fbpx
ದೇವರು

ಭಗವಂತನಾದ ಶ್ರೀ ಮಹಾವಿಷ್ಣುವು ಭೃಗು ಮಹರ್ಷಿಗಳ ಅಹಂಕಾರ ಅಳಿಸಿ  ಶ್ರೀ ವೆಂಕಟೇಶ್ವರ ಸ್ವಾಮಿಯ ಅವತಾರದಲ್ಲಿ ಭೂಮಿಗೆ ಬಂದ ಕಥೆ.

 ಭಗವಂತನಾದ ಶ್ರೀ ಮಹಾವಿಷ್ಣುವು  ಶ್ರೀ ವೆಂಕಟೇಶ್ವರ ಸ್ವಾಮಿಯ ಅವತಾರದಲ್ಲಿ ಭೂಮಿಗೆ ಬಂದ ಕಥೆ.

 

 

ಋಷಿಮುನಿಗಳ ತ್ಯಾಗ.

 

 

ಪುರಾಣ ಕಾಲದಲ್ಲಿ ಎಲ್ಲಾ ಋುಷಿಮುನಿಗಳು ಸಹ ಒಂದು ಕಡೆ ಸೇರಿ ಈ ಜಗತ್ತಿನ ಒಳಿತಿಗಾಗಿ ತ್ಯಾಗ ಮಾಡಲು ನಿರ್ಧರಿಸುತ್ತಾರೆ. ಅಲ್ಲಿ ಅತ್ಯಂತ ಪ್ರಸಿದ್ಧವಾದ ನಾರದ ಮುನಿಗಳು ಸಹ ಬಂದರು .ನಾರದರು ಬಂದು ಋಷಿಮುನಿಗಳನ್ನು ನೀವು ಈ ತ್ಯಾಗದ ಫಲಿತಾಂಶವನ್ನು ಯಾವ ದೇವರಿಗೆ ಕೊಡಬೇಕು ಎಂದುಕೊಂಡಿದ್ದೀರಾ  ? ಬ್ರಹ್ಮನಿಗೊ ಅಥವಾ ವಿಷ್ಣುವಿಗೊ ?  ಅಥವಾ ಮಹೇಶ್ವನಿಗೊ  ? ಎಂದು ಕೇಳಿದರು. ಅದಕ್ಕೆ ಋಷಿಮುನಿಗಳು ಹೀಗೆ ಹೇಳಿದರು ಯಾವ ದೇವರು ಈ ಜಗತ್ತನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವನೋ ಅಂದರೆ  ಸತ್ವ ,ರಜಸ್, ಮತ್ತು ತಮೋ ಗುಣಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುತ್ತಾನೋ ಅವನಿಗೆ ಈ ತ್ಯಾಗದ ಫಲಿತಾಂಶವೂ ದೊರೆಯುವುದು ಎಂದು ಹೇಳಿದರು.

ಅವರಲ್ಲೇ ಚರ್ಚೆಗಳು ಪ್ರಾರಂಭವಾದವು. ಮೂವರಲ್ಲಿ ಯಾರು ಶ್ರೇಷ್ಠರು ? ಯಾರೂ ದೊಡ್ಡವರು ? ಯಾರಿಗೆ ಈ ತ್ಯಾಗದ ಫಲಿತಾಂಶದ ಅರ್ಹತೆ ಸಿಗಬೇಕು ಎಂದು ಚರ್ಚೆಗಳು ನಡೆಯುತ್ತಿದ್ದವು. ಕೊನೆಗೆ ಋಷಿ ಮುನಿಗಳಾದ ಭೃಗು ಮಹರ್ಷಿಗಳಿಗೆ ಯಾರು ದೊಡ್ಡವರೆಂದು ತಿಳಿಯಲು ಹೇಳಿದರು.

 

ಭೃಗು ಮಹರ್ಷಿಗಳು ಬ್ರಹ್ಮನ ಬಳಿ ಮೊದಲು ಹೋಗುತ್ತಾರೆ.

 

 

ಭೃಗು ಮಹರ್ಷಿಗಳಿಗೆ ಪೂರ್ವ ,ಪ್ರಸ್ತುತ ಮತ್ತು ಹಿಂದಿನ ವಿಷಯಗಳ ಬಗ್ಗೆ ತಿಳಿದಿತ್ತು. ಯಾಕೆಂದರೆ ಅವರ ಕಾಲಿನ ಪಾದಗಳ ಅಡಿಯಲ್ಲಿ ಮೂರನೇ ಕಣ್ಣು ಇತ್ತು ಆ ಕಣ್ಣಿನಿಂದ ಎಲ್ಲವನ್ನೂ ತಿಳಿಯುತ್ತಿದ್ದರು. ಭೃಗು ಮಹರ್ಷಿಗಳು ಮೊದಲು  ಬ್ರಹ್ಮನ ಬಳಿ  ಹೋದರೂ ಬ್ರಹ್ಮದೇವನು ಭೃಗು ಮಹರ್ಷಿಗಳ ಕಡೆಗೆ ಅಷ್ಟಾಗಿ ಗಮನ ಹರಿಸಲಿಲ್ಲ ಭೃಗು ಮಹರ್ಷಿಗಳು ಕೋಪಗೊಂಡು ಬ್ರಹ್ಮನಿಗೆ ನಾಲ್ಕು ಮುಖಗಳಿದ್ದು  ಮತ್ತು ಎಂಟು ಕಣ್ಣುಗಳಿದ್ದರೂ ಸಹ ಯಾರೂ ಅತಿಥಿಗಳು ಬಂದಿರುವವರು ಎಂದು ಕಾಣಿಸುವುದಿಲ್ಲವೇ  ?

ಎಂದು ಆದ್ದರಿಂದ ಬ್ರಹ್ಮನಿಗೆ ಈ ತ್ಯಾಗದ ಫಲಿತಾಂಶವನ್ನು ಪಡೆಯಲು ಅರ್ಹತೆ ಇಲ್ಲ ಯಾಕೆಂದರೆ ಅವನು ರಜಸ್ ಗುಣದಲ್ಲಿ ಮುಳುಗಿದ್ದನು. ಆದ್ದರಿಂದ ಭೃಗು ಮಹರ್ಷಿಗಳು  ಬ್ರಹ್ಮನಿಗೆ ಎಂದಿಗೂ ಕೂಡ ಯಾವ ದೇವಸ್ಥಾನಗಳಲ್ಲಿಯೂ ಯಾವ ಪ್ರಾರ್ಥನೆ ಪೂಜೆಯನ್ನು ಮಾಡಬಾರದು ಎಂದು ಶಾಪ ಕೊಟ್ಟರು. ಆದ್ದರಿಂದಲೇ ಬ್ರಹ್ಮನಿಗೆ ಈ ಭೂಮಿಯ ಮೇಲೆ ನಾವು ದೇವಸ್ಥಾನಗಳು ಇರುವುದನ್ನು ಮತ್ತು ಅವನನ್ನು ಪೂಜಿಸುವುದನ್ನು ನೋಡಲು ಎಲ್ಲಿಯೂ ಸಿಗುವುದಿಲ್ಲ .

 

ಭೃಗುವಿನ ಪ್ರವಾಸ ಕೈಲಾಸಕ್ಕೆ.

 

 

ಭೃಗುವಿನ ಮನಸ್ಸಿಗೆ ಆಗಲೇ ನೋವಾಗಿತ್ತು. ಅಲ್ಲಿಂದ ಹೊರಟು ಭೃಗು ಮಹರ್ಷಿಗಳು ಶಿವನ ಪರ್ವತವಾದ ಕೈಲಾಸ ಪರ್ವತಕ್ಕೆ ಶಿವನ ಬಳಿ ಬಂದರು .ಅಲ್ಲಿ ಭೃಗು ಮಹರ್ಷಿಗಳು ಭಗವಂತನಾದ ಶಿವ ಮತ್ತು ದೇವಿ ಪಾರ್ವತಿಯು ಸಂತೋಷವಾಗಿ ನೃತ್ಯ ಮಾಡುತ್ತಾ ಕಾಲ ಕಳೆಯುವುದನ್ನು ನೋಡಿದರು. ನಂದಿ ಮತ್ತು ಇತರ ಶಿವನ ದೂತರು ಸಹ ಅವರ ನೃತ್ಯವನ್ನು ನೋಡುತ್ತಾ ನಿಂತು ಬಿಟ್ಟಿದ್ದರು. ಶಿವನು ಅತಿಥಿಗಳಿಗೆ ಗಮನ ಕೊಡಲು ಆಗಲಿಲ್ಲ .ಭೃಗುವಿಗೆ ಕೋಪ ಬಂದು ಹೀಗೆ ಹೇಳಿದರು ಶಿವನೂ ಸಹ ತ್ಯಾಗದ ಫಲಿತಾಂಶಕ್ಕೆ ಅರ್ಹನಲ್ಲ ಶಿವನಿಗೆ ನಿನ್ನ ಮೂರ್ತಿಗೆ ಎಂದಿಗೂ ದೇವಾಲಯಗಳಲ್ಲಿ ಇಟ್ಟು ಪೂಜಿಸಲಾಗುವುದಿಲ್ಲ ಎಂದು ಶಾಪ ನೀಡಿದರು. ಇದೇ ಕಾರಣಕ್ಕಾಗಿ ಶಿವನನ್ನು ಲಿಂಗ ಸ್ವರೂಪವಾಗಿ ಇಟ್ಟು ಪೂಜಿಸಲಾಗುತ್ತದೆ.  ಬದಲಾಗಿ ನಾವು ಅಷ್ಟಾಗಿ ಶಿವನ ಮೂರ್ತಿಗಳು ನಮಗೆ ನೋಡಲು ಕಾಣ ಸಿಗುವುದಿಲ್ಲ.

 

 ಭೃಗು ಮಹರ್ಷಿಯು ನಂತರ ವೈಕುಂಠಕ್ಕೆ ಹೋಗುತ್ತಾರೆ.

 

 

ಭೃಗು ಮಹರ್ಷಿಗಳು ವೈಕುಂಠಕ್ಕೆ ಬರುತ್ತಾರೆ. ಭಗವಂತನಾದ ಶ್ರೀ ಮಹಾವಿಷ್ಣುವಿನ ಬಳಿ ಬರುತ್ತಾರೆ. ಭೃಗು ವಿಷ್ಣುವನ್ನು ನೋಡುತ್ತಾರೆ.ವಿಷ್ಣುವು ತನ್ನ ಪತ್ನಿಯಾದ ಶ್ರೀ ಲಕ್ಷ್ಮೀ ದೇವಿಯ ತೊಡೆಯ ಮೇಲೆ ಮಲಗಿರುತ್ತಾನೆ. ಅನಂತ ಎಂಬ ಹೆಸರಿನ ಸರ್ಪದ ಮೇಲೆ ಮಲಗಿರುತ್ತಾನೆ. ಅದೇ ವಿಷ್ಣು ದೇವನು ಮಲಗುವ ಹಾಸಿಗೆಯಾಗಿರುತ್ತದೆ. ನಾರಾಯಣನು ಭೃಗು ಮಹರ್ಷಿಯು ಬರುತ್ತಿರುವುದನ್ನು  ನೋಡಿದರೂ ಸಹ  ನೋಡಲಿಲ್ಲ ಎನ್ನುವಂತೆ  ಲಕ್ಷ್ಮೀ  ದೇವಿಯ ಜೊತೆ ಮಾತುಕತೆಯನ್ನು ಮುಂದುವರಿಸುತ್ತಾನೆ. ಅವನು ಯಾರೆಂದು ? ಏನು ಮಾಡುತ್ತಿದ್ದಾನೆ ? ಎಂದು ಸಹ ನೋಡದೆ ಭೃಗು ಮಹರ್ಷಿಗಳು ವಿಷ್ಣುವಿನ ಎದೆಯ ಮೇಲೆ ತನ್ನ ಕಾಲನ್ನು ಇಡುತ್ತಾರೆ. ನಾರಾಯಣನು ನಿಧಾನವಾಗಿ ಎದ್ದು ಭೃಗು ಮಹರ್ಷಿಗಳ ಕಾಲನ್ನು ತೆಗೆದು ಅವರ ಕಾಲನ್ನು ಹಿಡಿದು ಕ್ಷಮಿಸಿ ಎಂದು ಕೇಳಿಕೊಳ್ಳುತ್ತಾನೆ.ಭೃಗು ಮಹರ್ಷಿಗಳಿಗೆ ನಾನು ಗಮನಿಸಿಲ್ಲ ತಪ್ಪು ಮಾಡಿದೆ ಎಂದು ಹೇಳಿ ಕ್ಷಮೆ ಕೇಳುತ್ತಾನೆ.

 

 

ವಿಷ್ಣುವು ಭೃಗು  ಮಹರ್ಷಿಯನ್ನು ನಿಮ್ಮ ಪಾದಗಳನ್ನು  ನನ್ನ ಎದೆಯ ಮೇಲೆ ಇಟ್ಟಾಗ ನಾನು ಧರಿಸಿರುವ ಆಭರಣಗಳಿಂದ ನಿಮ್ಮ ಪಾದಗಳಿಗೆ ನೋವಾಗಿರಬಹುದು ಎಂದು ಆ ನೋವನ್ನು ಶಮನಗೊಳಿಸಲು ವಿಷ್ಣು ಭೃಗು ಮಹರ್ಷಿಗಳ ಪಾದವನ್ನು ಕೈಯಿಂದ ಉಜ್ಜುತ್ತಾನೆ. ಆಗ ಅವನ ಪಾದ ದೊಳಗಿರುವ ಮೂರನೇ ಕಣ್ಣು ನಾಶವಾಗುತ್ತದೆ. ಆಗ ಅವನ ತಪ್ಪಿನ ಅರಿವಾಗಿ ವಿಷ್ಣುವನ್ನು ಹೊಗಳುತ್ತಾನೆ.ಮರಳಿ ಋುಷಿಗಳ ಮುಂದೆ ಭೃಗು ಮಹರ್ಷಿಗಳು ಬಂದು ತ್ರಿಮೂರ್ತಿಗಳಲ್ಲಿ ವಿಷ್ಣುವೇ ದೊಡ್ಡವನು ಎಂದು ಹೇಳುತ್ತಾರೆ. ನಮ್ಮ ತ್ಯಾಗದ ಫಲಿತಾಂಶವನ್ನು ಮಹಾವಿಷ್ಣುವಿಗೆ ಕೊಡಲು ಹೇಳುತ್ತಾರೆ.

ಈ ರೀತಿಯಾಗಿ ಋುಷಿಗಳ ತ್ಯಾಗದ ಫಲಿತಾಂಶದ ಫಲವು ಶ್ರೀ ಮಹಾವಿಷ್ಣುವಿಗೆ ದೊರೆಯುವುದು .ಆದ್ದರಿಂದಲೇ ವಿಷ್ಣು ದೇವನು ಶ್ರೀಮನ್ ನಾರಾಯಣನಾಗಿ  ಮುಂದೆ  ಕಲಿಯುಗದ ದೈವನಾಗಿ ಶ್ರೀನಿವಾಸನಾಗಿ ಮತ್ತು ಬಾಲಾಜಿಯಾಗಿ ತಿರುಮಲ ತಿರುಪತಿಯಲ್ಲಿ ಬಂದು ನೆಲೆಸುತ್ತಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top