fbpx
ಕಿರುತೆರೆ

ಹಾಲು ಕದ್ದು ಬಚ್ಚಿಟ್ಟಿದ್ದ ಸೋ ಕಾಲ್ಡ್ ಸೆಲೆಬ್ರೆಟಿಗಳಿಗೆ ಬುದ್ದಿ ಕಲಿಸಿದ ಕಿಚ್ಚ..!

ಹಾಲು ಕದ್ದು ಬಚ್ಚಿಟ್ಟಿದ್ದ ಸೋ ಕಾಲ್ಡ್ ಸೆಲೆಬ್ರೆಟಿಗಳಿಗೆ ಬುದ್ದಿ ಕಲಿಸಿದ ಕಿಚ್ಚ..!

 

 

ಈ ಭಾರಿಯ ಬಿಗ್’ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸೆಲೆಬ್ರೆಟಿಗಳೆನಿಸಿಕೊಂಡವರು ಮನೆಯಲ್ಲಿ ಹಾಲನ್ನು ಕದ್ದು ಮುಚ್ಚಿಟ್ಟು ಸಿಕ್ಕುಹಾಕಿಕೊಂಡಿದ್ದಾರೆ. ಈ ಹಾಲನ್ನು ಬಚ್ಚಿಟ್ಟ ವಿಷಯ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ತುಂಬಾ ಚರ್ಚೆಗೆ ಒಳಪಟ್ಟಿತು. ಕುಡಿಯುವ ಹಾಲನ್ನು ಮುಚ್ಚಿಟ್ಟು ಅದನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ ಸೋ ಕಾಲ್ಡ್ ಸೆಲೆಬ್ರೆಟಿಗಳ ವಿರುದ್ಧ ನಟ ಸುದೀಪ್ ಗರಂ ಆದರು. ಮುಂದೆ ಓದಿ.

 

 

ಸಮೀರ್ ಆಚಾರ್ಯರವರು ಟೀ ಬದಲು ಹಾಲು ಸೇವಿಸಲು ಒಂದು ಲೋಟಹಾಲು ಕೇಳಿದಾಗ ಎರಡು ದಿನಕ್ಕೆ ಮಾತ್ರ ಹಾಲಿದೆ ಎಂದು ಹಾಲು ನೀಡಲು ಚಂದ್ರು, ದಯಾಳ್‌, ಅನುಪಮಾ ಹಾಗೂ ಆಶಿತಾ ಆಚಾರ್ಯರಿಗೆ ಹಾಲು ಕೊಡಲು ನಿರಾಕರಿಸಿದರು.. ಆಚಾರ್ಯರಿಗೆ ಹಾಲು ಕೊಡಿ ಎಂದು ಜಯಶ್ರೀನಿವಾಸನ್ ಗುರೂಜಿ ಹೇಳಿದ್ದಕ್ಕೆ ಆಶಿತಾ ಮತ್ತು ಜಗನ್ ಗುರೂಜಿ ವಿರುದ್ಧ ಜೋರಾಗಿ ಜಗಳ ಮಾಡಿದ್ದರು. ಅನುಪಮಾ ದಯಾಳ್ ಸೇರಿ 5 ಲೀಟರ್ ಹಾಲನ್ನು ಕದ್ದು ಬಚ್ಚಿಟ್ಟಿದ್ದರು. ಆದರೆ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಹಾಲಿನ ವಿಷಯಕ್ಕೆ ಜಗಳವಾದ ಬಳಿಕ ಆಶಿತಾ, ಜಗನ್, ಶ್ರುತಿ ಸೇರಿದಂತೆ ಕೆಲವರಿಗೆ ತಿಳಿದಿದೆ.

 

 

ಹಾಲನ್ನು ಬಚ್ಚಿಟ್ಟು ಬೇಕು ಎಂದಾಗ ಕೊಡದಿದ್ದಕ್ಕೆ ಕಿಚ್ಚ ಸುದೀಪ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೇರೆಯವರಿಗೆ ಕುಡಿಯಲು ಹಾಲು ಇಲ್ಲದ ವೇಳೆ ಹೀಗೆ ಮುಚ್ಚಿಡುವುದು ಸರೀನಾ ಎಂದು ಕೇಳಿದ್ದಾರೆ, ಒಂದು ಕಪ್ ಹಾಲಿಗೆ ಅಷ್ಟು ಗಲಾಟೆ ನಡೆಯುತ್ತಿರುವಾಗ, ನಾಲ್ಕು ಪ್ಯಾಕೆಟ್ ಹಾಲಿದೆ ಅನ್ನೋದು ನಿಮಗೆ ಗೊತ್ತು. ಆಗ ಅದನ್ನ ತೆಗೆದು ಕೊಡಬಹುದಿತ್ತಲ್ಲವೇ ಎಂದು ಕೇಳಿದ ಪ್ರಶ್ನೆ ಆಶಿತಾ,ಜಗನ್,ದಯಾಳ್ ಮತ್ತು ಅನುಪಮಾ ಮಾತ್ರ ತಾವು ಮಾಡಿದ್ದು ಸರಿ ಎಂದು ಹಾಲು ಮುಚ್ಚಿಟ್ಟಿದ್ದನ್ನು ಸಮರ್ಥಿಸಿಕೊಂಡರು.

 

 

ಹೀಗೆ ತಮ್ಮದೇ ಸರಿ ಎಂದು ಸಮರ್ಥನೆ ಮಾಡಿಕೊಳ್ಳಲು ಬಂದವರನ್ನು ಕಿಚ್ಚ “ಒಂದು ಲೋಟ ಹಾಲಿಗೆ ಅಷ್ಟೊಂದು ದೊಡ್ಡ ಗಲಾಟೆ ನಡೆಯುವಾಗ, ಹಾಲನ್ನು ಮುಚ್ಚಿಟ್ಟವರು ನಿಮ್ಮನ್ನು ನೋಡುತ್ತಿರುವ ಹೊರಗಿನ ಪ್ರಪಂಚಕ್ಕೆ ಹೇಗೆ ಕಾಣಿಸುತ್ತಿದ್ದೀರಾ ಅಂತ ಒಂಚೂರು ಅರ್ಥ ಮಾಡಿಕೊಳ್ಳಿ..ಮತ್ತು ಈಗಲೂ ಸರಿ, ತಪ್ಪು ಸಮರ್ಥನೆ ಮಾಡ್ಕೋತಿರಲ್ಲ ಇಲ್ಲಿ ನೀವು ಹೇಗೆ ಕಾಣಿಸುತ್ತಿದ್ದೀರಾ ಅಂತ ತಿಳಿಕೊಳ್ಳಿ” ಎಂದು ತರಾಟೆಗೆ ತೆಗೆದುಕೊಂಡರು.

 

 

ಹಾಲು ಸೇರಿದಂತೆ ತಿನ್ನೋ ಪದಾರ್ಥವನ್ನು ಬಚ್ಚಿಡುವ ಸೋ ಕಾಲ್ಡ್ ಸೆಲೆಬ್ರೆಟಿಗಳ ಈ ವರ್ತನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top