fbpx
ಮನೋರಂಜನೆ

ನಟಿ ಅಮೂಲ್ಯ ರಾಜಕೀಯಕ್ಕೆ ಎಂಟ್ರಿ..?

 ನಟಿ ಅಮೂಲ್ಯ ರಾಜಕೀಯಕ್ಕೆ ಎಂಟ್ರಿ..?

 

 

ಇತ್ತೀಚೆಗಷ್ಟೇ ರಿಯಲ್ ಸ್ಟಾರ್ ಉಪ್ಪಿ ತಮ್ಮದೇ ಪಕ್ಷದ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. ಅದರ ಬೆನ್ನಲ್ಲೇ ಕನ್ನಡ ಚಿತ್ರರಂಗದ ಖ್ಯಾತ ನಟಿ ಸದ್ಯದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಜಗದೀಶ್.ಆರ್.ಚಂದ್ರ ಅವರನ್ನು ಮದುವೆಯಾಗಿದ್ದ ಅಮೂಲ್ಯ ಸದ್ಯ ಚಿತ್ರ ರಂಗದಿಂದ ದೂರ ಉಳಿದಿದ್ದಾರೆ.

 

 

ಇತ್ತೀಚಿನ ದಿನಗಳಲ್ಲಿ ಅಮೂಲ್ಯ ಹಾಗೂ ಜಗದೀಶ್ ಸಾಮಾಜಿಕ ಕೆಲಸಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಚಿತ್ರರಂಗದಲ್ಲಿ ಜನಪ್ರಿಯತೆ ಇರೋ ಅಮೂಲ್ಯ ರಾಜಕೀಯಕ್ಕೆ ಬರುತ್ತಾರಾ ಎನ್ನುವ ವದಂತಿಗಳು ರಾಜಕೀಯ ವಲಯ ಮತ್ತು ಚಿತ್ರರಂಗದಲ್ಲಿ ಓಡಾಡುತ್ತಿವೆ. ಈ ಪ್ರಶ್ನೆಗೆ ಇನ್ನು ಸ್ವಲ್ಪ ದಿನಗಳಲ್ಲೇ ಉತ್ತರ ಸಿಗಲಿದೆ ಮುಂದೆ ಓದಿ.

 

 

ಅಮೂಲ್ಯ ಮತ್ತು ಜಗದೀಶ್ ಕುಟುಂಬ ಮಂಗಳೂರಿನಲ್ಲಿ ಶಾಲೆಯ ಹೊಸ ಕಟ್ಟಡದ ಕಾರ್ಯಕ್ರಮದಲ್ಲಿ, ಮತ್ತು ಮೊನ್ನೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಕಳೆದ ವಾರ ಸಾಲುಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದಾಗ ಅವರ ಅರೋಗ್ಯ ವಿಚಾರಿಸಿ ಸಹಾಯ ಮಾಡಿದ್ದರು. ಈ ಎಲ್ಲಾ ಸಾಮಾಜಿಕ ಕೆಲಸಗಳನ್ನು ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಉದ್ದೇಶದಿಂದಲೇ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top