fbpx
ಉಪಯುಕ್ತ ಮಾಹಿತಿ

ಬಿಸಿಲಿನಿಂದ ನಮಗೆ D (ಡಿ) ಅನ್ನಸತ್ವ ಹೇಗೆ ದೊರೆಯುತ್ತದೆ?

ಬಿಸಿಲಿನಿಂದ ನಮಗೆ D (ಡಿ) ಅನ್ನಸತ್ವ ಹೇಗೆ ದೊರೆಯುತ್ತದೆ?

Image result for vitamin d

D ಅನ್ನಸತ್ವವು (ವಿಟಮಿನ್) ಕೊಬ್ಬಿನಲ್ಲಿ ಕರಗುವ ಸುಮಾರು ಹತ್ತು ವಿಭಿನ್ನ ರಾಸಾಯನಿಕಗಳ ಗುಂಪು. ಈ ಹತ್ತರಲ್ಲಿ ಮುಖ್ಯವಾದವು ಎರಡು. ಮನುಷ್ಯನಲ್ಲಿರುವ ಕೋಲೆ ಕ್ಯಾಲ್ಸಿಫೆರಾಲ್ ಅಥವಾ ಡಿ 3 ಅನ್ನಸತ್ವ ಮತ್ತು ಸಸ್ಯಗಳಲ್ಲಿರುವ ವಿರ್ಗೂ ಕ್ಯಾಲ್ಸಿಫೆರಾಲ್ ಅಥವಾ ಡಿ2 ಅನ್ನಸತ್ವ ಇವೆರಡೂ ಕೂಡ ಟಿಸಿಲಿನ ಸಹಾಯದಿಂದ ಕೆಲವು ರಾಸಾಯನಿಕಗಳಲ್ಲಾಗುವ ಬದಲಾವಣೆಗಳಿಂದ ಉತ್ಪನ್ನವಾದಂತಹವು.

Related image

ಮನುಷ್ಯನಲ್ಲಿ ಚರ್ಮ ಕೊಲೆಸ್ಟರಾಲ್ ನಿಂದ ಹುಟ್ಟಿದ ಡಿಹೈಡ್ರೊ ಕೊಲೆಸ್ಟ್ರಾಲ್ ಎಂಬ ಸಂಯುಕ್ತವನ್ನು ಸ್ರವಿಸುತ್ತದೆ. ಬಿಸಿಲಿನಲ್ಲಿರುವ ಊದಾತೀತ (ultraviolet) ಕಿರಣಗಳು ಈ ಸಂಯುಕ್ತವನ್ನು ಹಲವು ರಸಾಯನಿಕ ಕ್ರಿಯೆಗಳ ಮೂಲಕ ಡಿ-3 ಜೀವಸತ್ವ ಅಥವಾ ಕೋಲೆ ಕ್ಯಾಲ್ಸಿಫೆರಾಲ್ ಆಗಿ ಪರಿವರ್ತಿಸುತ್ತದೆ.

Related image

ಹೀಗೆ ಉತ್ಪನ್ನವಾದ ಡಿ—3 ಜೀವಸತ್ವ ಕೊರತೆಯಿಂದ ಉಂಟಾಗುವ ರಿಕೆಟ್ಸ್ (rickets) ಅಥವಾ ಮೂಳೆಯ ನಶಿಸುವಿಕೆ ಉಷ್ಣವಲಯದಲ್ಲಿರುವ ಮಕ್ಕಳಲ್ಲಿ ಅಪರೂಪವಾಗಿದ್ದು ಬಿಸಿಲು ಕಡಿಮೆ ಬೀಳುವ ಸಮಶೀತೋಷ್ಣ ವಲಯದಲ್ಲೇ (temperate zone) ಹೆಚ್ಚು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top