fbpx
ದೇವರು

ಧನ್ವಂತರಿ ಗಣಪತಿ ಹಾಗೂ ಸಂಜೀವಿನಿ ಆಂಜನೇಯ ದೇವಸ್ಥಾನಕ್ಕೆ ಹೋದ್ರೆ ಭಕ್ತರ ರೋಗಗಳು ವಾಸಿಯಾಗುತ್ತಂತೆ!

ಧನ್ವಂತರಿ ಗಣಪತಿ ಹಾಗೂ ಸಂಜೀವಿನಿ ಆಂಜನೇಯ ದೇವಸ್ಥಾನಕ್ಕೆ ಹೋದ್ರೆ ಭಕ್ತರ ರೋಗಗಳನ್ನು ವಾಸಿಯಾಗುತ್ತಂತೆ!

 

ಧನ್ವಂತರಿ ಗಣಪತಿ ಹಾಗೂ ಸಂಜೀವಿನಿ ಆಂಜನೇಯ ದೇವಾಲಯ.ಕೇತೋಹಳ್ಳಿ, ರಾಮನಗರ ಜಿಲ್ಲೆ

ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಬಿಡದಿಯ ಹತ್ತಿರ ಇರುವ ಊರೇ ಕೇತೋಹಳ್ಳಿ, ಬೆಂಗಳೂರಿನಿಂದ 41 ಕಿ.ಲೋ. ಮೀಟರ್ ದೂರದಲ್ಲಿ ಇರುವ ಊರೇ ಕೇತೋಹಳ್ಳಿ.ಈ ಊರು ಮತ್ತು ಈ ದೇವಸ್ತಾನ ಇಷ್ಟು ಪ್ರಾಮುಖ್ಯತೆ ಪಡಿಯಲು ಮೂಲ ಕಾರಣ ದೇವರಾಜ ಕೊಠಾರಿಯವರು .

 

ದೇವರಾಜ ಕೊಠಾರಿರವರು ಶ್ರೀ ಭಗವಾನ್ ಮಹಾವೀರ್ ಮಾನವತಾ ಟ್ರಸ್ಟ್ನ ಪರವಾಗಿ ಈ ದೇವಸ್ಥಾನವನ್ನು ಕಟ್ಟಿಸಿದ್ದಾರೆ
ಈ ಧನ್ವಂತರಿ ಗಣಪತಿ ಹಾಗೂ ಸಂಜೀವಿನಿ ಆಂಜನೇಯ ದೇವಸ್ಥಾನದಲ್ಲಿ ಧನ್ವಂತರಿ ಗಣಪತಿ, ಸಂಜೀವಿನಿ ಆಂಜನೇಯ, ಸುಬ್ರಹ್ಮಣ್ಯ, ನಂಜುಂಡೇಶ್ವರ ಸ್ವಾಮಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ .

1999ರ ಜನವರಿ 22ರಂದು ದೇವರಾಜ ಕೊಠಾರಿಯವರು ಮೊದಲು ಧನ್ವಂತರಿ ಗಣಪತಿ ದೇವಾಲಯ ಕಟ್ಟಿಸಿ ನಂತರ ಅಲ್ಲಿ ಧನ್ವಂತರಿ ಗಣಪತಿಯ ವಿಗ್ರಹವನ್ನು ಶಾಸ್ತ್ರದ ಪ್ರಕಾರ ಪ್ರತಿಷ್ಠಾಪಿಸದರು.

ಧನ್ವಂತರಿ ಎಂದರೆ ಸುರಲೋಕದ ವೈದ್ಯ.ಈ ದೇವಾಲಯಕ್ಕೆ ಬರುವ ಎಲ್ಲ ಭಕ್ತರ ರೋಗಗಳನ್ನು ಹೋಗಲಾಡಿಸುವ ಈ ಗಣೇಶನಿಗೆ ನಂತರ ಧನ್ವಂತರಿ ಗಣಪತಿ ಎಂದು ಮರುನಾಮಕರಣ ಮಾಡಲಾಯಿತು.

ದೇವರಾಜ ಕೊಠಾರಿ ರವರು ಈ ದೇವಸ್ಥಾನದ ಪಕ್ಕದಲ್ಲಿ ಒಂದು ಚಿಕ್ಕ ಹಾಸ್ಪಿಟಲ್ ತೆರಿದು ಜನರಿಗೆ ಉಚಿತ ಸೇವೆ ಕೊಡುವಂತೆ ಏರ್ಪಾಡು ಮಾಡಿದರೆ .ಈ ಹಾಸ್ಪಿಟಲ್ ನ ಎಲ್ಲ ಖರ್ಚು ವೆಚ್ಚಗಳನ್ನೂ ಶ್ರೀ ಭಗವಾನ್ ಮಹಾವೀರ್ ಮಾನವತಾ ಟ್ರಸ್ಟ್ನ ಭರಿಸುತ್ತದೆ.

 

 

ಈ ಗಣಪತಿಯ ಪಕ್ಕದಲ್ಲಿ ನಂಜುಂಡೇಶ್ವರ, ಸುಬ್ರಹ್ಮಣ್ಯ ಶಿರಡಿ ಸಾಯಿಬಾಬಾ, ಲಕ್ಷ್ಮೀ, ಗುರುರಾಯರ ಬೃಂದಾವನ ಮೊದಲಾದ ಹಲವು ಪುಟ್ಟ ಪುಟ್ಟ ವಿಗ್ರಹಗಳನ್ನೂ ನಾವು ನೋಡಬಹುದು.

ಇಲ್ಲಿನ ಇನ್ನೊಂದು ಆಕರ್ಷಣೆ ಇಲ್ಲಿ ಇರುವಂತಹ 11 ಅಡಿ ಎತ್ತರದ ಸಂಜೀವಿನಿ ಆಂಜನೇಯ ಸ್ವಾಮಿ,ಸಂಜೀವಿನಿ ಆಂಜನೇಯ ಸ್ವಾಮಿಯನ್ನು ಮಾರ್ಚ್ 12 ,2000 ರಲ್ಲಿ ಪ್ರತಿಷ್ಠಾಪಿಸಲಾಯಿತ್ತು.

17 ಟನ್ ತೂಕವಿರುವ ಕೃಷ್ಣಶಿಲೆಯ ಈ ಸಂಜೀವಿನಿ ಆಂಜನೇಯ ಸ್ವಾಮಿ ವಿಗ್ರಹ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಬೇಲೂರು ಹಳೇಬೀಡಿನಲ್ಲಿ ಇರುವ ಶಿಲಾಬಾಲಿಕೆಯರ ಕೈಗಳಲ್ಲಿ ಇರುವ ಬಳೆಗಳು ತಿರುಗುವ ರೀತಿಯಲ್ಲೇ ಇಲ್ಲಿರುವ ಸಂಜೀವಿನಿ ಆಂಜನೇಯನ ವಿಗ್ರಹದಲ್ಲಿರುವ ಎರಡೂ ಕೈಗಳ ಮತ್ತು ಕಾಲುಗಳಲ್ಲಿರುವ ಬಳೆ, ಕಡಗಗಳು ತಿರುಗುತ್ತವೆ.
ಭಕ್ತರ ಮನದಲ್ಲಿನ ಕೋರಿಕೆಗಳನ್ನು ನೆರವೇರಿಸುವ ಈ ದೇವಸ್ಥಾನ ಭಕ್ತರ ಸಂಖ್ಯೆ ದಿನ ದಿನ ಹೆಚ್ಚುತ್ತಿದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top