fbpx
ಭವಿಷ್ಯ

ಸ್ತ್ರೀಯರು ಹುಟ್ಟಿದ ಮಾಸಗಳ ಪ್ರಕಾರ ಅವರ ಗುಣ ನಡತೆ ಹೇಗಿರುತ್ತೆ ಗೊತ್ತಾ?

ಸ್ತ್ರೀಯರು ಹುಟ್ಟಿದ ಮಾಸಗಳ ಅನ್ವಯ ನಿಮ್ಮ ಗುಣ ಹೇಗಿರುತ್ತದೆ ಎಂದು ತಿಳಿಯಿರಿ.

 

ಇಂಗ್ಲಿಷ್ ಕ್ಯಾಲೆಂಡರ್ ನಲ್ಲಿ ಹನ್ನೆರಡು ತಿಂಗಳು ಇರುತ್ತವೆ. ನಮ್ಮ ಹಿಂದೂ ಪಂಚಾಂಗದಲ್ಲಿ ಹನ್ನೆರಡು ಮಾಸಗಳನ್ನು ಗುರುತಿಸಲಾಗಿದೆ. ಮನೆಯ ಭಾಗ್ಯ ದೇವತೆಗೆ ಗೃಹಿಣಿ . ಆಕೆಯ ಗುಣ ಸ್ವಭಾವದ ನೇರ ಪರಿಣಾಮ ಕುಟುಂಬದವರ ಮೇಲೆ ಆಗುತ್ತದೆ. ಯಾವ ಮಾಸದಲ್ಲಿ ಮಹಿಳೆಯು ಜನಿಸಿದ್ದಾಳೆ ಎನ್ನುವುದರ ಆಧಾರದಲ್ಲಿ ಸ್ವಭಾವವನ್ನು ಗುರುತಿಸಬಹುದು.

ಚೈತ್ರ ಮಾಸ .

ವಿನಯಶೀಲೆ, ಬುದ್ಧಿವಂತೆ,ಅರ್ಥವಂತೆ, ಸುಖ ಭೋಗಿ, ಸೌಂದರ್ಯವತಿ, ಪರೋಪಕಾರಿ, ಗುರು ಹಿರಿಯರಲ್ಲಿ ಭಕ್ತಿ ಉಳ್ಳವಳು ಆಗಿರುತ್ತಾಳೆ.

ವೈಶಾಖ ಮಾಸ.

ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಬಂಧು ಬಾಂಧವರಲ್ಲಿ ಶ್ರದ್ಧೆ, ಶ್ರೇಷ್ಠರು, ಧನವಂತಳೂ, ರೂಪವಂತೆ, ಸರಳ ಹೃದಯಿ, ದೀರ್ಘಾಯುಷಿ, ಅಲ್ಪ ಕೋಪ ಹೊಂದಿರುವವಳು ಆಗಿರುತ್ತಾಳೆ.

 

ಜೇಷ್ಠ ಮಾಸ.

ವಿದ್ಯಾ,ವಿನಯ ಸಂಪನ್ನೆ ,ಧನ ಧಾನ್ಯ ಸಮೃದ್ಧಿಯುಳ್ಳವಳು, ತೀರ್ಥಕ್ಷೇತ್ರ ಸಂದರ್ಶಿಸುವವಳು, ಪರಿಶ್ರಮದಿಂದ ಕಾರ್ಯ ನಿರ್ವಹಿಸುವವಳು, ಸಮಾಧಾನ ಹೊಂದಿರುವವಳು ಆಗಿರುತ್ತಾಳೆ.

ಆಷಾಢ ಮಾಸ .

ಹೆಚ್ಚು ಮಾತಾಡುವವಳು, ಉತ್ತಮ ಪತಿ ಹೊಂದಿರುವವಳು, ಬಂಧು ವಿರೋಧಿ, ದುಃಖಿಯೂ, ಸುಳ್ಳು ಹೇಳುವವಳು, ಕಷ್ಟಜೀವಿ, ಅಲ್ಪ ಧನ ಹೊಂದಿರುವವಳು ಆಗುತ್ತಾಳೆ.

 

ಶ್ರಾವಣ ಮಾಸ.

ಅಂತಃಕರಣ ಹೃದಯಿ, ಚತುರಳು, ಉದಾರತೆಯ ಗುಣ ಹೊಂದಿರುವವಳು, ಗುಣವಂತೆ, ಪರೋಪಕಾರಿ, ಸುಖ ದುಃಖಗಳನ್ನು ಸಮಾನವಾಗಿ ಅನುಭವಿಸುವವಳು, ಗುರು ಹಿರಿಯರಿಗೆ ಮತ್ತು ದೇವ ದಿಗ್ಗಜರ ಮೇಲೆ ಭಕ್ತಿಯುಳ್ಳವಳು, ವ್ರತ ನಿಯಮಗಳನ್ನು ಆಚರಿಸುವವಳು ಆಗಿರುತ್ತಾಳೆ.

ಭಾದ್ರಪದ ಮಾಸ.

ಧರ್ಮಶಾಸ್ತ್ರ ಬಲ್ಲವಳು, ಸುಂದರ ಶರೀರ, ಧೃಡಕಾಯ ದೇಹ ಹೊಂದಿರುವವಳು, ವಿನಯವಾಗಿ ಮಾತನಾಡುವವಳು, ಸದ್ಗುಣಿ, ಧನ ಧಾನ್ಯ ಸಮೃದ್ಧಿ ಹೊಂದಿರುವವಳು, ವಿಲಾಸಿ ಪ್ರಿಯಳು, ಅತ್ತೆ ಮನೆಯಲ್ಲಿ ಸ್ಥಾನಮಾನ ಹೊಂದಿರುವವಳು, ಅಧಿಕಾರ ಚಲಾಯಿಸುವವರು ಆಗಿರುತ್ತಾಳೆ.

 

ಅಶ್ವಯುಜ ಮಾಸ.

ಬುದ್ಧಿವಂತಳು, ಧನವಂತಳು, ದಾನ ಧರ್ಮ ಪರೋಪಕಾರಿ ಗುಣ ಉಳ್ಳವಳು, ಪತಿ ಪ್ರಿಯಳು, ಭಕ್ತಿವಂತಳು, ಚಂಚಲ ಮನಸ್ಸಿನವಳು, ಕೀರ್ತಿವಂತೆಯು, ಸೇವಕಿಯರು ಉಳ್ಳವಳು, ಬಹು ಪುತ್ರವತಿಯೂ ಆಗುವಳು .

ಕಾರ್ತಿಕ ಮಾಸ.

ಐಶ್ವರ್ಯವಂತಳು, ಬುದ್ಧಿವಂತಳೂ, ಅನೇಕ ಕಾರ್ಯಗಳನ್ನು ತಿಳಿದಿರುವವಳು,ಚತುರಳು, ಬಹು ವಿಲಾಸಿ ಸುಗಂಧ ದ್ರವ್ಯ ವಸ್ತ್ರಾಭರಣಗಳ ಪ್ರೀತಿಯುಳ್ಳವಳು, ಅತ್ತೆ ಸೊಸೆ ಬಾಂಧವ್ಯ ಕಡಿಮೆ, ಹಠ ಮಾರಿಯೂ, ಬಹಳ ಮಾತನಾಡುವವಳು ಆಗುವಳು.

 

ಮಾರ್ಗಶಿರ ಮಾಸ.

ಶಾಸ್ತ್ರ ಪುರಾಣಗಳಲ್ಲಿ ಆಸಕ್ತಿ ಹೊಂದಿರುವವಳು, ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆ ಹೊಂದಿರುವವಳು, ಮೃದುವಾಗಿ ಮಾತನಾಡುವವಳು, ಸುಶೀಲಳು, ದಾನ ಧರ್ಮ ಮಾಡುವವಳು,ಸಂಗೀತ ಚಿತ್ರಕಲೆಗಳಲ್ಲಿ ಪ್ರವೀಣೆ,ಸತ್ಯವನ್ನು ಪ್ರತಿಪಾದಿಸುವವಳು ಆಗುವಳು.

ಪುಷ್ಯ ಮಾಸ .

ಗುರು ಹಿರಿಯರಲ್ಲಿ ಭಕ್ತಿಯುಳ್ಳವಳು, ಕಷ್ಟ ಜೀವಿಯು , ಶೂರಳು, ಸ್ವಬಲದಿಂದ ಕೆಲಸ ಸಾಧಿಸುವವಳು, ಪತಿ ಮಕ್ಕಳಿಂದ ಸುಖ ಹೊಂದಿರುವವಳು, ದುರಭಿಮಾನಿ, ಕಠೋರವಾಗಿ ಮಾತನಾಡುವವಳು ಆಗಿರುತ್ತಾಳೆ.

 

ಮಾಘ ಮಾಸ.

ಧರ್ಮಶಾಸ್ತ್ರಗಳ ರಹಸ್ಯ ತಿಳಿದವಳು, ಧನ ಧಾನ್ಯ ಸಮೃದ್ಧಿಯಿರುವವಳು,ಸುಂದರ ಮುಖ ಹೊಂದಿರುವವಳು, ಸರ್ವಜನ ಮಾನ್ಯಳು, ಬಂಧುಗಳೊಡನೆ ಪ್ರೀತಿಯಿಂದ ವರ್ತಿಸುವವಳು, ಗುರು ಹಿರಿಯರು ಹಾಗೂ ಸಾಧು ಸತ್ಪುರುಷರಲ್ಲಿ ಭಕ್ತಿಯುಳ್ಳವಳು ಆಗುವಳು.

ಫಾಲ್ಗುಣ ಮಾಸ.

ಭಯವಂತಳು, ಬುದ್ಧಿವಂತಳು, ಆಚಾರವ೦ತಳು, ಪುತ್ರವತಿಯೂ, ರೂಪವತಿಯು, ವಿಲಾಸಿ ಜೀವನದಲ್ಲಿ ಕಾಲ ಕಳೆಯುವವಳು, ಸುಗಂಧ ದ್ರವ್ಯ, ವಸ್ತ್ರಾ ಭರಣಗಳಲ್ಲಿ ಪ್ರೀತಿಯುಳ್ಳವಳು, ಪತಿಯಿಂದ ದುಃಖ ಹೊಂದತಕ್ಕವಳೂ ಆಗುವಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top