fbpx
ದೇವರು

ನವೆಂಬರ್ 4 ರಂದು ಕಾರ್ತಿಕ ಪೌರ್ಣಮಿಯ ದಿನ ಈ ರೀತಿ ಶಿವನ ಪೂಜೆ ಮಾಡಿದ್ರೆ ಹಣ, ಸಂತಾನ , ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರೋರು ತಮ್ಮ ಕಷ್ಟಗಳನ್ನ ಕಳ್ಕೋಬಹುದು

ನವೆಂಬರ್ ನಾಲ್ಕು ಕಾರ್ತಿಕ ಪೌರ್ಣಮಿಯ ದಿನ ಅವಶ್ಯವಾಗಿ ಆಚರಿಸಿ ಪುಣ್ಯವನ್ನು ಸಂಪಾದಿಸಿ.

 

 

ಇದೇ ಕಾರ್ತಿಕ ಮಾಸದ, ಶುಕ್ಲ ಪಕ್ಷದಲ್ಲಿ ಬರುವ ಕಾರ್ತಿಕ ಪೂರ್ಣಿಮೆಯ ದಿನ ಅಂದರೆ ನವೆಂಬರ್ ನಾಲ್ಕು, ಭರಣಿ ನಕ್ಷತ್ರದಲ್ಲಿ ಬಂದಿರುವ ಕಾರ್ತಿಕ ಪೌರ್ಣಮಿಯ ದಿನ ಬಹಳ ವಿಶೇಷವಾಗಿದೆ. ಆದ್ದರಿಂದ ಇವುಗಳನ್ನು ಪಾಲಿಸಿ ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಿರಿ .

ಈ ಕಾರ್ತಿಕ ಮಾಸದಲ್ಲಿ ಸೂರ್ಯನ ಕಿರಣಗಳು ನಮ್ಮ ಶರೀರದ ಮೇಲೆ ಬೀಳುವುದರಿಂದ ಅವು ಔಷಧಿಯಾಗಿ ಪರಿಣಮಿಸಿ ಚಮತ್ಕಾರಿ ಪ್ರಭಾವವನ್ನು ಸಹ ಬೀರುತ್ತವೆ. ಕಾರ್ತಿಕ ಪೌರ್ಣಮಿಯ ದಿನ ರಾತ್ರಿ ಚಂದ್ರನು ಕೂಡ ನಮಗೆ ಲಾಭವನ್ನು ತೆಗೆದುಕೊಂಡು ಬರುತ್ತಾನೆ .ಆದ್ದರಿಂದ ನಮಗೆ ಕಾರ್ತಿಕ ಪೂರ್ಣಿಮೆಯ ದಿನ ಚಂದ್ರನ ಬೆಳಕಿನಲ್ಲಿ ನಾವು ಸ್ವಲ್ಪ ಸಮಯವನ್ನು ಕಳೆಯುವುದರಿಂದ ಅಥವಾ ಬೆಳಕಿನಲ್ಲಿ ಕುಳಿತುಕೊಳ್ಳುವುದರಿಂದ ಎಲ್ಲ ರೀತಿಯಲ್ಲೂ ನಮಗೆ ದೇಹಕ್ಕೂ ಸಹ ಒಳಿತಾಗುವುದು.

 

 

ನಮಗೆ ನಮ್ಮ ಕಣ್ಣುಗಳು ಪ್ರಕಾಶಮಾನವಾಗಿ ಹೊಳಪಿನಿಂದ ಕಂಗೊಳಿಸಬೇಕು ಎಂಬ ಆಸೆಯಿದ್ದರೆ ಕಾರ್ತಿಕ ಪೂರ್ಣಿಮೆಯ ದಿನ ಚಂದ್ರನ ಬೆಳಕಿನಲ್ಲಿ ಕೆಲವು ಸಮಯದವರೆಗೆ ಚಂದ್ರನನ್ನು  ನೋಡುತ್ತಲೇ ಇರಬೇಕು. ಹೀಗೆ ನೋಡುವುದರಿಂದ ನಮ್ಮ ಕಣ್ಣುಗಳಿಗೆ ಚಂದ್ರನ ಶೀತಲ ವಾತಾವರಣದಿಂದ ಬರುವ ಕಿರಣಗಳು ನಮ್ಮ ಕಣ್ಣಿನ ಮೇಲೆ ಬಿದ್ದು ಕಣ್ಣು ಕೂಡ ಶಾಂತವಾಗುತ್ತದೆ ಅಂದರೆ ನಮ್ಮ ಕಣ್ಣುಗಳಿಗೆ ತಣ್ಣನೆಯ ಅನುಭವವಾಗುವುದು.

ಕಾರ್ತಿಕ ಪೂರ್ಣಿಮಿಯ ದಿನ ರಾತ್ರಿ ಶಿವನಿಗೆ  ಪ್ರಸಾದವನ್ನು ಅರ್ಪಿಸಬೇಕು. ನಂತರ ಇದನ್ನು ಪ್ರಸಾದವಾಗಿ ಸೇವಿಸಿದರೆ ಮತ್ತು ಇತರರಿಗೂ ಕೊಟ್ಟರೆ ಮಾನಸಿಕ ಶಾಂತಿಯೂ ದೊರೆಯುವುದರ ಜತೆಗೆ ಅಧಿಕ ಲಾಭವೂ ಸಹ ಆಗುವುದು. ಈ ಕೀರ್ ಪ್ರಸಾದವು ಆರೋಗ್ಯಕ್ಕೂ ಸಹ ಒಳ್ಳೆಯದು .

 

 

ಕಾರ್ತಿಕ ಪೂರ್ಣಿಮೆಯ ದಿನ ರಾತ್ರಿ ಹನುಮಂತ ದೇವರ ಮುಂದೆ ಪಂಚಮುಖಿ ದೀಪವನ್ನು ಬೆಳಗಿಸಿ .ಇದಕ್ಕಾಗಿ ನೀವು ಒಂದು ಮಣ್ಣಿನ ದೀಪವನ್ನು ತೆಗೆದುಕೊಂಡು ಬಂದು ಅದರಲ್ಲಿ ಎಣ್ಣೆ ಅಥವಾ ತುಪ್ಪವನ್ನು ಹಾಕಿ ದೀಪದ ಐದು ದಿಕ್ಕಿನಲ್ಲಿಯೂ ಸಹ ಎರಡೆರಡು ಬತ್ತಿಯನ್ನು ಹಾಕಬೇಕು. ಸೀತಾರಾಮ ಸೀತಾರಾಮ ಅಥವಾ ರಾಮರಾಮ ರಾಮರಾಮ ಎಂದು ಜಪಿಸಬೇಕು.

ಕಾರ್ತಿಕ ಪೌರ್ಣಮಿಯ ದಿನ ರಾತ್ರಿಯಲ್ಲಿ ಔಷಧೀಯ ಗುಣವುಳ್ಳ ರಾತ್ರಿ ಇದು ಎಂದು ಹೇಳಲಾಗಿದೆ. ಈ ರಾತ್ರಿ ಸೇವಿಸಿದ ಔಷಧಿಯಿಂದ ಬೇಗನೆ ಎಲ್ಲ ಕಾಯಿಲೆಗಳು ಗುಣಮುಖವಾಗುವ .ಯಾಕೆಂದರೆ ಈ ದಿನ ರಾತ್ರಿ ಸೇವಿಸಿದ ಔಷಧಿಯ  ಪರಿಣಾಮವೂ ನಮ್ಮ ದೇಹದ ಮೇಲೆ ಗಾಢವಾಗಿ ಪರಿಣಾಮ ಬೀರುವುದು. ನೀವು ಹಲವು ದಿನಗಳಿಂದ ಕಾಯಿಲೆಯಿಂದ ಬಳಲುತ್ತಿದ್ದರೆ ಅಥವಾ  ಭಯಾನಕ ರೋಗಗಳಿಂದ ಬಳಲುತ್ತಿದ್ದರೆ ಅಂಥವರು ಕಾರ್ತಿಕ ಪೌರ್ಣಮಿಯ ದಿನ ರಾತ್ರಿ ಔಷಧಿಯನ್ನು ಸೇವಿಸಿದರೆ ಅವು ಉತ್ತಮ ಫಲಿತಾಂಶ ತಂದು ಕೊಡುತ್ತವೆ.

ಕಾರ್ತಿಕ ಪೂರ್ಣಿಮೆಯ ದಿನ ರಾತ್ರಿ ಚಂದ್ರನು ಆಕಾಶದಲ್ಲಿ ಉದಯಿಸುವ ಸಮಯದಲ್ಲಿ  ಮೊದಲು ಚಂದ್ರನ ದರ್ಶನ ಮಾಡಿ ಮತ್ತು ಶಿವನ ಮುಂದೆ ಒಂದು ದೀಪವನ್ನು ಬೆಳಗಿಸಿ. ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸಿ .ದೀಪವನ್ನು ಬೆಳಗಿಸಿದ ನಂತರ ಮಹಾಮೃತ್ಯುಂಜಯ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ. ನಿಮಗೆ ಅದನ್ನು ಹೇಳಲು ಕಷ್ಟವಾದರೆ ಶಿವನ ಪಂಚಾಕ್ಷರಿ ಮಂತ್ರವಾದ

“ಓಂ ನಮಃ ಶಿವಾಯ” ಎಂದು ಜಪಿಸಿರಿ.

ಮಹಾಮೃತ್ಯುಂಜಯ ಮಂತ್ರ ಈ ರೀತಿಯಾಗಿದೆ

“ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ  ಊರವಾಮುಕೇವ ಬಂಧನಾತ್   ಮೃತ್ಯೋರ್ಮುಕ್ಷಿ  ಮಹಾಮೃತಾತ್”  

ಈ ಮಂತ್ರವನ್ನು ನೂರ ಎಂಟು ಬಾರಿ ಜಪಿಸಿ .ಇದು ಅತ್ಯಂತ ಲಾಭಕಾರಿಯಾಗಿದೆ.

ಚಂದ್ರನು ಕಾರ್ತಿಕ ಪೂರ್ಣಿಮೆಯ ದಿನ 180 ಡಿಗ್ರಿಗಳಲ್ಲಿ ಇರುತ್ತಾನೆ. ಆದ್ದರಿಂದ ಚಂದ್ರನು ಭೂಮಿಗೆ ಬಹಳ ಸಮೀಪವಿರುವ ಗ್ರಹವಾದ್ದರಿಂದ ಚಂದ್ರನ ಮೇಲಿನಿಂದ ಬರುವ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುವವು ಮತ್ತು ಚಂದ್ರನ ಪ್ರಭಾವವೂ ಸಹ ಹೆಚ್ಚಾಗಿ ಈ ದಿನ ಇರುವುದು. ಚಂದ್ರನ ಕಿರಣಗಳು ಈ ದಿನ ನಮಗೆ ಒಳ್ಳೆಯದನ್ನು ಉಂಟು ಮಾಡುತ್ತವೆ . ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ, ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಿ . ಚಂದ್ರನ ಕಿರಣಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಸಹ ಬಹಳ ಲಾಭಕಾರಿ ಔಷಧಿಯಾಗಿ ಪರಿಣಮಿಸುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top