fbpx
ಆರೋಗ್ಯ

ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದರೆ ಸಣ್ಣ ಚೂರು ಕೊಬ್ಬರಿ ತಿನ್ನೋ ಅಭ್ಯಾಸ ಮಾಡ್ಕೊಳ್ಳಿ ಅದೇ ವಾಸಿ ಮಾಡುತ್ತೆ

ಕೊಬ್ಬರಿ ಎಣ್ಣೆ ತುಂಬಾ ಆರೋಗ್ಯಕಾರಿ ಗುಣಗಳನ್ನು ಹೊಂದಿದೆ , ಇತ್ತೀಚಿಗೆ ನಡೆದ ಸಂಶೋಧನೆಗಳ ಪ್ರಕಾರ ತೆಂಗಿನ ಎಣ್ಣೆ ಹೈಪೋ ಥೈರೋಯಿಡಿಸಂ ಸಮಸ್ಯೆಯನ್ನು ಪರಿಹರಿಸುತ್ತದೆ.

 

 

ಥೈರಾಯಿಡ್ ಒಂದು ಆರೋಗ್ಯ ಸಮಸ್ಯೆ,ಥೈರಾಯಿಡ್ ಈ ಹೆಸರು ಕೇಳಿದರೆ ಸಾಕು ಇತ್ತೀಚೆಗೆ ಜನ ಬೆಚ್ಚಿ ಬೀಳುತ್ತಿದ್ದಾರೆ. ಶೀತ-ನೆಗಡಿಯಂತೆ ಸಾಮಾನ್ಯವಾಗಿ ಕಾಡುವ ಕಾಯಿಲೆಗಳಲ್ಲಿ ಇದೀಗ ಥೈರಾಯ್ಡ್ ಕೂಡ ಒಂದು. ಶೇಕಡಾ 75ರಷ್ಟು ಜನರನ್ನು ಕಾಡುವ ಈ ಸಮಸ್ಯೆಗೆ ಪ್ರಮುಖ ಕಾರಣ, ಆಹಾರ, ಹಾಗೂ ಜೀವನ ಶೈಲಿ. ಒತ್ತಡ, ಆತಂಕ,ಚಿಂತೆ ಥೈರಾಯಿಡ್ ಸಮಸ್ಯೆಗೆ ಮೂಲ ಕಾರಣ ಹಾಗಾಂತ ಇದು ಭಯಾನಕ ಕಾಯಿಲೆಯೇನು ಅಲ್ಲ.

ಕುತ್ತಿಗೆಯ ಮುಂಬಾಗದಲ್ಲಿರುವ ಒಂದು ಗ್ರಂಥಿಯನ್ನು ಥೈರಾಯಿಡ್ ಎಂದು ಕರೆಯಲಾಗುತ್ತದೆ . ಥೈರಾಯಿಡ್ ಹಾರ್ಮೋನ್ ಗಳನ್ನು ಉತ್ಪಾದಿಸುವುದು ಇವುಗಳ ಕೆಲಸ.

ಥೈರಾಯಿಡ್ ಒಂದು ಚಿಕ್ಕ ಗ್ರಂಥಿ , ಕೆಳ ಕುತ್ತಿಗೆಯ ಭಾಗದಲ್ಲಿ ಇರುತ್ತದೆ ದೇಹದ ಅಗತ್ಯವಾದ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ,  ಹಾರ್ಮೋನ್ ಥೈರಾಕ್ಸಿನ್, ಥೈರಾಯಿಡ್ ಗ್ರಂಥಿಯಿಂದ ಉತ್ಪತ್ತಿಯಾಗುತ್ತಿರುತ್ತದೆ.

 

 

ನಮ್ಮ ದೇಹದಲ್ಲಿನ ಪ್ರಮುಖ ಅಂಗಗಳಲ್ಲಿ ಒಂದಾದ ಥೈರಾಯ್ಡ್ ಶ್ರವಿಸುವ ಹಾರ್ಮೋನುಗಳು ಸರಿಯಾಗಿದ್ದರೆ ದೇಹದ ಎಲ್ಲಾ ಚಟುವಟಿಕೆಗಳು ನಾರ್ಮಲ್ ಆಗಿ ಇರುತ್ತದೆ ಆದರೆ ಇದರ ಶ್ರವಿಸುವಿಕೆ ಹೆಚ್ಚಾದರೆ, ಹೈಪರ್ ಥೈರಾಯ್ಡ್, ಹಾಗೂ ಕಡಿಮೆಯಾದರೆ ಹೈಪೋ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ, ಐಯೋಡಿನ್ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತದೆ.

ಥೈರಾಯಿಡ್ ಸಮಸ್ಯೆ ಗುಣ ಲಕ್ಷಣಗಳು:

೧.ಒಣ ಚರ್ಮ, ೨.ಅತಿಯಾಗಿ ಬೆವರುವಿಕೆ, ೩.ತುಂಬಾ ಸುಸ್ತಾ ಆಗ್ತಾ ಇರುತ್ತೆ, ೪.ಕೂದಲು ಉದರುವಿಕೆ, ೬.ಯಾವಾಗಲು ಶೀತ,೭.ಜಾಸ್ತಿ ಮರೆವು
೮.ದೇಹ ತೂಕ ದಿನ ದಿನ ತುಂಬಾ ಜಾಸ್ತಿ ಆಗ್ತಾ ಹೋಗತ್ತೆ

 

 

ಕೊಬ್ಬರಿ ಎಣ್ಣೆ ತುಂಬಾ ಆರೋಗ್ಯಕಾರಿ ಗುಣಗಳನ್ನು ಹೊಂದಿದೆ , ಇತ್ತೀಚಿಗೆ ನಡೆದ ಸಂಶೋಧನೆಗಳ ಪ್ರಕಾರ ತೆಂಗಿನ ಎಣ್ಣೆ ಹೈಪೋ ಥೈರೋಯಿಡಿಸಂ ಸಮಸ್ಯೆಯನ್ನು ಪರಿಹರಿಸುತ್ತದೆ.

 

ಕೊಬ್ಬರಿ ಎಣ್ಣೆ ಯಲ್ಲಿ ಲೂರಿಕ್ ಆಸಿಡ್ ಇದ್ದು ಇದು ಉರಿ ಊತದ ಗುಣಲಕ್ಷಣಗಳನ್ನು ತಡೆಯುತ್ತದೆ

ಕೊಬ್ಬರಿ ಎಣ್ಣೆ ಯಲ್ಲಿ ಕ್ಯಾಪ್ರಿಕ್ ಆಸಿಡ್ ಇದ್ದು ಇದು ಬ್ಯಾಕ್ಟೀರಿಯಾ ಹಾಗು ವೈರಸ್ ಅಪಾಯವನ್ನು ತಡೆಯುತ್ತದೆ ಹಾಗೆ ಬ್ಯಾಕ್ಟೀರಿಯಾ ಹಾಗು ವೈರಸ್ ನ ಯಾವುದೇ ಸೋಂಕು ಬರದಂತೆ ತಡೆಯುತ್ತದೆ.

ದಿನವೂ ಒಂದು ಚಮಚ ಶುದ್ಧ ಕೊಬ್ಬರಿ ಎಣ್ಣೆಯನ್ನು ನಿಮ್ಮ ದಿನ ನಿತ್ಯದ ಆಹಾರದಲ್ಲಿ ಸೇರಿಸಿ , ಅಷ್ಟೇ ಅಲ್ಲದೆ ಟೀ ಅಥವಾ ಕಾಫಿ ಗೆ ಒಂದು ಚಮಚ  ಶುದ್ಧ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಕುಡಿಯಿರಿ .

ಜೀರ್ಣ ಕ್ರಿಯೆ ವೃದ್ಧಿಸುತ್ತದೆ

 

 

ಥೈರಾಯಿಡ್ ಕೆಲಸ ಮಾಡಲು ವಿಫಲವಾದಾಗ ಕೊಬ್ಬರಿ ಎಣ್ಣೆ ಜೀರ್ಣ ಕ್ರಿಯೆ ವೃದ್ಧಿಸಲು ಸಹಾಯ ಮಾಡುತ್ತದೆ ,ಹೊಟ್ಟೆ ಹಸಿವಾಗಲು ಸಹಾಯ ಮಾಡುತ್ತದೆ , ಕೊಬ್ಬರಿ ಎಣ್ಣೆಯಲ್ಲಿರುವ ಕೊಬ್ಬಿನಂಶಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕ

 

 

ಕೊಬ್ಬರಿ ಎಣ್ಣೆಯಲ್ಲಿರುವ ಒಳ್ಳೆಯ ಕೊಬ್ಬಿನಂಶಗಳು ಆದಷ್ಟು ಬೇಗ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ .

ಮಲಬದ್ಧತೆ ತಡೆಯುತ್ತದೆ

 

ಥೈರಾಯಿಡ್ ನಿಂದ ಹಾರ್ಮೋನ್ ಕಡಿಮೆಯಾದರೆ ಜೀರ್ಣ ಕ್ರಿಯೆಯಲ್ಲಿ ಏರುಪೇರು ಉಂಟಾಗಿ ಮಲಬದ್ಧತೆ ಸಮಸ್ಯೆ ಕಾಡುತ್ತದೆ .

ಉರಿ ಊತದ ಸಮಸ್ಯೆ

 

 

ಉರಿ ಊತದ ಸಮಸ್ಯೆ , ಕೈ ಕಾಲು ನೋವು ಕೀಳು ನೋವು ಮುಂತಾದ ಸಮಸ್ಯೆಗಳಿಗೆ ಕೊಬ್ಬರಿ ಉತ್ತಮ ಆಹಾರ ಇದು ನೈಸರ್ಗಿಕ ಉರಿ ಊತ ಶಮಕವಾಗಿದ್ದು ನೋವು ನಿವಾರಿಸುತ್ತದೆ .

ಕೂದಲು ಉದುರುವಿಕೆ ತಡೆಯುತ್ತದೆ

 

 

ಕೂದಲ ಬುಡಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ ಅಷ್ಟೇ ಅಲ್ಲದೆ ಕೂದಲು ಉದುರುವುದನ್ನು ತಡೆಯುತ್ತದೆ .

ಶುಷ್ಕ ಚರ್ಮ ತಡೆಯುತ್ತದೆ

 

 

ಥೈರಾಯಿಡ್ ನಿಂದ ಹಾರ್ಮೋನ್ ಕಡಿಮೆಯಾದರೆ ಒಣ ಚರ್ಮದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಈ ಸಮಸ್ಯೆಯಿಂದ ದೂರವಿರಬೇಕೆಂದರೆ ಆಗಾಗ ಸ್ವಲ್ಪ ಕೊಬ್ಬರಿ ಸೇವಿಸಿ ಅಥವಾ ದಿನಾ ಬೆಳಗ್ಗೆ ಒಂದರ್ಧ ಚಮಚ ಕೊಬ್ಬರಿ ಎಣ್ಣೆ ನಿಮ್ಮ ಆಹಾರದಲ್ಲಿ ಸೇರಿಸಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top