fbpx
ಸಮಾಚಾರ

ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಯನ್ನು ಮಂಚದ ಸಮೇತ 8 ಕಿ.ಮೀ ಹೊತ್ತು ಸಾಗಿದ ಡಾಕ್ಟರ್..

ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಯನ್ನು ಮಂಚದ ಸಮೇತ 8 ಕಿ.ಮೀ ಹೊತ್ತು ಸಾಗಿದ ಡಾಕ್ಟರ್..

 

 

ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದ ಕಡೆಗಳಲ್ಲಿ ಗರ್ಭಿಣಿಯರನ್ನು ಅನೇಕ ಸಂದರ್ಭಗಳಲ್ಲಿ ತಮ್ಮ ಸಂಬಂಧಿಕರು ಎತ್ತಿನಗಾಡಿ ಮೂಲಕವೋ ಅಥವಾ ತಳ್ಳೋಗಾಡಿಗಳ ಮೂಲಕ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ ಎಂದು ನೀವು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಡಾಕ್ಟರ್ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಸುಮಾರು 8 ಕಿ.ಮೀ ದೂರ ಗರ್ಭಿಣಿಯೊಬ್ಬರನ್ನು ಮಂಚದ ಸಮೇತ ಹೊತ್ತೊಯ್ದು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರದೆ, ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ ತೋರುವ ವೈದ್ಯರಿಗೆ ಮಾದರಿಯಾಗಿದ್ದಾರೆ.

 

 

ಒಡಿಶಾದ ಮಾಲ್ಕಾಂಗಿರಿ ಜಿಲ್ಲೆಯ ಸರಿಗೆಟಾ ಎಂಬ ಕುಗ್ರಾಮದಲ್ಲಿ ಈ ಘಟನೆ ನಡೆದಿದೆ. ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಓಂಕಾರ್ ಎನ್ನುವ ವೈದ್ಯ ಅಟೆಂಡರ್ ಒಬ್ಬನನ್ನು ಕರೆದುಕೊಂಡು ಸ್ಥಳಕ್ಕೆ ಓಡಿಬಂದಿದ್ದಾರೆ. ಗರ್ಭೀಣಿಗೆ ಅತಿಯಾದ ರಕ್ತಸ್ರಾವವಾಗಿದ್ದರಿಂದ ಡಾ.ಓಂಕಾರ್ ಅವಳ ಮನೆಯಲ್ಲೇ ಆಕೆಗೆ ಹೆರಿಗೆ ಮಾಡಿಸಿದರು. ಮುಂದೆ ಓದಿ

 

 

ಆದರೆ ಹೆರಿಗೆ ನಂತರ ಆಕೆಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ತೀರ್ಮಾನಿಸಿದರು ಆದರೆ ಅದು ಬಹಳ ಕಷ್ಟದ ಕೆಲವಾಗಿತ್ತು, ಆ ಗ್ರಾಮಕ್ಕೆ ಸರಿಯಾದ ರಸ್ತೆಯ ವ್ಯವಸ್ಥೆ ಇಲ್ಲದ ಕಾರಣ ಕಾಲ್ನಡಿಗೆ ಅಥವಾ ದ್ವಿಚಕ್ರ ಹೋಗಬೇಕಿತ್ತು. ಆಕೆಯನ್ನು ಹೇಗಾದರೂ ಸರಿ ಆಸ್ಪತ್ರೆಗೆ ಕರೆದೊಯ್ಯಲೇ ಬೇಕು ಎಂದು ನಿರ್ಧರಿಸಿದ್ದ ಡಾ. ಓಂಕಾರ್ ಹಾಗೂ ಅವಳನ್ನು ಆಕೆ ಮಲಗಿದ್ದ ಮಂಚದ ಸಮೇತ ಅವಳ ಪತಿಯ ಜೊತೆಗೂಡಿ ಸುಮಾರು 8 ಕಿ.ಮೀ ದೂರದವರೆಗೆ ಕಾಲ್ನಡಿಗೆಯಲ್ಲೇ ಹೊತ್ತೊಕೊಂಡು ಆಸ್ಪತ್ರೆಗೆ ಹೋಗಿದ್ದಾರೆ.

 

 

ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರೂ ಬಾಣಂತಿಯನ್ನು ಮಂಚದ ಮೇಲೆ ಮಲಗಿಸಿ ಆಸ್ಪತ್ರೆಗೆ ಕಾಲ್ನಡಿಗೆಯಲ್ಲೇ ಹೊತ್ತೊಯ್ದು ತಮ್ಮ ವೃತ್ತಿ ಧರ್ಮ ಮೆರೆದಿದ್ದಾರೆ.. ಆಸ್ಪತ್ರೆಯಲ್ಲಿ ಆಕೆಗೆ ಉತ್ತಮ ಚಿಕಿತ್ಸೆ ನೀಡಿದ ಪರಿಣಾಮ ಬಾಣಂತಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top