fbpx
ದೇವರು

ನಾಳೆ ಸುಮಾರು 70 ವರ್ಷಗಳ ನಂತರ ಆಕಾಶದಲ್ಲಿ ಕಾರ್ತಿಕ ಮಾಸದ ಪೂರ್ಣ ಚಂದ್ರ ‘ಸೂಪರ್ ಮೂನ್’ ಕಾಣಿಸಿಕೊಳ್ಳಲಿದ್ದಾನೆ ಆ ದಿನ ಈ ಕೆಲಸಗಳನ್ನು ಮಾಡಿದರೆ ಪುಣ್ಯ ಸಿಗುತ್ತೆ

ಸುಮಾರು 70 ವರ್ಷಗಳ ನಂತರ ಆಕಾಶದಲ್ಲಿ ನಿಮಗೆ ದೊಡ್ಡ ಚಂದ್ರನು ಕಾಣಿಸುತ್ತಾನೆ .ಕಾರ್ತಿಕ ಮಾಸದ ಈ ಪೂರ್ಣ ಚಂದ್ರನಿಗೆ ಸೂಪರ್ ಮೂನ್ ಎಂದು ಹೆಸರು .

 

 

ನವೆಂಬರ್‌  ತಿಂಗಳಿನ ನಾಲ್ಕನೇ ತಾರೀಖಿನಂದು  ಬರುವ ಕಾರ್ತಿಕ ಪೌರ್ಣಮಿಯ  ಚಂದ್ರನನ್ನು ನೋಡುವುದನ್ನು ಮರೆಯಬೇಡಿ. ಇದೇ ಕಾರ್ತಿಕ ಮಾಸದಲ್ಲಿ ಬರುತ್ತಿರುವ ಕಾರ್ತಿಕ ಪೂರ್ಣಮಿಯ ದಿನ  ಚಂದ್ರನು ಅತ್ಯಂತ ದೊಡ್ಡದಾಗಿ ಅಂದರೆ ಸುಮಾರು ಮೊದಲು ಇರುವುದಕ್ಕಿಂತ ಹದಿನಾಲ್ಕು ಪರ್ಸೆಂಟ್ ದೊಡ್ಡದಾಗಿ ಆಕಾಶದಲ್ಲಿ  ಕಾಣಿಸುತ್ತಾನೆ.ಈ ದೊಡ್ಡ ಚಂದ್ರನಿಗೆ ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಇದನ್ನು ನಾಸ ದೃಢೀಕರಿಸಿದೆ .

ಇನ್ನು ಚಂದ್ರನ ಬಗ್ಗೆ ನಮಗೆಲ್ಲರಿಗೂ ಗೊತ್ತೇ ಇದೆ ಪೌರ್ಣಮಿಯ ದಿನ ಬರುವ ಆ ಚಂದ್ರನ ಬೆಳಕನ್ನು ನೋಡಿದರೆ ನಮಗೆ ಖುಷಿಯಾಗುವುದು. ಆಕಾಶದಲ್ಲಿ  ಪೂರ್ಣ ಚಂದ್ರನನ್ನು ನೋಡಿದರೆ ಬಹಳಷ್ಟು ಹೆಚ್ಚು  ಸುಂದರವಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸುತ್ತಾನೆ. ಎಂಥವರೂ ಸಹ  ಆಕಾಶದಲ್ಲಿ ಈ ಚಂದ್ರನನ್ನು ನೋಡಿದರೆ  ಖುಷಿ ಪಡುತ್ತಾರೆ. ಅದರಲ್ಲೂ ಸೂಪರ್ ಮೂನ್ ನಂತಹ ದೊಡ್ಡ ಚಂದ್ರನನ್ನು ನೋಡಿದರೆ ಮತ್ತಷ್ಟು ಹೆಚ್ಚಾಗಿ  ಖುಷಿಯನ್ನು  ಪಡುತ್ತಾರೆ.

ಸುಮಾರು ಇಪ್ಪತ್ತು ವರ್ಷಗಳ ನಂತರ ಕಾಣಿಸುತ್ತಿರುವ ಇನ್ ಸೂಪರ್ ಮೂನ್ ಈ ವರ್ಷ ನೀವು ನೋಡದೆ ಹೋದರೆ ಮತ್ತೆ  ನಿಮಗೆ ಈ ಸೂಪರ್ ಮೂನ್ ನೋಡಲು ಸಿಗುವುದು 2034 ನೇ ವರ್ಷದಲ್ಲಿಯೇ.ಅಲ್ಲಿಯವರೆಗೂ ನೀವು ಕಾಯಬೇಕಾಗುವುದು.

ಇಷ್ಟು ದಿನ ಆಕಾಶದಲ್ಲಿ ಪೂರ್ಣ ಚಂದ್ರನನ್ನು  ನೋಡುವಾಗ ಯಾವ ರೀತಿಯಲ್ಲಿ ಚಂದ್ರನ ಪ್ರಜ್ವಲಿಸುತ್ತಿದ್ದನೋ  ಅದಕ್ಕಿಂತ ಮೂವತ್ತು ಪ್ರತಿಶತ  ಹೆಚ್ಚು ಜಾಸ್ತಿ ಪ್ರಜ್ವಲಿಸುತ್ತಾನೆ. ಈ ಕಾರ್ತಿಕ  ಪೌರ್ಣಮಿಗೆ ತ್ರಿಪುರಿ ಪೂರ್ಣಿಮಾ ಮತ್ತು ಗಂಗಾ ಸ್ನಾನ ಎಂದು ಸಹ ಕರೆಯಲಾಗುತ್ತದೆ .

 

ಕಾರ್ತಿಕ ಪೌರ್ಣಮಿಯನ್ನು ತ್ರಿಪುರಿ ಪೂರ್ಣಿಮಾ  ಎಂದು ಏಕೆ ಕರೆಯಲಾಗುತ್ತದೆ ?

 

 

ಭಗವಂತನಾದ ಮಹಾಶಿವನು ಈ ಕಾರ್ತಿಕ ಮಾಸದಲ್ಲಿ ಬರುವ ಈ ಪೌರ್ಣಮಿಯ ದಿನವೇ ತ್ರಿಪುರಾಸುರ ಎಂಬ ರಾಕ್ಷಸನನ್ನು ಸಂಹರಿಸಿದ ಕಾರಣ. ಈ ಕಾರ್ತಿಕ ಮಾಸದ ಪೌರ್ಣಮಿಗೆ  ತ್ರಿಪುರಿ  ಪೌರ್ಣಮಿ ಎನ್ನುವ ಹೆಸರು ಬಂತು .

ಈ ದಿನ ಶಿವ ದೇವನ ದರ್ಶನ ಮಾಡಿ ಶಿವನಿಗೆ ಪೂಜೆ ಪ್ರಾರ್ಥನೆ ಮಾಡುವುದರಿಂದ ಏಳು ಜನ್ಮಗಳ ಪಾಪಗಳು ಕಳೆದು ಪುಣ್ಯ ಲಭಿಸುವುದು ಎಂದು ಸಹ ಹೇಳಲಾಗಿದೆ. ಜೊತೆಯಲ್ಲಿ   ಸಿರಿವಂತರು ಜ್ಞಾನಿಗಳು  ಸಹ ಆಗುತ್ತಾರೆ.

 

 

ನಮ್ಮ ಇಡೀ ಸೌರ ಮಂಡಲದಲ್ಲಿಯೇ ಈ ಚಂದ್ರ ಗ್ರಹವನ್ನು ಐದನೇ ಅತ್ಯಂತ ದೊಡ್ಡ ಗ್ರಹ ಎಂದು ಪರಿಗಣಿಸಲಾಗಿದೆ.ಇದು ವಿಶಾಲ ಪ್ರಕೃತಿಯನ್ನು  ಹೊಂದಿರುವ  ಗ್ರಹವಾಗಿದೆ .

 

ಕಾರ್ತಿಕ ಪೌರ್ಣಮಿಯ  ಗಂಗಾಸ್ನಾನ ಎಂದು ಏಕೆ ಕರೆಯಲಾಗುತ್ತದೆ ?

 

ಇದು ಸಂತತಿ ಮತ್ತು ಪ್ರೀತಿಯನ್ನು ಸೂಚಿಸುತ್ತದೆ. ಈ ಸೃಷ್ಟಿಯ ಆರಂಭದಿಂದಲೂ ಸಹ ಕಾರ್ತಿಕ ಮಾಸಕ್ಕೆ ವಿಶೇಷವಾದ ಮಹತ್ವವಿದ್ದು ಇದರ ಮಹತ್ವವೂ ವೈಷ್ಣವ ಭಕ್ತರಿಗೆ ಮಾತ್ರವಲ್ಲ ಬದಲಾಗಿ ಶೈವ ಭಕ್ತರಿಗೂ ಸಹ ಇದೆ. (ಶೈವ ಎಂದರೆ ವಿಷ್ಣು).

ಪುರಾಣ ಕಥೆಗಳ ಪ್ರಕಾರ ಭಗವಂತನಾದ ಶಿವನು ತ್ರಿಪುರಾಸುರನನ್ನು ಸಂಹರಿಸಿದರೆ, ಭಗವಂತನಾದ ವಿಷ್ಣುವು ತನ್ನ ಮತ್ಸ್ಯ ಅವತಾರವನ್ನು ಸಹ ಇದೇ ದಿನ ಅವತರಿಸಿದ್ದು ಆದ್ದರಿಂದಲೇ ಶೈವ ಭಕ್ತರಿಗೂ ಸಹ ಕಾರ್ತಿಕ ಪೌರ್ಣಮಿಯು ಬಹಳ ವಿಶೇಷವಾದ ಮಹತ್ವವನ್ನು ಹೊಂದಿದೆ.

 

 

ಕಾರ್ತಿಕ ಪೌರ್ಣಮಿಯ ಸ್ನಾನದ ಮಹತ್ವ ….

 

ಕಾರ್ತಿಕ ಮಾಸದಲ್ಲಿ ಬರುವ ಕಾರ್ತಿಕ ಪೌರ್ಣಮಿಯ ಒಂದು ದಿನ ಗಂಗಾ ಸ್ನಾನ ಮಾಡಿದರೆ ವರ್ಷಪೂರ್ತಿ ಗಂಗಾ ಸ್ನಾನ ಮಾಡಿದಷ್ಟು ಪುಣ್ಯ ಲಭಿಸುವುದು ಎಂದು ಹೇಳಲಾಗಿದೆ.

ಪವಿತ್ರ ನದಿಗಳಾದ ಗಂಗಾ, ಯಮುನಾ, ನರ್ಮದಾ, ಸಿಂಧು, ಕಾವೇರಿ ನದಿಗಳಲ್ಲಿ ಸ್ಥಾನವನ್ನು ಸಾಮಾನ್ಯವಾಗಿ ಜನರು ಮಾಡುತ್ತಾರೆ.

ಕಾರ್ತಿಕ ಪೌರ್ಣಮಿಯ ದಿನ ದಾನದ ಮಹತ್ವವೂ ಬಹಳಷ್ಟಿದೆ.ಈ ದಿನ ದಾನ ಮಾಡಿದರೆ ಮರಣವಾದ ನಂತರ ಸೀದಾ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಸಹ ಇದೆ . ದಾನ ಎಂದರೆ ಅನ್ನ, ಆಹಾರ, ಬಟ್ಟೆಗಳನ್ನು ನಿಮ್ಮ ಯೋಗ್ಯತೆಗೆ ತಕ್ಕಂತೆ ದಾನ ಮಾಡಬಹುದು.

ಇನ್ನೂ ಕಾರ್ತಿಕ ಮಾಸದಲ್ಲಿ ದ್ವಿದಳ ಧಾನ್ಯಗಳು ನಿಷೇಧ, ಬ್ರಹ್ಮಚರ್ಯ ಪಾಲನೆ ಮಾಡಬೇಕು. ನೆಲದ ಮೇಲೆ ಮಲಗಬೇಕು ದೀಪದಾನ ಮಾಡುವುದರಿಂದ ಮನುಷ್ಯನ ಆಯಸ್ಸು ಹೆಚ್ಚಾಗಿ ದೀರ್ಘಾಯಸ್ಸು ಸಹ ದೊರೆಯುವುದು. ಜತೆಗೆ ತುಳಸಿಯ ಪೂಜೆಗೂ ಬಹಳ ಮಹತ್ವವಿದೆ. ಆದ್ದರಿಂದ ತುಳಸಿ ಪೂಜೆಯನ್ನು ಸಹ ಕಾರ್ತಿಕ ಮಾಸದಲ್ಲಿ ಮಾಡಬೇಕು.

ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಕಾರ್ತಿಕ ಮಾಸದಲ್ಲಿ ಬರುವ ಈ ಕಾರ್ತಿಕ ಪೌರ್ಣಮಿಯ ದಿನ ಸೂಪರ್ ಮೂನ್ ನೋಡುವುದನ್ನು ಮರೆಯಬೇಡಿ. ಹಾಗೆ ಶಿವ ದೇವರನ್ನು ಪೂಜಿಸಿ, ಶಿವನನ್ನು ಪ್ರಸನ್ನಗೊಳಿಸಿ, ಶಿವನ ಆಶೀರ್ವಾದವನ್ನು ಪಡೆದು ಶಿವನ ಕೃಪೆಗೆ ಪಾತ್ರರಾಗಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top