fbpx
ಮನೋರಂಜನೆ

ಮನೆಯಲ್ಲೇ ಮೇಕೆ ಸಾಕಿಕೊಂಡಿದ್ದಾರೆ ದರ್ಶನ್!

ಮನೆಯಲ್ಲೇ ಮೇಕೆ ಸಾಕಿಕೊಂಡಿದ್ದಾರೆ ದರ್ಶನ್!

 

 

ರಾಜ ರಾಜೇಶ್ವರಿನಗರದಂಥಾ ಹೈಫೈ ಏರಿಯಾದಲ್ಲಿ ವಾಸವಿರೋ ದರ್ಶನ್ ತಮ್ಮ ಮನೆಯಲ್ಲಿಯೇ ಮೇಕೆಯೊಂದನ್ನು ಸಾಕಿಕೊಂಡಿದ್ದಾರೆಂಬುದು ಲೇಟೆಸ್ಟ್ ನ್ಯೂಸ್!ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿಯ ಬಗ್ಗೆ ಬಿಡಿಸಿ ಹೇಳೋ ಅಗತ್ಯವೇನಿಲ್ಲ. ಅವರ ಫಾರ್ಮ್ ಹೌಸ್, ಅಲ್ಲಿರೋ ಹಸು, ಕುದುರೆಗಳ ಕಥೆಯೆಲ್ಲ ಅಭಿಮಾನಿಗಳ ಪಾಲಿಗೆ ಹೊಸತೇನಲ್ಲ. ದರ್ಶನ್ ಮೈಸೂರು ಮೃಗಾಲಯದಲ್ಲಿನ ಕೆಲ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಲಹುತ್ತಿರೋದೂ ಕೂಡಾ ತಿಳಿದದ್ದೇ. ಇನ್ನು ಬೆಂಗಳೂರಿನ ದರ್ಶನ್ ಅವರ ಮನೆ ಮುಂದೆ ತರಹೇವಾರಿ ಪ್ರಬೇಧದ ನಾಯಿಗಳು ಕಾವಲಿಗಿರುತ್ತವೆ.

 

 

ಆದರೆ, ರಾಜ ರಾಜೇಶ್ವರಿನಗರದಂಥಾ ಹೈಫೈ ಏರಿಯಾದಲ್ಲಿ ವಾಸವಿರೋ ದರ್ಶನ್ ತಮ್ಮ ಮನೆಯಲ್ಲಿಯೇ ಮೇಕೆಯೊಂದನ್ನು ಸಾಕಿಕೊಂಡಿದ್ದಾರೆಂಬುದು ಲೇಟೆಸ್ಟ್ ನ್ಯೂಸ್! ಪ್ರಾಣಿಗಳ ಬಗ್ಗೆ ಅಪಾರವಾದ ವ್ಯಾಮೋಹ ಹೊಂದಿರೋ ದರ್ಶನ್ ಈ ಹಿಂದೆ ತಮ್ಮ ಮನೆಯಲ್ಲಿ ಮೇಕೆಯೊಂದನ್ನು ಸಾಕಿಕೊಂಡಿದ್ದರು. ಆದರೆ ಆ ಮೇಕೆ ಇತ್ತೀಚೆಗೆ ಪಕ್ಕದ ಸೈಟಿನಲ್ಲಿದ್ದ ಹಾವು ಕಚ್ಚಿ ಸತ್ತು ಹೋಗಿತ್ತು. ಆ ಮೇಕೆಯ ಸಾವಿನಿಂದ ದುಃಖಿತಯಾದ ದರ್ಶನ್ ಅವರು ಇದೀಗ ತಮ್ಮ ಮನೆಗೆ ಮತ್ತೊಂದು ಮೇಕೆಯನ್ನು ತಂದು ಸಾಕುತ್ತಿದ್ದಾರೆ…!

 

 

ರಾಜರಾಜೇಶ್ವರೀ ನಗರದಂಥಾ ಹೈಫೈ ಏರಿಯಾಗಳಲ್ಲಿ ಜನ ಚಿತ್ರ ವಿಚಿತ್ರವಾದ ನಾಯಿಗಳನ್ನು ಸಾಕೋದು ಮಾಮೂಲು. ಇವರಲ್ಲಿ ಹೆಚ್ಚಿನವರಿಗೆ ಅದೊಂದು ಪ್ರತಿಷ್ಠೆಯಷ್ಟೆ. ಆದರೆ ಇಂಥಾ ಏರಿಯಾದಲ್ಲಿದ್ದುಕೊಂಡು ಮೇಕೆ ಸಾಕಿಕೊಂಡಿರೋ ದರ್ಶನ್ ಅವರ ಪ್ರಾಣಿ ಪ್ರೀತಿ ನಿಜಕ್ಕೂ ಮೆಚ್ಚುವಂಥಾದ್ದೇ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top