fbpx
ಮನೋರಂಜನೆ

“ಅವನೇ ಶ್ರೀಮನ್ನಾರಾಯಣ” ಚಿತ್ರಕ್ಕಾಗಿ ಕಂಪ್ಲೀಟ್ ಬದಲಾದ ರಕ್ಷಿತ್: ಹೇಗಿದೆ ನೋಡಿ ರಕ್ಷಿತ್ ಶೆಟ್ಟಿ ಹೊಸ ಲುಕ್..!

ಅವನೇ ಶ್ರೀಮನ್ನಾರಾಯಣ ಚಿತ್ರಕ್ಕಾಗಿ ಕಂಪ್ಲೀಟ್ ಬದಲಾದ ರಕ್ಷಿತ್: ಹೇಗಿದೆ ನೋಡಿ ರಕ್ಷಿತ್ ಶೆಟ್ಟಿ ಹೊಸ ಲುಕ್..!

 

 

ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ಯುವ ಪೀಳಿಗೆಯಲ್ಲಿ ಅತ್ಯಂತ ಪ್ರಸಿದ್ದಿಯಾಗಿರುವ ಕನ್ನಡ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರು ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದು ತಮ್ಮ ಮುಂದಿನ ಚಿತ್ರಕ್ಕೆ ಸಕತ್ ತಯಾರಿ ನಡೆಸುತ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾ ತೆರೆಕಂಡು ಒಂದು ವರ್ಷ ಕಳೆಯುತ್ತಾ ಬಂದರೂ ರಕ್ಷಿತ್ ಶೆಟ್ಟಿಯ ಯಾವ ಚಿತ್ರ ಕೂಡ ಇನ್ನು ಸಿದ್ಧವಾಗಿಲ್ಲ..ಮುಂದೆ ಓದಿ

 

 

ತಮ್ಮ ಮುಂದಿನ ಚಿತ್ರ ಅವನೇ ಶ್ರೀಮನ್ನಾರಾಯಣಕ್ಕಾಗಿ ಬರೋಬ್ಬರಿ 9ಕೆಜಿ ತೂಕ ಇಳಿಸಿಕೊಂಡಿರುವ ರಕ್ಷಿತ್ ಕಳೆದ ಮೂರು ತಿಂಗಳಿಂದ ಜಿಮ್ ನಲ್ಲಿ ಬೀದರ ಹೂಡಿದ್ದು ಸಕತ್ ವರ್ಕೌಟ್ ಮಾಡುತ್ತಿದ್ದಾರೆ.ಈ ಚಿತ್ರಕ್ಕಾಗಿ ಶಾರ್ಟ್ ಹೇರ್ ಸ್ಟೈಲ್ ಮಾಡಿಸಿಕೊಂಡು ರಕ್ಷಿತ್ ಲುಕ್ ಕಂಪ್ಲೀಟ್ ಬದಲಾಗ್ತಿದೆ. ರಕ್ಷಿತ್ ಅವರ ಹೊಸ ಲುಕ್ ಡಿಸೆಂಬರ್ ತಿಂಗಳಲ್ಲಿ ಹೊರಬೀಳಲಿದೆ ಎಂದು ಹೇಳುತ್ತಾರೆ. ಈ ಚಿತ್ರದಲ್ಲಿರುವ ರಕ್ಷಿತ್ ಶೆಟ್ಟಿಯವರ ಲುಕ್ ಫುಲ್ ಮಾಸ್ ಫೀಲ್ ಕೊಡುತ್ತದೆ ಎಂದು ತಿಳಿದುಬಂದಿದೆ.

 

 

ಸದ್ಯ ಅವರು ಜಿಮ್ ನಲ್ಲಿ ಇರುವ ಎರಡು ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿವೆ. ಜನವರಿಯಿಂದ ಶೂಟಿಂಗ್ ಸ್ಟಾರ್ಟ್ ಆಗಲಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ನವ ನಿರ್ದೇಶಕ ಸಚಿನ್ ಆಕ್ಷನ್ ಕಟ್ ಹೇಳ್ತಿದ್ದಾರೆ.ಪುಷ್ಕರ್ ಸಿನಿಮಾಸ್ ಹಾಗೂ ಪರಂವಾ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top