fbpx
ಸಮಾಚಾರ

ಗಾಡಿಮುಂದೆ ಬೋರ್ಡ್ ಹಾಕೊಂಡು ತಿರ್ಪೆ ಶೋಕಿ ಮಾಡ್ತಿದ್ದ ಸಂಘಗಳ ಅಧ್ಯಕ್ಷರಿಗೆ ಲಗಾಮು ಹಾಕಿದ ಪೊಲೀಸರು..!

ಗಾಡಿಮುಂದೆ ಬೋರ್ಡ್ ಹಾಕೊಂಡು ತಿರ್ಪೆ ಶೋಕಿ ಮಾಡ್ತಿದ್ದ ಸಂಘಗಳ ಅಧ್ಯಕ್ಷರಿಗೆ ಲಗಾಮು ಹಾಕಿದ ಪೊಲೀಸರು..!

 

 

ತಮ್ಮ ತಮ್ಮ ವಾಹನಗಳ ಮೇಲೆ “ನಾ ಆ ಸಂಘದ ಅಧ್ಯಕ್ಷ ನಾ ಈ ಸಂಘದ ಅಧ್ಯಕ್ಷ “ಎಂದು ದೊಡ್ ದೊಡ್ ಬೋರ್ಡ್’ಗಳನ್ನ ಆಕೊಂಡು ಶೋಕಿ ಮಾಡ್ತಿದ್ದ ವಿವಿಧ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮುಂತಾದ ಪದಾಧಿಕಾರಿಗಳಿಗೆ ಪೊಲೀಸರು ಲಗಾಮು ಹಾಕಿದ್ದಾರೆ. ಇದು ಏನು ವಿಷ್ಯ ಅಂತೀರಾ ಮುಂದೆ ಓದಿ..

 

 

ತಮ್ಮ ವಾಹನಗಳ ನಂಬರ್ ಪ್ಲೇಟ್’ಗಳ ಮೇಲೆ ”  ಕೆಲವು ಸಂಘಗಳ ಅಧ್ಯಕ್ಷ ಕಾರ್ಯದರ್ಶಿ ಉಪಾಧ್ಯಕ್ಷ “ಎಂದು ಬೋರ್ಡ್ ಹಾಕೊಂಡಿದ್ದ ಸಂಘಗಳ ಪದಾಧಿಕಾರಿಗಳ ವಾಹನ ಮೇಲಿನ ನಾಮ ಫಲಕಗಳನ್ನು ನಗರ ಟ್ರಾಫಿಕ್ ಪೊಲೀಸರು ತೆಗೆಸಿಹಾಕಿದ್ದಾರೆ. ಅಲ್ಲದೆ ಈ ರೀತಿಯ ನಂಬರ್ ಪ್ಲೇಟ್ ಬೋರ್ಡ್’ಗಳನ್ನು ಹಾಕುವುದನ್ನು ನಿಷೇಧ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

 

 

ನಂಬರ್ ಪ್ಲೇಟ್’ಗಳನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಬಿಳಿ ಬಣ್ಣದ ಪ್ಲೇಟ್ ಮೇಲೆ ಕ್ರಮಬದ್ಧ ಆಕಾರದಲ್ಲಿ ಕಪ್ಪು ಬಣ್ಣದಿಂದ ಅಕ್ಷರಗಳನ್ನು ಮುದ್ರಿಸಬೇಕು. ವಿವಿಧ ಆಕಾರದ ಪ್ಲೇಟ್ ಬಳಸಬಾರದು,, ಹಾಗು ನಂಬರ್ ಪ್ಲೇಟ್‌ನಲ್ಲಿ ಯಾವುದೇ ದೇವರ, ಮಕ್ಕಳ, ಧಾರ್ಮಿಕ ಚಿಹ್ನೆ, ಭಾವಚಿತ್ರಗಳನ್ನು ಮುದ್ರಿಸಬಾರದು ಎಂಬ ನಿಯಮವನ್ನು ಜಾರಿಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top