fbpx
ಆರೋಗ್ಯ

ಕೆಂಪು ಕಾಶಿ ಕಣಗಿಲೆ ಹೂವಿನ ಗಿಡ ಕ್ಯಾನ್ಸರ್ , ಸಕ್ಕರೆ ಖಾಯಿಲೆ ಸೇರಿದಂಗೆ 8 ರೋಗಗಳಿಗೆ ರಾಮಬಾಣ ಅಂತಾ ತಿಳ್ಕೊಂಡ್ರೆ ನಿಮ್ಮ ಮನೆಯ ಹತ್ರ ಬೆಳೆಸಿ ಬಂಗಾರದಂಗೆ ಕಾಪಾಡಿಕೊಳ್ತೀರಾ!

ಕೆಂಪು ಕಾಶಿ ಕಣಗಿಲೆ ಹೂವಿನ ಗಿಡ ನಿಮ್ಮ ಮನೆಯ ಬಳಿಯಲ್ಲಿದ್ದರೆ ನಿಮಗೆ ಅದೃಷ್ಟ ತಂದುಕೊಡುವುದು. ಯಾಕೆ ಎಂದು ತಿಳಿಯೋಣ 

 

 

 

ಒಂದೊಂದು ಹೂವು ಸಹ ಅದರದ್ದೇ ಆದ ಮಹತ್ವವನ್ನು ಹೊಂದಿರುತ್ತದೆ .ಅದನ್ನು ನಾವು ನೋಡಿದರೂ ನೋಡದಂತೆ ತಿರಸ್ಕರಿಸುವ ಹೂವುಗಳಲ್ಲಿ ಕಾಶಿ ಕಣಗಿಲೆ ಹೂವಿನ ಗಿಡ ಸಹ ಒಂದು. ಆದರೆ ಈ ಹೂವನ್ನು ಅಲಂಕಾರಿಕ ರೂಪದಲ್ಲಿ ಬಳಸಲಾಗುತ್ತದೆ.

ಈ ಹೂವನ್ನು ನಿತ್ಯ ಮಲ್ಲಿಗೆ ಎಂದು ಸಹ ಕರೆಯಲಾಗುತ್ತದೆ .ಹಿಂದಿಯಲ್ಲಿ  ಸದಾಬಹಾರ್ ಎಂದು ಕರೆಯುತ್ತಾರೆ. ಇಂಗ್ಲಿಷ್ನಲ್ಲಿ ಮಡಗಾಸ್ಕರ್ ಪೆರಿವಿಂಕಾಲ್ ಎಂದೂ ಕರೆಯಲಾಗುತ್ತದೆ. ಈ ಹೂವಿನ ಗಿಡ ವಿಶೇಷವಾದ ಔಷಧಿ ಗುಣಗಳನ್ನು ಹೊಂದಿದೆ .ಈ ಗಿಡದ ಎಲೆಗಳು, ಹೂವು, ಬೇರು, ಔಷಧಯುಕ್ತವಾಗಿವೆ.

ಇವು ಕ್ಯಾನ್ಸರ್, ಮಧುಮೇಹ ರೋಗಗಳಿಗೆ ಮುಕ್ತಿ ಸಿಗುವಂತೆ ಮಾಡುತ್ತದೆ. ಅಲಂಕಾರಿಕ ಸಸ್ಯವಾಗಿ ಬಳಸಲ್ಪಡುವ ಈ ಹೂವಿನಲ್ಲಿ ಎರಡು ವಿಧಗಳಿವೆ. ಒಂದು ಜಾತಿಯ  ಗಿಡ ಬಿಳಿ ಹೂವು ಬಿಡುತ್ತದೆ .ಇನ್ನೊಂದು ನಸುಗೆಂಪು ಹೂವನ್ನು ಬಿಡುತ್ತದೆ.

 

 ಕ್ಯಾನ್ಸರ್ .

 

 

ಕಾಶಿ ಕಣಗಿಲೆ ಗಿಡದ ಎಲೆಗಳ ರಸದ ಜೊತೆಗೆ ಅದರ ಬೇರುಗಳನ್ನು ಒಣಗಿಸಿ ಹೀಗೆ ತಯಾರಿಸಿಕೊಂಡು ಪುಡಿಯಿಂದ ಡಿಕಾಕ್ಷನ್ ಮಾಡಿಕೊಂಡು ನಿತ್ಯ ಕುಡಿಯುತ್ತಿದ್ದರೆ ಕ್ಯಾನ್ಸರ್ ರೋಗವು ಕಡಿಮೆಯಾಗುತ್ತದೆ. ಇವುಗಳಲ್ಲಿರುವ ಶಕ್ತಿಯುತ ಆಂಟಿ ಆಕ್ಸಿಡೆಂಟ್ಗಳು ಕ್ಯಾನ್ಸರ್ ಜೀವಕೋಶಗಳ  ಬೆಳವಣಿಗೆಯನ್ನು ತಡೆಯುತ್ತವೆ. ಇದರಿಂದ ಕ್ಯಾನ್ಸರ್ ರೋಗವು ಕಡಿಮೆಯಾಗುತ್ತದೆ.

 

ಮಧುಮೇಹ.

 

ಕಾಶಿ ಕಣಗಿಲೆ ಗಿಡದ ಬೇರುಗಳನ್ನು ಸಂಗ್ರಹಿಸಿ ನೀರಿನಲ್ಲಿ ಚೆನ್ನಾಗಿ ಸ್ವಚ್ಛಗೊಳಿಸಿ ಇವುಗಳನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ. ಆ ಪುಡಿಯನ್ನು ಅರ್ಧ ಗ್ರಾಂ ಪ್ರಮಾಣದಲ್ಲಿ ತೆಗೆದುಕೊಂಡು ಒಂದು ಟೀ ಸ್ಪೂನ್ ಜೇನಿನೊಂದಿಗೆ ಬೆರೆಸಿ ಸೇವಿಸಿದರೆ ಇದರಿಂದ ಮಧುಮೇಹ ಕಾಯಿಲೆ ಕಡಿಮೆಯಾಗಿ ಕ್ರಮೇಣವಾಗಿ ನಿವಾರಣೆಯಾಗುತ್ತದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಊಟ ಮಾಡುವ ಮುನ್ನ ಎರಡು ಸಲ ತಿಂದರೆ ಮಧುಮೇಹದಂತಹ ಕಾಯಿಲೆಗಳು ಗುಣವಾಗುತ್ತವೆ . ಅದೇ ರೀತಿ ಈ ಗಿಡದ ಎಲೆಗಳನ್ನು ಅಥವಾ ಹೂವುಗಳನ್ನು ಎರಡು ಮೂರು ಬಾರಿ ತೆಗೆದುಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿದು ತಿನ್ನಬೇಕು.

 

 ಋತು ಸಮಸ್ಯೆ.

 

 

ಆರರಿಂದ ಎಂಟು ಎಲೆಗಳನ್ನು ತೆಗೆದುಕೊಳ್ಳಿ ಇವುಗಳನ್ನು ಎರಡು ಲೋಟ ನೀರಿನಲ್ಲಿ ಹಾಕಿ ಕುದಿಸಿ. ಚೆನ್ನಾಗಿ ಕುದಿಸಿದ ಮೇಲೆ ನೀರು ಅರ್ಧ ಕಪ್ ಆಗುತ್ತದೆ. ಆ ನೀರನ್ನು ಕುಡಿಯಬೇಕು. ಈ ರೀತಿ ತಿಂಗಳಿಗೊಮ್ಮೆ ಮಾಡಿದರೂ ಸಹ ಸ್ತ್ರೀಯರ ಋತು ಸಮಯದಲ್ಲಿ ತೀವ್ರ ರಕ್ತಸ್ರಾವ ಆಗುವುದಿಲ್ಲ .

 

 ಅಧಿಕ ರಕ್ತದೊತ್ತಡ.

 

 

ಅಧಿಕ ರಕ್ತದೊತ್ತಡ ಇರುವವರು ಕಾಶಿ ಕಣಗಿಲೆ ಎಲೆಗಳನ್ನು ತೆಗೆದುಕೊಳ್ಳಬೇಕು. ಇವುಗಳನ್ನು ಚೆನ್ನಾಗಿ ತೊಳೆದು ರಸ ತೆಗೆದುಕೊಳ್ಳಬೇಕು. ಇದನ್ನು ಎರಡರಿಂದ ಮೂರು ಮಿಲಿ ಲೀಟರ ನೀರಿನ  ಪ್ರಮಾಣದಲ್ಲಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಮಲಗುವ ಮುನ್ನ ಕುಡಿಯಬೇಕು. ಇದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ .

 

ಮೂಗು ಬಾಯಲ್ಲಿ ರಕ್ತ ಸ್ರಾವ.

 

 

ಕಾಶಿ ಕಣಗಿಲೆ ಗಿಡದ ಹೂವುಗಳ ಮೊಗ್ಗು, ದಾಳಿಂಬೆ ಹೂವಿನ ಮೊಗ್ಗನ್ನು, ಸಂಗ್ರಹಿಸಿ ಅವುಗಳಿಂದ ರಸ ತೆಗೆಯಿರಿ. ಆ ರಸವನ್ನು ಬೆರೆಸಿ ಮಿಶ್ರಣವಾಗಿ ಮಾಡಿಕೊಂಡು ಅದನ್ನು ಮೂಗಿನಲ್ಲಿ ಹಾಕಿಕೊಂಡರೆ ರಕ್ತಸ್ರಾವ ಕಡಿಮೆಯಾಗುತ್ತದೆ. ಈ ರೀತಿ ಮಾಡುವುದರಿಂದ ಬಾಯಲ್ಲಿರುವ  ಹುಣ್ಣು ಸಹ ಕಡಿಮೆಯಾಗುತ್ತದೆ.

 

 ಹುಳುಗಳ ಕಡಿತ.

 

 

ಹುಳು, ಕೀಟಗಳು  ಕಚ್ಚಿದಾಗ ಕೆಂಪಗೆ ದದ್ದುಗಳಾಗುತ್ತವೆ. ತುರಿಕೆ ಆಗುತ್ತದೆ. ಆದರೆ ಆ ಭಾಗದ ಮೇಲೆ ಕಾಶಿ ಕಣಗಿಲೆ ಎಲೆಗಳ ರಸ ಹಿಂಡಿದರೆ ಕೂಡಲೆ ಸಮಸ್ಯೆಯಿಂದ ಉಪಶಮನ ಸಿಗುತ್ತದೆ. ನೋವು ಉರಿ ಊತ ಕಡಿಮೆಯಾಗುತ್ತದೆ. ಮೊಡವೆಗಳು ಮಚ್ಚೆಗಳು ಕಾಶಿ ಕಣಗಿಲೆ ಗಿಡದ ಎಲೆಗಳನ್ನು ಕೆಲವನ್ನು ಸಂಗ್ರಹಿಸಿ ಒಣಗಿಸಬೇಕು. ಅವುಗಳನ್ನು ಪುಡಿ ಮಾಡಿಕೊಳ್ಳಿ .ಆ ಪುಡಿಗೆ ಬೆಲ್ಲದ ಪುಡಿ ಮತ್ತು ಅರಿಶಿನಪುಡಿ ಬೆರೆಸಿ ಈ ಮಿಶ್ರಣವನ್ನು ನೀರಿನಲ್ಲಿ ಬೆರೆಸಿ ಮುಖಕ್ಕೆ  ಹಚ್ಚಿಕೊಳ್ಳಬೇಕು. ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳಬೇಕು. ಈ ರೀತಿ ಮಚ್ಚೆಗಳು ಹೋಗಿ ಮುಖ ಕಾಂತಿಯುಕ್ತವಾಗಿ ಮೃದುವಾಗಿ ಬದಲಾಗುತ್ತದೆ .

 

ಡಿಪ್ರೆಶನ್ ಆತಂಕ.

 

 

ಎಲೆಗಳು ಅಥವಾ ಹೂವುಗಳ ರಸ ನಿತ್ಯ ತೆಗೆದುಕೊಳ್ಳಿ ಡಿಪ್ರೆಶನ್ ನಿವಾರಣೆಯಾಗುತ್ತದೆ. ಆತಂಕ ಒತ್ತಡ ಕಡಿಮೆಯಾಗುತ್ತದೆ ನಿದ್ದೆ ಚೆನ್ನಾಗಿ ಬರುತ್ತದೆ ಮಾನಸಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ.

 

 ಗಾಯ ಹುಣ್ಣು .

 

 

ಕಾಶಿ ಕಣಗಿಲೆ ಎಲೆಗಳನ್ನು  ಕೆಲವನ್ನು ತೆಗೆದುಕೊಂಡು ಚೆನ್ನಾಗಿ ಅರೆದು  ಪೇಸ್ಟ್  ಮಾಡಿಕೊಳ್ಳಬೇಕು. ಅದನ್ನು ಗಾಯಗಳಿಗೆ ಮತ್ತು  ಹುಣ್ಣುಗಳಿಗೆ ಹಚ್ಚಬೇಕು. ಇದರಿಂದ ಅವು ಕೂಡಲೇ ಪರಿಣಾಮಕಾರಿಯಾಗಿ ನಿವಾರಣೆಯಾಗಿ ಗುಣವಾಗುತ್ತವೆ. ನಿತ್ಯವೂ  ಎರಡು ಮೂರು ಸಲ ಈ ರೀತಿ ಮಾಡುತ್ತಿದ್ದರೆ ಬೇಗ ಗುಣವಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top