fbpx
ಕ್ರೀಡೆ

ಅನುಷ್ಕಾ ಬಗ್ಗೆ ವಿರಾಟ್ ಬಿಚ್ಚ್ಚಿಟ್ಟ ರೊಮ್ಯಾಂಟಿಕ್ ವಿಷ್ಯ!

ಅನುಷ್ಕಾ ಬಗ್ಗೆ ವಿರಾಟ್ ಬಿಚ್ಚ್ಚಿಟ್ಟ ರೊಮ್ಯಾಂಟಿಕ್ ವಿಷ್ಯ!

 

 

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೋಹ್ಲಿ ಸದ್ಯದ ರೊಮ್ಯಾಂಟಿಕ್ ಸೆಲೆಬ್ರಿಟಿ ಜೋಡಿ. ಕಣಕ್ಕಿಳಿದರೆ ಹೀನಾಮಾನ ಬ್ಯಾಟಿಂಗ್ ನಡೆಸಿ ಎದುರಾಳಿಗಳ ಅಳ್ಳೆ ಅದುರಿಸೋ ಕೋಹ್ಲಿ ವರ್ಷಾಂತರಗಳ ಹಿಂದೆ ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳೇ ಆಡಿಕೊಳ್ಳುವಂತಾಗಿತ್ತು. ಆ ಸಂದರ್ಭದಲಿ ಕ್ರಿಕೆಟ್ ಪಂಡಿತರು ಕೋಹ್ಲಿಯ ಕಳಪೆ ಪ್ರದರ್ಶನಕ್ಕೆ ನೇರಾನೇರ ಅನುಷ್ಕಾಳನ್ನೇ ಹೊಣೆ ಮಾಡಿದ್ದರು!

 

 

ಆದರೀಗ ಈ ವಿಚಾರವಾಗಿ ಅಸಲೀ ಸತ್ಯವನ್ನು ವಿರಾಟ್ ಹೊರ ಹಾಕಿದ್ದಾರೆ. ಗೌರವ್ ಕಪೂರ್ ನಡೆಸಿದ ಸಂದರ್ಶನದಲ್ಲಿ ವಿರಾಟ್ ತನ್ನ ಮನದನ್ನೆ ಬಂದ ಮೇಲೆ ತನ್ನ ಬದುಕಿನ ಚಹರೆಯೇ ಬದಲಾದದ್ದರ ಬಗ್ಗೆ ಪಕ್ಕಾ ರೊಮ್ಯಾಂಟಿಕ್ ಮೂಡಲ್ಲಿ ಮಾತಾಡಿದ್ದಾರೆ!

 

 

ಈಗ್ಗೆ ನಾಲಕ್ಕು ವರ್ಷದಿಂದೀಚೆಗೆ ನನ್ನೊಳಗಾದ ಬದಲಾವಣೆಗಳನ್ನು ಕಂಡು ನಾನೇ ಅಚ್ಚರಿಗೊಂಡಿದ್ದೇನೆ. ಇದಕ್ಕೆ ಪ್ರಧಾನ ಕಾರಣ ಅವವಳು; ಅನುಷ್ಕಾ. ಆಕೆ ನನ್ನ ಜೀವನ ಪ್ರವೇಶ ಮಾಡಿದ ನಂತರ ನಾನು ಸಿಕ್ಕಾಪಟ್ಟೆ ಸೆನ್ಸಿಟಿವ್ ಆಗಿದ್ದೇನೆ. ಸಿಟ್ಟಿನ ಜಾಗವನ್ನು ತಾಳ್ಮೆ ಆವರಿಸಿಕೊಂಡಿದೆ. ಮನರಂಜನೆಯ ದಿಕ್ಕು ಬದಲಾಗಿ ಪುಸ್ತಕಗಳ ತೆಕ್ಕೆಗೆ ಬಿದ್ದಿದ್ದೇನೆ. ಅವಳ ಹೊರತಾಗಿ ನನ್ನನ್ನು ಕಲ್ಪಿಸಿಕೊಳ್ಳಲಾಗದ ಹಂತ ತಲುಪಿಕೊಂಡಿದ್ದೇನೆ. ಅವಳು ನನ್ನ ಜೀವನದ ಜಾದೂಗಾರ್ತಿ…

 

 

ಇದು ವಿರಾಟ್ ಅನುಷ್ಕಾ ಬಗ್ಗೆ ಒಂದೇ ಉಸಿರಿನಲ್ಲಿ ಉಸುರಿದ ವಿಚಾರ! ತಾನು ಲ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ತಾನೇ ಹೊಣೆ ಎಂದಿರೋ ವಿರಾಟ್, ಅನುಷ್ಕಾ ಪ್ರತೀ ಹಂತದಲ್ಲಿಯೂ ತನ್ನನ್ನು ಮೋಟಿವೇಟ್ ಮಾಡುತ್ತಾಳೆಂದು ಹೇಳಿಕೊಂಡಿದ್ದಾರೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top