fbpx
ದೇವರು

ಈ ದೇವಸ್ಥಾನದಲ್ಲಿ ಹಾಲಿನ ಅಭಿಷೇಕ ಮಾಡುವಾಗ ಹಾಲು ನೀಲಿ ಬಣ್ಣಕ್ಕೆ ತಿರುಗುವ ಚಮತ್ಕಾರ ನಡೆಯುತ್ತೆ , ಇಲ್ಲಿ ಸರ್ಪದೋಷ ನಿವಾರಣೆ ಮಾಡ್ಕೋಳೋಕೆ ದೇಶ ವಿದೇಶಗಳಿಂದ ಭಕ್ತರು ಬರ್ತಾರೆ !

 

 

ಸರ್ಪ ವನ್ನು ಕಂಡರೆ ಎಲ್ಲರೂ ಭಯ ಪಡುತ್ತಾರೆ. ನೋಡಿದ ತಕ್ಷಣ ಅದನ್ನು ಸಾಯಿಸಿ ಎಂದು ಹೇಳುವರೆ ಜಾಸ್ತಿ.
ಆದರೆ ಇದು ತಪ್ಪು ಹೀಗೆ ಮಾಡುವುದರಿಂದ ಸರ್ಪ ದೋಷ ಬರುತ್ತದೆ.ಇದು ಜನ್ಮ ಜನ್ಮಕ್ಕೂ ತಲೆತಲಾಂತರ ಗಳವರೆಗೆ ನಮ್ಮ ಮಕ್ಕಳಿಗೆ,ಮರಿಮಕ್ಕಳಿಗೆ, ಹೇಗೆ ವಂಶ ಪರಂಪರ್ಯಾವಾಗಿ ಬೆಳೆದು ಬಿಡುತ್ತದೆ.

 

 

ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ,ದಾಂಪತ್ಯದಲ್ಲಿ ವಿರಸ, 30 ವರ್ಷ ವಯಸ್ಸಾದರು ಮದುವೆಯ ಯೋಗ ಇರುವುದಿಲ್ಲ,ಚರ್ಮದ ರೋಗಗಳು,ಒಳ್ಳೆಯ ಕೆಲಸ ಸಿಗುವುದಿಲ್ಲ,ಹೆಜ್ಜೆ ಹೆಜ್ಜೇಗೂ ತುಂಬಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ,. ಸರ್ಪ ದೋಷದ ಲಕ್ಷಣಗಳು ಒಬ್ಬ ವ್ಯಕ್ತಿಗೆ 22ವರ್ಷದ ನಂತರ ಪ್ರಾರಂಭವಾಗುತ್ತದೆ ಇದು 31 ವರ್ಷಗಳ ನಂತರ ಕಡಿಮೆಗೊಳ್ಳುತ್ತಾ ಹೋಗುತ್ತದೆ.

 

ವಿವಿಧ ಸರ್ಪಗಳ ಹೆಸರು ಮತ್ತು ದೋಷ.

 

1.ಅನಂತ.2.ವಾಸುಕಿ.3.ಶೇಷಾ.4.ಪದ್ಮನಾಭ.5.ಕಂಬಲಾ.6.ಶಂಕಪಾಲ. 7.ದೃತರಾಷ್ಟ್ರ8.ತ್ತಾಕ್ಷಕ.9.ಕಾಳಿಂಗ.ಈ ಸರ್ಪಗಳಿಗೆ ವಿಶೇಷವಾಗಿ ಹಾನಿ, ನೋವೂ ಉಂಟು ಮಾಡಿದರೆ ಸರ್ಪ ದೋಷ ಬರುತ್ತದೆ.

 

 

ಅನೇಕ ತೀರ್ಥ ಕ್ಷೇತ್ರಗಳಲ್ಲಿ ಸರ್ಪದೋಷ ನಿವಾರಣೆ ಮಾಡುವ ಸಲುವಾಗಿ ಎಷ್ಟೇ ತೀರ್ಥ ಕ್ಷೇತ್ರಗಳನ್ನು ಸುತ್ತಿದರು ಸರಿ ಹೋಗಲಿಲ್ಲ ಎಂದರೆ ರಾಹು ದೇವನು ಮಾನವ ರೂಪದಲ್ಲಿ ಇರುವ ದೇವರು ಇಲ್ಲಿ ನೆಲೆಸಿದೆ ಹಲವಾರು ನಾಗ ದೋಷಗಳಾದ ಮೂರ್ಛೆ ರೋಗ,ಗ್ರಹ ದೋಷಗಳು , ಅನಂತ ಕಾಲ ಸರ್ಪ ಯೋಗ, ಕುಳಿಕ ಕಾಲ ಸರ್ಪ ಯೋಗ, ವಾಸುಕಿ ಕಾಲಸರ್ಪ ಯೋಗ, ಶಂಕಪಾಲ ಕಾಲಸರ್ಪ ಯೋಗ , ಪದ್ಮ ಕಾಲಸರ್ಪ ಯೋಗ , ಮಹಪದ್ಮ ಕಾಲಸರ್ಪ ಯೋಗ , ಶೇಷನಾಗ ಕಾಲಸರ್ಪ ಯೋಗ ಮುಂತಾದ ಸರ್ಪ ದೋಷಗಳಿಗೆ ಈ ದೇವಾಲಯದಲ್ಲಿ ಪರಿಹಾರ ದೊರಕುತ್ತದೆ .

 

ಅಸಲಿಗೆ ಈ ದೇವಾಲಯ ಇರುವುದು ಎಲ್ಲಿ ?

 

 

ಈ ತಿರುನಾಗೇಶ್ವರ ದೇವಾಲಯವಿರುವುದು ತಮಿಳುನಾಡು ರಾಜ್ಯದ ತಂಜಾವೂರು ಜಿಲ್ಲೆಯಲ್ಲಿ , ರಾಹು ದೇವನು ಮಾನವ ರೂಪದಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಾನೆ, ಶಿವನು ಪಾರ್ವತಿ ದೇವಿ ಇಲ್ಲಿ ನೆಲೆಸಿದ್ದಾನೆ , ರಾಹು ದೇವನು ತನ್ನ ಇಬ್ಬರು ಪತ್ನಿಯರಾದ ನಾಗಕನ್ನಿ ಮತ್ತು ನಾಗವಲ್ಲಿ ಜೊತೆ ಇಲ್ಲಿದಾನೆ.

ಸರ್ಪದೋಷದಿಂದ ಪರಿಹಾರ ಸಿಗದೇ ನೊಂದಿದ್ದರೆ ತಿರುನಾಗೇಶ್ವರನ ಅಭಿಷೇಕ ಮಾಡಿಸಬೇಕು .

ಇತಿಹಾಸ :

 

 

ಸದಾ ಜನರಿಗೆ ಕಾಟ ಕೊಡುತ್ತಾನೆ ಎಂದು ಹೆಸರುವಾಸಿಯಾಗಿರುವ ರಾಹುವು ತನ್ನ ಶಾಪದಿಂದ ಮುಕ್ತಿ ಹೊಂದಲು ಇಲ್ಲಿ ಬಂದು ನೆಲೆಸಿದ ಶಿವನನ್ನು ಆರಾಧಿಸಿದನಂತೆ ಎಂಬುವ ನಂಬಿಕೆ ಇದೆ .

 

 

ಅಭಿಷೇಕ ಮಾಡುವಾಗ ಹಾಲಿನ ಬಣ್ಣ ನೀಲಿಯಾಗಿ ಬದಲಾಗುತ್ತದೆಯಂತೆ ಈ ವಿಸ್ಮಯವನ್ನು ನೋಡಲು ದೇಶ ವಿದೇಶಗಳಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ , ಹಣ ಕಾಸು ಅಥವಾ ಇನ್ನಾವುದೇ ಗುಪ್ತ ಸಮಸ್ಯೆಗಳಿಂದ ಬಳಲುತ್ತಿದ್ದರು ಸಹ ಇಲ್ಲಿ ಹಾಲಿನ ಅಭಿಷೇಕ ಮಾಡಿಸಿದರೆ ಒಳ್ಳೆಯದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top