯಿಗಳನ್ನು ತೆಗೆದುಕೊಳ್ಳುವುದನ್ನು ಕೂಡ ನಿಲ್ಲಿಸಿದರು. ಎರಡು ರೂಪಾಯಿಯ ಬದಲಿಗೆ ಚಿಕ್ಕ ಪುಟ್ಟ ಆಹಾರ ಮತ್ತು ದೈನಂದಿನ ಬಳಕೆ ವಸ್ತುಗಳನ್ನು ಪಡೆಯಲು ನಿರ್ಧರಿಸಿದ್ದರು.. ಕೆಲವು ರೋಗಿಗಳು ಅವರಿಗೆ ಏನನ್ನೂ ಕೊಡುತ್ತಿರಲಿಲ್ಲ. ಅವರ ಜೀವನದ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಲು, ಅವರು ಕಾರ್ಪೋರೆಟ್ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು., ಈ ಕಾರ್ಪೊರೇಟ್ ಆಸ್ಪತ್ರೆಯಿಂದ ವೇರರಾಘವನ್ ಅವರಿಗೆ ಸ್ಥಿರ ಆದಾಯವೂ ಬರುವಂತಾಯಿತು.

 

 

“ಮಾಜಿ ಮುಖ್ಯಮಂತ್ರಿ ಕೆ.ಕಾಮರಾಜ್ ರ ನೆರವಿನಿಂದ ನಾನು ಯಾವುದೇ ವೆಚ್ಚವಿಲ್ಲದೆ ಅಧ್ಯಯನ ಮಾಡಿದ್ದೇನೆ. ಹೀಗಾಗಿ ನಾನು ಯಾವುದೇ ರೋಗಿಗಳ ಬಳಿ ಶುಲ್ಕ ಪಡೆಯಬಾರದೆಂದು ನಿರ್ಧರಿಸಿರುವೆ” ಎಂದು ವೇರರಾಘವನ್ ಹೇಳುತ್ತಾರೆ. ಕೊಳಗೇರಿ ನಿವಾಸಿಗಳಿಗೆಂದು ಆಸ್ಪತ್ರೆಯೊಂದನ್ನ ನಿರ್ಮಿಸುವ ಕನಸನ್ನು ವೈದ್ಯ ತಿರುವೆಂಗಡಮ್ ವೀರರಾಘವನ್ ಹೊಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top