fbpx
ಮನೋರಂಜನೆ

ದರ್ಶನ್, ಸುದೀಪ್ ರೇಂಜ್ ಸಮೀಪಕ್ಕೆ ಬಂದು ನಿಂತಿದೆ ಧ್ರುವ ಸರ್ಜಾ ಸಂಭಾವನೆ..!!

ದರ್ಶನ್, ಸುದೀಪ್ ರೇಂಜ್ ಸಮೀಪಕ್ಕೆ ಬಂದು ನಿಂತಿದೆ ಧ್ರುವ ಸರ್ಜಾ ಸಂಭಾವನೆ..!!

 

 

“ಭರ್ಜರಿ’ ಚಿತ್ರದ ಮೂಲಕ ಹ್ಯಾಟ್ರಿಕ್‌ ಯಶಸ್ಸು ಕೊಟ್ಟ ಧ್ರುವ ಸರ್ಜಾ ಸಂಭಾವನೆ ಈಗ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಕನ್ನಡದ ಟಾಪ್ ಸೂಪರ್ ಸ್ಟಾರ್’ಗಳಾದ ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ಪಡೆಯುವ ಸಂಭಾವನೆ ಹತ್ತಿರ ಮೊತ್ತದ ಸಂಭಾವನೆ ಪಡೆಯಲಿದ್ದಾರೆ. ಧ್ರುವ ಸರ್ಜಾ ಅವರ ಸಂಭಾವನೆ ಈ ಬರೋಬ್ಬರಿ ಆರು ಕೋಟಿಯಾಗಿದೆ. ಮುಂದೆ ಓದಿ

 

 

ಸಂಭಾವನೆ ಹೆಚ್ಚಾಗಿರುವುದರ ಬಗ್ಗೆ ಸ್ವತಃ ಧ್ರುವ ಸರ್ಜಾ ಅವರೇ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆ “ಹೌದು” ಎಂದು ಉತ್ತರ ನೀಡಿದ ದ್ರುವ “ಭರ್ಜರಿ ಚಿತ್ರ ಬಿಡುಗಡೆಯಾಗುವುದಕ್ಕೆ ಮುಂಚೆಯೇ ಯುಟ್ಯೂಬ್‌ ವಿಡಿಯೊವಿಂದರಲ್ಲಿ ನಾನು 6 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದೇನೆಂಬ ಸುದ್ದಿ ನೋಡಿದೆ. ಆದರೆ ನಾನು ಭರ್ಜರಿ ಚಿತ್ರಕ್ಕೆ ಅಷ್ಟು ಸಂಭಾವನೆ ಪಡೆದುಕೊಂಡಿರಲಿಲ್ಲ. ಆ ವಿಡಿಯೋವನ್ನ ನಾನು ಅದನ್ನು ಪಾಸಿಟಿವ್‌ ಆಗಿಯೇ ತಗೊಂಡೆ. ಆ ಸುದ್ದಿ ಯಾಕೆ ನಿಜವಾಗಬಾರದು ಎಂದು ನನಗೆ ಅನಿಸಿತು. ಹಾಗೆ ಪ್ರೇರಣೆಯಾದವ ನಾನು” ಎಂದು ದ್ರುವ ಹೇಳಿದರು.

 

 

ನನ್ನ ಸಂಭಾವನೆ ನನಗಿಂತ ಮೊದಲೇ ಸೋಷಿಯಲ್ ಮೀಡಿಯಾಗಳಲ್ಲೇ ಫಿಕ್ಸ್ ಆಗುತ್ತಿವೆ ಮುಂದೆ ಅದೇ ರೀತಿ 7/8 ಕೋಟಿ ಸಂಭಾವನೆ ಅಂತ ಸುದ್ದಿ ಬಂದರೆ ಅಷ್ಟೇ ಕೇಳುತ್ತೇನೆ ಹಾಗಂತ ಮಾತ್ರಕ್ಕೆ ಸಂಭಾವನೆಯೇ ಮುಖ್ಯವಲ್ಲ ಒಳ್ಳೆಯ ಕತೆಗೆ ನನ್ನ ಮೊದಲ ಆದ್ಯತೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ.. ಈ ಮೂಲಕ ದರ್ಶನ್,ಸುದೀಪ್,ಪುನೀತ್ ನಂತರ ಆರು ಕೋಟಿ ಸಂಭಾವನೆ ಪಡೆಯುತ್ತಿರುವ ಕನ್ನಡ ನಟನಾಗಿ ದ್ರುವ ಸರ್ಜಾ ಟಾಪ್ ಸ್ಟಾರ್’ಗಳ ಲಿಸ್ಟ್ ಗೆ ಸೇರ್ಪಡೆಯಾಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top