fbpx
ಸಮಾಚಾರ

ತಮ್ಮ ಮಗ ಸತ್ತು 12 ದಿನವಾದರೂ ಅಂತ್ಯಕ್ರಿಯೆ ಮಾಡದೇ ಆತ ಮತ್ತೆ ಬದುಕಿ ಬರಲಿ ಎಂದು 12 ದಿನಗಳ ಕಾಲ ಪ್ರಾರ್ಥಿಸುತ್ತ ಕುಳಿತ ಕುಟುಂಬ..!

ತಮ್ಮ ಮಗ ಸತ್ತು 12 ದಿನವಾದರೂ ಅಂತ್ಯಕ್ರಿಯೆ ಮಾಡದೇ ಆತ ಮತ್ತೆ ಬದುಕಿ ಬರಲಿ ಎಂದು 12 ದಿನಗಳ ಕಾಲ ಪ್ರಾರ್ಥಿಸುತ್ತ ಕುಳಿತ ಕುಟುಂಬ..!

 

 

ಸತ್ತ ತಮ್ಮ 17 ವರ್ಷ ವಯಸ್ಸಿನ ಮಗ ಮತ್ತೆ ಹುಟ್ಟಲಿ ಎಂದು ಪ್ರಾರ್ಥಿಸುತ್ತಾ ಶವವನ್ನು ಅಂತ್ಯಕ್ರಿಯೆ ಮಾಡದೇ ಹನ್ನೆರಡು ದಿನ ಕಾದು ಕುಳಿತ ಕುಟುಂಬ ಕೊನೆಗೂ ಪೊಲೀಸರ ಸೂಚಿನೆಯಂತೆ ತಮ್ಮ ಮಗನ ಶವ ಸಂಸ್ಕಾರ ನಡೆಸಿದೆ..ಮಂತ್ರಗಳನ್ನು ಹೇಳುತ್ತಾ ‘ನೀನು ವಾಪಸ್‌ ಬಾ’ ಎಂದು ಕೂಗುತ್ತಾ ಚರ್ಚ್‌ನಲ್ಲಿ ಹನ್ನೆರಡು ದಿನ ಕಾದ ಕುಟುಂಬ ಕ್ರಿಶ್ಚಿಯನ್‌ ಸ್ಮಶಾನದಲ್ಲಿ ಕೊನೆಗೂ ಆ ಹುಡುಗನ ಅಂತ್ಯಕ್ರಿಯೆ ಮಾಡಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ.

 

 

 

ಮೆಶಕ್‌ ನೆವಿಸ್‌ ಎಂಬ 17 ವರ್ಷ ವಯಸ್ಸಿನ ಯುವಕ ಕ್ಯಾನ್ಸರ್‌ ಕಾಯಿಲೆ ಬಂದು ಸಾವನ್ನಪ್ಪಿದ್ದನು. ಆತನ ತಂದೆ ಒಕ್ಟವಿಯೊ ನೆವಿಸ್‌ “ನನ್ನ ಬಳಿ ಅವನನ್ನು ಬದುಕಿಸಲು ಅದ್ಭುತ ಶಮನಕಾರಿ ಶಕ್ತಿ ಇದೆ” ಎಂದು ಹೇಳಿಕೊಂಡು ಅಂತ್ಯ ಸಂಸ್ಕಾರ ನಡೆಸುವ ಬದಲು ಮೃತದೇಹವನ್ನು ಚರ್ಚ್ ಬಳಿ ಇಟ್ಟುಕೊಂಡು ಶವದ ಮುಂದೆ “ನೀನು ವಾಪಾಸ್ ಬಾ” ಪ್ರಾರ್ಥನೆ ಶುರು ಹಚ್ಚಿಕೊಂಡಿದ್ದರು. ಮುಂದೆ ಓದಿ

 

 

ಒಕ್ಟವಿಯೊ ನೆವಿಸ್‌ ಮತ್ತು ಅವನ ಅನುಯಾಯಿಗಳು ಅವನ ಮಗ ಮೆಶಕ್‌ ಬದುಕಿ ಬರುತ್ತಾನೆ ಎಂಬ ನಂಬಿಕೆಯೊಂದಿಗೆ 12 ದಿನಗಳವರೆಗೆ ಪ್ರಾರ್ಥನೆ ಮಾಡಿದ್ದಾರೆ. ನಾಗ್‌ಪದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸದಿದ್ದಲ್ಲಿ ಮೂಢನಂಬಿಕೆ ವಿರೋಧಿ ಕಾನೂನಿನಡಿ ಕ್ರಮ ಕೈಗೊಳ್ಳುವುದಾಗಿ ಕುಟುಂಬದವರಿಗೆ ಹೇಳಿದಾಗ ಕೊನೆಗೆ, ನಾವು ಮೆಶಕ್‌ ನೆವಿಸ್‌ ನನ್ನು ನಿನ್ನ ಕೈಗೊಪ್ಪಿಸುತ್ತೇವೆ. ನೀನೇ ಶ್ರೇಷ್ಠ. ಯೇಸು ಕ್ರಿಸ್ತನೇ ನಿನಗೆ ಜಯವಾಗಲಿ ಎಂದು ಬಿಷಪ್‌ ಘೋಷಣೆಗಳನ್ನ ಕೂಗಿಸಿ ಕ್ರಿಶ್ಚಿಯನ್‌ ಸ್ಮಶಾನದಲ್ಲಿ ಕೊನೆಗೂ ಆ ಹುಡುಗನ ಅಂತ್ಯಕ್ರಿಯೆ ಮಾಡಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top