fbpx
ಉಪಯುಕ್ತ ಮಾಹಿತಿ

ದೇವರ ದರ್ಶನದ ನಂತರ ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಕೂತ್ಕೋಬೇಕು ಅಂತಾ ದೊಡ್ಡವರು ಯಾಕೆ ಹೇಳ್ತಾರೆ ಗೊತ್ತಾ ? ಅದರ ಹಿಂದಿರೋ ವೈಜ್ಞಾನಿಕ ಕಾರಣ ತಿಳ್ಕೊಳ್ಳಿ

ದೇವರ ದರ್ಶನದ  ನಂತರ ದೇವಸ್ಥಾನದಲ್ಲಿ  ಸ್ವಲ್ಪ ಹೊತ್ತು ಕುಳಿತುಕೊಂಡರೆ ಸಿಗುವ ಅದ್ಬುತವಾದ ಉಪಯೋಗಗಳು ಏನೇನು ? ಎಂದು ತಿಳಿಯೋಣ ಬನ್ನಿ.

 

ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ ಮಾಡಿದ ನಂತರ,ದೇವಸ್ಥಾನದಲ್ಲಿ ಕುಳಿತುಕೊಳ್ಳುವುದು ನಮ್ಮ ಆಚಾರವಾಗಿದೆ ಹಾಗೆ ಕುಳಿತುಕೊಂಡರೆ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ದೊರೆಯುವುದು.

 

 

ಇನ್ನೂ ಕೆಲವರು ಅವಸರ ಅವಸರವಾಗಿ ದೇವರಿಗೆ ನಮಸ್ಕಾರ ಮಾಡಿ ಹೊರಟು ಹೋಗುತ್ತಾರೆ.ದೇವರ ದರ್ಶನ ಮಾಡಿದ ನಂತರ ದೇವಸ್ಥಾನದಲ್ಲಿ ಏಕೆ ಕುಳಿತುಕೊಳ್ಳಬೇಕು ?  ಎಂದುಕೊಂಡು ತಕ್ಷಣವೇ ದೇವಸ್ಥಾನದಿಂದ ಹೊರಟು ಹೋಗುತ್ತಾರೆ.

 

ಹೀಗೆ ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು  ಕುಳಿತುಕೊಳ್ಳಲೇಬೇಕು ಎಂದು  ನಮ್ಮ ಶಾಸ್ತ್ರ ಏಕೆ ಹೇಳುತ್ತಿದೆ ?  ಎಂಬುದನ್ನು ನಾವು ಈಗ ತಿಳಿಯೋಣ.

 

 

ದೇವಸ್ಥಾನದಲ್ಲಿ ಧನಾತ್ಮಕ ಶಕ್ತಿಯು ಅಧಿಕವಾಗಿರುವುದು.ಅಲ್ಲಿಗೆ ಹೋದ ಪ್ರತಿಯೊಬ್ಬರಿಗೂ ಆ  ಪ್ರಶಾಂತವಾದ ವಾತವಾರಣದಿಂದ ಮನಸ್ಸಿಗೆ ಹಿತವೆನಿಸುವುದು.ಅಲ್ಲಿನ ಪ್ರಾಶಾಂತತೆಯ ಕಾರಣ ಅಲ್ಲಿ ಕುಳಿತುಕೊಳ್ಳುವುದರಿಂದ ಒಳ್ಳೆಯದೇ ಆಗುವುದು ಮತ್ತು ಮನಸ್ಸು ಸಹ ಕೆಟ್ಟದ್ದನ್ನು ಆಲೋಚಿಸದಂತೆ ಮಾಡುತ್ತದೆ. ಮನಸ್ಸು ಕೂಡ ಶಾಂತಿ ಮತ್ತು ಸಹನೆಯನ್ನು  ಗಳಿಸುತ್ತದೆ. ಧನಾತ್ಮಕ ಚಿಂತನೆಯ ಮತ್ತು ಉತ್ತಮ ಮಾರ್ಗದ ಕಡೆಗೆ  ಮನಸ್ಸು ಹರಿಯುವ  ಅವಕಾಶವನ್ನು ಸುದ್ಬುದ್ಧಿಯನ್ನು ನಮ್ಮ ಮನಸ್ಸಿಗೆ ಕೊಡುತ್ತದೆ.

ದೇವಸ್ಥಾನದಲ್ಲಿ ದೇವರ ದರ್ಶನದ ನಂತರ ಪ್ರಶಾಂತವಾಗಿ ಕುಳಿತುಕೊಳ್ಳುವುದರಿಂದ ಪೂರ್ಣ ಫಲ ದೊರೆಯುವುದು ಎಂದು ಶಾಸ್ತ್ರಗಳು ಹೇಳುತ್ತವೆ.

ಹೀಗೆ ದೇವಸ್ಥಾನದಲ್ಲಿ ದೇವರ ದರ್ಶನದ ನಂತರ ಕುಳಿತುಕೊಳ್ಳುವುದು ಒಂದು ಧ್ಯಾನಕ್ಕೆ ಸಮ,ಕನಿಷ್ಠ ಪಕ್ಷ ಎರಡು ನಿಮಿಷಗಳ ಕಾಲ ಮೌನವಾಗಿ ಕುಳಿತುಕೊಂಡು ನಾವು ದರ್ಶನ ಮಾಡಿರುವ  ಆ ಭಗವಂತನನ್ನು ನಾಮ ಸ್ಮರಣೆ ಮತ್ತು  ಸ್ಮೃತಿ ಮಾಡಿಕೊಂಡರೆ ಒಳ್ಳೆಯದು.

 

 

ದೇವಸ್ಥಾನದಲ್ಲಿರುವ ಮೂಲ ವಿಗ್ರಹವನ್ನು ಪ್ರತಿಷ್ಠಾಪಿಸುವಾಗ ವೇದ ಮಂತ್ರದಿಂದ ಬರೆದಿರುವ ತಾಮ್ರ ಪತ್ರಗಳನ್ನು ಮೂಲ ವಿಗ್ರಹದ ಕೆಳಗೆ ಇಟ್ಟಿರುತ್ತಾರೆ.ಆದ್ದರಿಂದ ನಾವು ಸ್ವಲ್ಪ ಹೊತ್ತು ದೇವಸ್ಥಾನದಲ್ಲಿಯೇ ಕುಳಿತು ಕೊಳ್ಳುವುದರಿಂದ ಆ ತಾಮ್ರದಲ್ಲಿರುವ ಮತ್ತು ಆ  ವೇದ ಮಂತ್ರಗಳಿಂದ ಬರುವ ಭೂ ಆಯಸ್ಕಾಂತದ  ತರಂಗಗಳನ್ನು ನಮ್ಮ ಶರೀರ ಗ್ರಹಿಸುತ್ತದೆ.ಇದರಿಂದ ನಮ್ಮ ಮನಸ್ಸಿಗೆ ಶಾಂತಿ, ಸಮಾಧಾನ ಸಿಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top