fbpx
ದೇವರು

ಶಿವನ ಆಭರಣಗಳು ಯಾವುವು ? ಅವುಗಳ ಮಹತ್ವ ಏನು? ಮತ್ತು ಅದರಲ್ಲಿ  ಅಡಗಿರುವ ರಹಸ್ಯ ಏನೆಂದು  ನಿಮಗೆ ಗೊತ್ತಾ ?

ಶಿವನ ಆಭರಣಗಳು ಯಾವುವು  ? ಅವುಗಳ ಮಹತ್ವ ಏನು  ? ಮತ್ತು ಅದರಲ್ಲಿ  ಅಡಗಿರುವ ರಹಸ್ಯ ಏನೆಂದು  ನಿಮಗೆ ಗೊತ್ತಾ ?

 

 

ಹಿಂದೂ ಧರ್ಮದಲ್ಲಿ ಶಿವನನ್ನು ದೇವಾದಿ ದೇವ ಮಹಾದೇವ ಎಂದು ಆರಾಧಿಸುತ್ತಾರೆ.ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ    ಮಹೇಶ್ವರನೇ  ಅತ್ಯಂತ ಶಕ್ತಿಶಾಲಿ  ಎಂದು ನಂಬುವ ಕಾರಣ ಇತರ ದೇವರುಗಳು ಕೂಡ ಸಂಕಟ ಬಂದಾಗ ಶಿವನ ಬಳಿ ಸಹಾಯ ಬೇಡಿ ಬರುವ ಹಲವು  ಸಂದರ್ಭಗಳನ್ನು   ಪುರಾಣಗಳಲ್ಲಿ  ಉಲ್ಲೇಖಿತವಾಗಿರುವುದನ್ನು ನಾವು  ಓದಿದ್ದೇವೆ.

ಶಿವನನ್ನು ಶಿವನ ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆದು ಪೂಜಿಸುತ್ತಾರೆ. ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ ‘ವಿಶ್ವನಾಥ ,ಭಾವ, ಭೋಲೇನಾಥ ಇತ್ಯಾದಿ ಹೆಸರುಗಳಿಂದ ಶಿವನನ್ನು ಪೂಜಿಸುತ್ತಾರೆ.

ಶಿವನು ಅತಿ ಪರಾಕ್ರಮಿಯಾಗಿದ್ದ ಅಗತ್ಯ ಬೀಳದೆ  ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ  ಸಹ ಹಿಮಾಚಲಾದ್ರಿತ ಪ್ರದೇಶಗಳಲ್ಲಿ ನೆಲೆಸುವ ವಜ್ರ , ವೈಢೂರ್ಯದಿಂದ  ಭೂಷಿತನಾಗಬಹುದಾದರೂ ಸಹ ಸರಳವಾದ  ಉಡುಗೆಯಿಂದ ಭಕ್ತರ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟು ಬಿಡುವ ಸಾಮರ್ಥ್ಯವಿರುವ ಶಿವ, ಇತರ ದೇವರುಗಳಿಗಿಂತ ತುಂಬಾ ವಿಭಿನ್ನವಾಗಿದ್ದಾನೆ.

 

 

ಶಿವನ ತಾಂಡವ ನೃತ್ಯದಲ್ಲಿ ಅಡಗಿದೆ ಜಗತ್ತಿನ ಸೃಷ್ಟಿಯ ತತ್ತ್ವ.ಶಿವನ ಈ ಶಕ್ತಿ ಮತ್ತು ವೈಶಿಷ್ಟ್ಯಗಳನ್ನು ಕಂಡ ಭಕ್ತರು ಶಿವನಿಗೆ ಪ್ರತ್ಯೇಕವಾದ ದೇವಾಲಯಗಳನ್ನು ಕಟ್ಟಿದ್ದಾರೆ.

ಶಿವನ ಪರಾಕ್ರಮ ಮತ್ತು ಲೀಲೆಗಳ ಬಗ್ಗೆ ಹಲವಾರು ಕಥೆಗಳಿದ್ದರೂ ಸಹ ಶಿವನ ಎಂಟು ಶೃಂಗಾರ ಆಭರಣಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದು ಮಹತ್ವವಾದ ರಹಸ್ಯದಲ್ಲಿ ಒಂದಾಗಿದೆ.

 

ತಲೆಯಲ್ಲಿರುವ ಅರ್ಧ ಚಂದ್ರ ಮತ್ತು ಬಿಚ್ಚಿದ ಕೂದಲಿನಲ್ಲಿರುವ ಗಂಗೆಯ ಹರಿವು.

 

 

ಅವರ ಡಮರುಗದಲ್ಲಿ ಸೃಷ್ಟಿಯ ನಾದ ಅಡಗಿದೆ.

 

 

ಆಧ್ಯಾತ್ಮಿಕ ಮಹತ್ವಗಳನ್ನು ಈ ಆಭರಣಗಳು ಒಳಗೊಂಡಿರುತ್ತವೆ. ಶಿವನ ಮೂರು ಆಭರಣಗಳು ಹಾಗೂ ಮೂರು ಶಕ್ತಿಗಳನ್ನು ಎತ್ತಿ ತೋರಿಸುವುದು ಜ್ಞಾನ ಬಯಕೆ ಮತ್ತು ಅನುಷ್ಠಾನ ಹೀಗೆ ಮೂರು ಶಕ್ತಿಗಳನ್ನು ಇದು ಪ್ರತಿನಿಧಿಸುತ್ತದೆ.

ಡಮರುಗದ ವಿಶೇಷತೆ ಎಂದರೆ ಅದು ಶಬ್ದವನ್ನು ಪ್ರತಿನಿಧಿಸುತ್ತದೆ. ವೇದಗಳ ಶಬ್ದವಾಗಿ ಇದನ್ನು ಪರಿಗಣಿಸಲಾಗಿದೆ.

ಶಿವನ ಕೊರಳಲ್ಲಿ ಹಾರವಾಗಿರುವ ಸರ್ಪವು ಮಾನವನ ಅಹಂಕಾರದ ಪ್ರತೀಕವಾಗಿದೆ.

 

 

ಶಿವನ ಕೈಯಲ್ಲಿರುವ ಸರವು ರುದ್ರಾಕ್ಷಿ ಮಣಿಗಳಿಂದ ಕೂಡಿದ್ದು. ಇದು ಶುದ್ಧತೆಯ ಸಂಕೇತವಾಗಿದೆ. ಈ ಮಾಲೆಯು ದೇವರ ಬಲಗೈಯಲ್ಲಿ ಇದ್ದು ಮಾನವನ ಏಕಾಗ್ರತೆಯ ಸಂಕೇತವನ್ನು ಸೂಚಿಸುತ್ತದೆ.

 

 

ಶಿವನ ತಲೆಯ ಭಾಗ ಪವಿತ್ರವಾದ ನದಿ ಗಂಗೆಯನ್ನು ಪ್ರತಿನಿಧಿಸುತ್ತದೆ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹಾದು ಹೋಗುವ ಬುದ್ಧಿವಂತಿಕೆ ಧರ್ಮಗ್ರಂಥಗಳ ಬೋಧನೆಯ ಅರಿವನ್ನು ಇದು ಸೂಚಿಸುತ್ತದೆ.

 

 

ಶಿವನ ತಲೆಯಲ್ಲಿ ಅಲಂಕರಿಸಿರುವ ಚಂದ್ರ ಸಮಯಕ್ಕೆ ಅಧಿಪತಿಯಾಗಿದ್ದು ಸಮಯಾತೀತ ಅಂದರೆ ಸಮಯದ ಕಟ್ಟುಪಾಡಿಗೆ ಬಗ್ಗದು ಎಂದು ಅರ್ಥ.

 

 

ಶಿವನ ಹಣೆಯಲ್ಲಿರುವ ತಿಲಕವು ಜ್ಞಾನದ ಮೂರನೇ ಕಣ್ಣು ಎಂದೇ ಪ್ರಸಿದ್ಧವಾಗಿದೆ. ಮೂರನೇ ಕಣ್ಣು ತೆರೆದಲ್ಲಿ ಎದುರಿಗಿರುವವರನ್ನು ಸುಟ್ಟು ಬೂದಿ ಮಾಡುವ ಶಕ್ತಿ ಇದೆ. ದುಷ್ಟರ ನಾಶ ಮತ್ತು ಅಜ್ಞಾನದ ಅಂತ್ಯವನ್ನು ಇದು ಸೂಚಿಸುತ್ತದೆ.

 

ಶಿವನು ಸ್ವತಃ ಹುಲಿಯ ಚರ್ಮವನ್ನು ಧರಿಸಿದ್ದು. ಅದೇ ಪ್ರಾಣಿಯ ಚರ್ಮದ ಮೇಲೆ ಕುಳಿತಿದ್ದಾನೆ. ಇದು ಶಿವನು ಧೈರ್ಯಶಾಲಿ ಎಂಬುದನ್ನು ಸೂಚಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top