fbpx
ಸಮಾಚಾರ

ಅಂಬಿ ಮತ್ತು ವಿಜಯ್ ಮಲ್ಯ ಸೇರಿ ಕನ್ನಡ ರಾಜ್ಯೋತ್ಸವವನ್ನು ಹೇಗೆ ಆಚರಿಸುತ್ತಿದ್ದರು ಗೊತ್ತಾ?

ಅಂಬಿ ಮತ್ತು ವಿಜಯ್ ಮಲ್ಯ ಸೇರಿ ಕನ್ನಡ ರಾಜ್ಯೋತ್ಸವವನ್ನು ಹೇಗೆ ಆಚರಿಸುತ್ತಿದ್ದರು ಗೊತ್ತಾ?

 

 

 

 

ಮೈತುಂಬ ಸಾಲಮಾಡಿ ಸಾಲ ತೀರಿಸದೆ ಲಂಡನ್ ನಲ್ಲಿ ಹೋಗಿ ತಲೆ ಮರೆಸಿಕೊಂಡಿರುವ ವಿಜಯ್ ಮಲ್ಯ ಮೊನ್ನೆ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ವೊಂದನ್ನು ಮಾಡಿದ್ದ ಈಗ ಆ ಟ್ವೀಟ್ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿದೆ.. ಆ ಟ್ವೀಟ್ ಏನು ಅಂತೀರಾ ಮುಂದೆ ಓದಿ.

 

 

‘ನಾನು ಈ ಭಾರಿಯ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ.. ಹಿಂದೆಲ್ಲ ನಾನು ಮತ್ತು ಅಂಬರೀಷ್ ರಾತ್ರಿಯಿಂದ ಬೆಳಗಿನ ಜಾವದವರೆಗೆ ಮದ್ಯವನ್ನು ಸೇವಿಸುತ್ತಾ ಕನ್ನಡೇತರ ಮತ್ತು ಪರಭಾಷಿಕರಿಗೆ ಹಿಗ್ಗಾಮುಗ್ಗಾ ಬೈಯುತ್ತಿದ್ದೆವು. ಆ ದಿನಗಳು ಸಕತ್ ಮಜವಾದ ದಿನಗಳವು” ಎಂದು ಟ್ವೀಟ್ ಮಾಡಿದ್ದಾರೆ.

 

 

ಈ ಟ್ವೀಟ್ ಬಗ್ಗೆ ಮತ್ತಷ್ಟು ಆಳವಾಗಿ ವಿಚಾರಿಸಿದಾಗ ಈ ಟ್ವೀಟ್ ಮಲ್ಯರ ಹೆಸರಿನಲ್ಲಿರುವ ಫೇಕ್ ಖಾತೆಯಿಂದ ಮಾಡಲಾಗಿದೆ ಎಂಬುದು ಗೊತ್ತಾಗಿದೆ. ಮಲ್ಯರ ವೆರಿಫೈಡ್ ಟ್ವೀಟರ್ ಖಾತೆ ಬೇರೆಯೇ ಇದೆ. ಆದರೆ, ಎರಡರಲ್ಲೂ ಮಲ್ಯರ ಫೋಟೋ, ಖಾತೆಯ ಹೆಸರು ಸೇರಿದಂತೆ ಬೇರೆಲ್ಲ ವಿವರಗಳು ಒಂದೇ ರೀತಿಯಲ್ಲಿರುವುದರಿಂದ ಈ ಟ್ವೀಟ್ ಅನ್ನು ಸ್ವತಃ ಮಲ್ಯರವರೇ ಮಾಡಿದ್ದಾರೆ ಎಂದು ಜನರು ತಿಳಿದುಕೊಂಡು ವೈರಲ್ ಮಾಡಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top