fbpx
ಆರೋಗ್ಯ

ಅಪಧಮನಿಗಳು ರಕ್ತನಾಳ ಇಡೀ ದೇಹಕ್ಕೆ ರಕ್ತ ಸಂಚರಿಸಲು ಸಹಾಯ ಮಾಡುತ್ತೆ ಒಂದು ವೇಳೆ ಇದು ಮುಚ್ಚಿಕೊಂಡ್ರೆ ಜೀವಕ್ಕೆ ಅಪಾಯ ಹಾಗಾಗ್ಬಾರ್ದು ಅಂದ್ರೆ ಈ ಪರಿಹಾರ ಮಾಡ್ಕೊಳ್ಳಿ

ಮುಚ್ಚಿಹೋಗಿರುವ  ರಕ್ತನಾಳಗಳನ್ನು ತೆರವು ಗೊಳಿಸಲು ಮನೆಮದ್ದು:

 

 

 

ಅಪಧಮನಿಗಳು ರಕ್ತನಾಳವಾಗಿದ್ದು ನಮ್ಮ ಇಡೀ ದೇಹಕ್ಕೆ ರಕ್ತ ಸಂಚರಿಸಲು ಸಹಾಯ ಮಾಡುತ್ತದೆ .ಕೆಲವರಿಗೆ ಈ ರಕ್ತನಾಳಗಳ ಮೂಲಕ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ ಇನ್ನೂ ಕೆಲವರಿಗೆ ಈ ರಕ್ತನಾಳಗಳು ಮುಚ್ಚಿ ಹೋಗಿರುತ್ತದೆ.ರಕ್ತನಾಳಗಳಲ್ಲಿ ಪ್ಲೇಕ್ ಎನ್ನುವ ಒಂದು ವಸ್ತು ಬೆಳೆದು ಈ ರಕ್ತನಾಳಗಳನ್ನು ಮುಚ್ಚಿ ಹಾಕುತ್ತದೆ,ಇದರಿಂದ ರಕ್ತ ಸಂಚಾರ ಕಡಿಮೆ ಹಾಗುವುದರ ಜೊತೆ ಹೃದಯ ಸಮಸ್ಯೆ ,ಪಾರ್ಶ್ವ ಮತ್ತು  ನಾನಾ ಆರೋಗ್ಯ ಸಮಸ್ಯೆ ಬಂದು ಕೊನೆಗೆ ಸಾವಿಗೆ ಗುರಿಯಾಗಬೇಕಾಗುತ್ತದೆ.

 

ರಕ್ತನಾಳಗಳನ್ನು ಮುಚ್ಚಿಕೊಳ್ಳುವ ಸಮಸ್ಯೆಗೆ ಮುಖ್ಯ ಕಾರಣಗಳು:

 

1  .ಧೂಮಪಾನ ಮಾಡುವುದು

2  .ತುಂಬಾ ದಪ್ಪ ಇರುವುದು

3 ಅಧಿಕ ರಕ್ತದೊತ್ತಡ

4 ಮಧುಮೇಹ ಸಮಸ್ಯೆ

5 ದೇಹದಲ್ಲಿ ಅಧಿಕ ಕೊಬ್ಬಿನ ಅಂಶ

 

ಈ ಸಮಸ್ಯೆಯ ಮುನ್ಸೂಚನೆಗಳು:

 

1 ಎದೆ ನೋವು

2 .ಜಾಸ್ತಿ ದೇಹ ಜೋಮ್ ಇಡಿಯುತ್ತೆ

3 ಉಸಿರಾಡಿಲು ತೊಂದರೆ ಆಗ್ತಾ ಇರುತ್ತೆ

4 .ಹೃದಯ ಬಡಿತ ಸರಿಯಾಗಿ ಆಗ್ತಾಇರಲ್ಲ .

5 ಹೊಟ್ಟೆ ಹಸಿವು ಆಗ್ತಾಇರಲ್ಲ

6 ದೇಹದಲ್ಲಿ ತುಂಬಾ ಬೆವರು ಬರುತ್ತಾ ಇರುತ್ತೆ.

7 ತುಂಬಾ ಸುಸ್ತ್ ಆಗ್ತಾ ಇರುತ್ತೆ

 

ಈ ಸಮಸ್ಯೆಯಿಂದ ಹೊರ ಬರಲು ಕೆಲವು ಮನೆಮದ್ದನ್ನು ನಾವು ನಿಮಗೆ ಹೇಳ್ತಿರಿ ಬನ್ನಿ:

 

1  ಅರಿಶಿನ:

 

 

ಅರಿಶಿನ  ರಕ್ತನಾಳಗಳನ್ನು ತೆರವು ಗೊಳಿಸಲು ಒಳ್ಳೆಯ ಮನೆಮದ್ದಾಗಿದ್ದು.ನಿಮ್ಮ ಹೃದಯ ಸರಾಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ .

೧.ಒಂದು ಲೋಟ ಬೆಚ್ಚಗಿನ ಹಾಲಿಗೆ ಒಂದು ಚಮಚ ಅರಿಶಿನ ಒಂದು ಚಮಚ ಜೇನಿನ ತುಪ್ಪ ಹಾಕಿಕೊಂಡು ಕುಡಿಯುವುದರಿಂದ ರಕ್ತನಾಳ ಸಮಸ್ಯೆ ಆದಷ್ಟು ಬೇಗ ಮಾಯವಾಗುತ್ತದೆ.

 

2 ಶುಂಠಿ :

 

ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಶುಂಠಿ ಮತ್ತು ಜೇನಿನ ತುಪ್ಪ ಸೇರಿಸಿ ದಿನಕ್ಕೆ ಒಂದು ಬಾರಿ ಕುಡಿಯಬೇಕು ಇಲ್ಲವಾದರೆ ಹಸಿ  ಶುಂಠಿಯನ್ನು  ಬೆಳ್ಳಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ  ನಿಮ್ಮ ರಕ್ತನಾಳ ಸಮಸ್ಯೆ ದೂರವಾಗುತ್ತದೆ.

 

3 ಬೆಳ್ಳುಳ್ಳಿ :

ಬೆಳ್ಳುಳ್ಳಿ ರಕ್ತನಾಳಗಳು ತೆರೆದು ಕೊಳ್ಳಲು  ಮತ್ತು ನಿಮ್ಮ ದೇಹದ ಕೊಬ್ಬಿನ ಅಂಶ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ದಿನ 3  ರಿಂದ 4 ಎಸಳು ಬೆಳ್ಳುಳ್ಳಿಯನ್ನು ಒಂದು ಲೋಟ ಹಾಲಿಗೆ ಹಾಕಿ ಕುಡಿಯಬೇಕು.

 

4 .ನಿಂಬೆ ಹಣ್ಣು:

 

 

ನಿಂಬೆ ಹಣ್ಣು ನಿಮ್ಮ ಯಾವುದೇ ಹೃದಯ ಸಂಬಂಧ ಸಮಸ್ಯೆಗಳಿಗೆ ರಾಮಬಾಣ, ಒಂದು ಲೋಟ ನೀರಿಗೆ ನಿಂಬೆ ರಸ ,ಜೇನಿನ ತುಪ್ಪ ಮತ್ತು ಸ್ವಲ್ಪ ಕರಿ ಮೆಣಸಿನ ಪುಡಿ ಹಾಕಿ ದಿನ ಒಂದು ಬಾರಿ ಸೇವಿಸಬೇಕು .

 

5 ಮೆಂತ್ಯ :

 

 

ಮೆಂತ್ಯದಲ್ಲಿ ಇರುವ ಫೈಬರ್ ತತ್ವ ದೇಹದ ಕೊಬನ್ನು ಕಡಿಮೆ ಮಾಡಿ ,ದೇಹ ಆರೋಗ್ಯವಾಗಿರುವಂತೆ ಮಾಡುತ್ತದೆ ರಾತ್ರಿ ಸ್ವಲ್ಪ ಮೆಂತ್ಯ ನೆನಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಸಮೇತ ಮೆಂತ್ಯ ತಿನ್ನಬೇಕು ಇಲ್ಲವಾದರೆ ಒಂದು ಸ್ವಲ್ಪ ಮೆಂತ್ಯವನ್ನು ಒಂದು ಲೋಟ ನೀರಿನ ಜೊತೆ ಕುದಿಸಿ ಅದಕ್ಕೆ ಸ್ವಲ್ಪ ಜೇನಿನ ತುಪ್ಪ ಬೆರೆಸಿ ಕುಡಿಯಬೇಕು .

 

6  ಕೆಂಪು ಅಕ್ಕಿ :

ಸ್ವಲ್ಪ ದಿನ ಕೆಂಪು ಅಕ್ಕಿಯಲ್ಲಿ ಅಡಿಗೆ ಮಾಡಿಕೊಂಡು ತಿನ್ನಿ ನಿಮ್ಮ ಯಾವುದೇ ಹೃದಯ ಸಂಬಂಧ ರೋಗ ಮಾಯವಾಗುತ್ತದೆ.

 

7 ದಾಳಿಂಬೆ:

 

 

ದಿನ ಒಂದು ದಾಳಿಂಬೆ ತಿನ್ನಿ ಅದು ನಿಮ್ಮ ದೇಹದ ರಕ್ತನಾಳಗಳ ಸಮಸ್ಯೆ ಹೋಗಲಾಡಿಸಿ ,ರಕ್ತ ಸಂಚಾರ ಸುಲಭವಾಗಿ ಆಗುವಂತೆ ಮಾಡುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top