fbpx
ದೇವರು

ಹಣಕಾಸು , ರೋಗ , ಸಂತಾನ, ಮದುವೆ ಸಮಸ್ಯೆಯಿಂದ ಬಳಲುತ್ತಿರೋರು ಈ ದೇವರಲ್ಲಿ ಹರಕೆ ಮಾಡ್ಕೊಂಡು ಒಂದು ಹಿಡಿ ಮಣ್ಣು ಮಾತ್ರ ತಗೊಂಡೋಗಿ ಸಾಕು ಸರಿ ಹೋಗುತ್ತೆ !

ಹಣ ಕಾಸಿನ ಸಮಸ್ಯೆ , ರೋಗ , ಸಂತಾನ ಸಮಸ್ಯೆ, ಮದುವೆ ಸಮಸ್ಯೆಯಿಂದ ಬಳಲುತ್ತಿರೋರುಈ ದೇವರಲ್ಲಿ ಹರಕೆ ಮಾಡ್ಕೊಂಡು ಒಂದು ಹಿಡಿ ಮಣ್ಣು ಮಾತ್ರ ತಗೊಂಡೋಗಿ ಸಾಕು ಸರಿ ಹೋಗುತ್ತೆ !

 

 

 

ನಮಗೆ ಏನೇ ತೊಂದರೆ ಬಂದರು ಮೊದಲು ದೇವ್ರನ್ನು ಬೇಡಿಕೊಳ್ಳುವುದು ವಾಡಿಕೆ , ಯಾಕೆಂದರೆ ಮನುಷ್ಯರಿಗೆ ದೇವರ ಮೇಲೆ ಅಪಾರ ಭಕ್ತಿ ಹಾಗು ನಂಬಿಕೆ .

ದೇವರು ನಮ್ಮ ಕಷ್ಟಗಳನ್ನು ಪರಿಹರಿಸಿದರೆ ನಮ್ಮ ಶಕ್ತಿಗೆ ಅನುಸಾರವಾಗಿ ಹರಿಕೆ ಕಾಣಿಕೆ ಸಲ್ಲಿಸುವುದು ಹಿಂದಿನಿಂದಲೂ ಬಂದ ವಾಡಿಕೆ , ಕೆಲವರು ಹುಂಡಿ ಕಾಣಿಕೆ , ಚಿನ್ನ ವಜ್ರ ವೈಢೂರ್ಯಗಳನ್ನು ಅರ್ಪಿಸಿದರೆ ಇನ್ನು ಕೆಲವರು ನಗ ನಾಣ್ಯ ಜೊತೆ ರೇಷ್ಮೆ ಸೇರಿ ಅಥವಾ ರುಮಾಲು , ದೇವಸ್ಥಾನದ ಜೀರ್ಣೋದ್ಧಾರ ಮಾಡಿಸುತ್ತೇವೆ ಎಂದೆಲ್ಲ ಹರಕೆ ಕಟ್ಟಿಕೊಳ್ಳುತ್ತಾರೆ .

 

 

ದೇವಸ್ಥಾನಗಳು ಶ್ರೀಮಂತವು ಎನ್ನುವುದರಲ್ಲಿ ಎರಡು ಮಾತಿಲ್ಲ ಆದರೆ ಇಲ್ಲೊಂದು ದೇವಸ್ಥಾನವಿದೇ ಇಲ್ಲಿ ಹರಕೆಗೆ ಬರಿ ಮಣ್ಣು ಕೊಟ್ಟರೆ ಸಾಕು ಕಷ್ಟಗಳು ನಿವಾರಣೆಯಾಗುತ್ತವೆಯಂತೆ , ಅಂದುಕೊಂಡ ಕೆಲಸಗಳು ನೆರವೇರುತ್ತವೆಯಂತೆ ಇದು ಎಷ್ಟೋ ಭಕ್ತರ ಅಭಿಪ್ರಾಯ ಕೂಡ.

 

 

ಈ ದೇವಾಲಯವಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ ಸುಮಾರು 13.ಕಿ.ಮಿ ಕಿಲ್ಲೂರು ಮಾರ್ಗವಾಗಿ 8 ಕಿಮೀ ಕ್ರಮಿಸಿದರೆ ಈ ಸ್ಥಳ ಸಿಗುತ್ತದೆ ಗಡಾಯಿಕಲ್ಲಿನ ತಳದಲ್ಲಿ ನಿರ್ಮಿಸಿದಂತೆ ಈ ದೇವಸ್ಥಾನ ಕಾಣುತ್ತದೆ .

 

 

ಸೂರ್ಯ ಸದಾಶಿವ ದೇವಸ್ಥಾನಕ್ಕೆ ಸುಮಾರು 7 ಶತಮಾನಗಳ ಇತಿಹಾಸವಿದ್ದು13ನೇ ಶತಮಾನದಲ್ಲಿ ಆಡಳಿತದಲ್ಲಿದ್ದ ಬಾಂಗಾ ಅರಸರು ಜೀರ್ಣೋದ್ಧಾರ ಮಾಡಿದರು ಎಂದು ಹೇಳಲಾಗುತ್ತದೆ .

ಈ ದೇವಾಲಯದ ಎಡಭಾಗದಲ್ಲಿ ಹರಕೆ ಬನ ಸಿಗುತ್ತದೆ ಅಲ್ಲಿ ಹರಕೆ ಮಾಡಿಕೊಂಡ ಮಣ್ಣಿನ ಗೊಂಬೆಗಳನ್ನು ಇರಿಸಿ ಹೋಗುತ್ತಾರೆ .

 

ವಿವಿಧ ವಿಚಿತ್ರ ಆಕಾರದ ಮಣ್ಣಿನ ಗೊಂಬೆಗಳನ್ನು ಕಾಣಬಹುದು ಮನೆ , ಚಿಕ್ಕ ಮಕ್ಕಳು , ಮೇಜು , ಕುರ್ಚಿ , ಬಸ್ , ರೈಲು , ಹೃದಯ ಕರುಳು , ತಲೆ , ಮೊಬೈಲು , ಒಡವೆ , ಪಾತ್ರೆ , ದನ ಕಾರು ,ಹೀಗೆ ನಾನಾ ವಿಧದ ಮೂರ್ತಿಗಳನ್ನು ಕಾಣಬಹುದು , ಜನರು ತಮ್ಮ ಶಕ್ತಿಗೆ ಅನುಸಾರವಾಗಿ 500 ರೂ ಗಳ ವರೆಗಿನ ಗೊಂಬೆಗಳನ್ನು ಕೊಂಡು , ಹರಕೆ ಬನದಲ್ಲಿ ಇರಿಸಿ ತಮ್ಮ ಹರಕೆ ತೀರಿಸುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
S T Kumar says:

Nice message

To Top