fbpx
ದೇವರು

ಪ್ರಪಂಚದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಾ ಮಸ್ತಕಾಭಿಷೇಕಕ್ಕಾಗಿ ಜರ್ಮನ್ ತಂತ್ರಜ್ಞಾನ ಬಳಕೆ.

ಪ್ರಪಂಚದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಾ ಮಸ್ತಕಾಭಿಷೇಕಕ್ಕಾಗಿ ಜರ್ಮನ್ ತಂತ್ರಜ್ಞಾನ ಬಳಕೆ.

 

 

ವಿಶ್ವವಿಖ್ಯಾತ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಗೆ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕ ಮಹೋತ್ಸವ ಇಡೀ ವಿಶ್ವದ ಗಮನ ಸೆಳೆಯುವ ಸಮಾರಂಭ.. ಇದು ಮುಂದಿನ ವರ್ಷ ನಡೆಯಲಿದ್ದು ಸಮಾರಂಭಕ್ಕೆ ಸಂಬಂಧಿಸಿದಂತೆ ಸಕಲ ಸಿದ್ದತೆಗಳು ನಡೆಯುತ್ತಿದೆ.. ವಿಶೇಷ ಎಂದರೆ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನ ಬಳಕೆಯಾಗುತ್ತಿದೆ. ಮುಂದೆ ಓದಿ

 

 

ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಾ ಮಸ್ತಕಾಭಿಷೇಕ್ಕಾಗಿ ಜರ್ಮನ್ ತಂತ್ರಜ್ಞಾನವನ್ನು ಬಳಸಿ ರಿಂಗ್ ಅಂಡ್ ಲಾಕ್ ಮಾದರಿಯ ಹೈಟೆಕ್ ಅಟ್ಟಣಿಗೆ ಮತ್ತು ವೀಕ್ಷಣಾ ಗ್ಯಾಲರಿ ನಿರ್ಮಿಸಲಾಗುತ್ತಿದ್ದು ಗೊಮ್ಮಟೇಶ್ವರ ಮೂರ್ತಿಯ 2ಕಡೆ ಸ್ಟೇರ್‍ಕೇಸ್ ಜೊತೆಗೆ ಮೂರು ಲಿಫ್ಟ್ ಬಳಸಲಾಗುತ್ತಿದೆ..ಅಟ್ಟಣಿಗೆ ಮತ್ತು ವೀಕ್ಷಣಾ ಗ್ಯಾಲರಿ ಮೇಲೆ ಒಮ್ಮೆಗೆ 5 ರಿಂದ 6 ಸಾವಿರ ಜನ ಕೂರಬಹುದಾಗಿದೆ.. ಇಡೀ ಪ್ರಪಂಚದಲ್ಲಿ ಇದೆ ಮೊದಲ ಬಾರಿಗೆ ಒಂದು ಧಾರ್ಮಿಕ ಉತ್ಸವಕ್ಕೆ ಈ ರೀತಿಯ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದ್ದು ಇದರ ಕಾಮಕಾರಿ ಈಗಾಗಲೇ ಶೇ. 50 ರಷ್ಟು ಮುಕ್ತಾಯವಾಗಿದೆ ಇನ್ನುಳಿದ ಕಾಮಗಾರಿ ಇನ್ನು 30ದಿನಗಳಲ್ಲಿ ಮುಗಿಯಲಿದೆ ಎಂಬ ವಿಶ್ವಾಸವಿದೆ.

 

 

ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಗೊಮ್ಮಟೇಶ್ವರನ ಮಸ್ತಕಾಭಿಷೇಕಕ್ಕೆ ಭದ್ರತೆ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮಹಾ ಮಸ್ತಕಾಭಿಷೇಕ ಮಹೋತ್ಸವಕ್ಕೆ ಸರಕಾರ 175 ಕೋಟಿ ರೂ.ಅನುದಾನ ನಿಗದಿ ಮಾಡಿದ್ದು ಈಗಾಗಲೇ 43.70 ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿದುಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top