fbpx
ಕಿರುತೆರೆ

ತನ್ನ ಹಳೆ ಲವರ್ ಅನುಪಮಾರನ್ನ ತಬ್ಬಿಕೊಂಡು, ಮುತ್ತು ಕೊಟ್ಟ ಜಗನ್..!

ತನ್ನ ಹಳೆ ಲವರ್ ಅನುಪಮಾರನ್ನ ತಬ್ಬಿಕೊಂಡು, ಮುತ್ತು ಕೊಟ್ಟ ಜಗನ್..!

 

 

ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ 5ನೇ ಸೀಸನ್ ಕಾರ್ಯಕ್ರಮದಲ್ಲಿ ದಿನಗಳು ಉರುಳುತ್ತಿದ್ದಂತೆ ಅನೇಕ ಕುತೂಹಲ ವಿಷಯಗಳು ಆಚೆ ಬರುತ್ತಿವೆ. ಒಂದೊಂದೇ ಲವ್ ಸ್ಟೋರಿಗಳು ತೆರೆದುಕೊಳ್ಳುತ್ತಿವೆ. ಈಗ ಬಿಗ್ ಬಾಸ್ ಮನೆಯ ಮಾಜಿ ಲವರ್ಸ್ ಗಳು ಸಕತ್ ಸುದ್ದಿಯಲ್ಲಿದ್ದಾರೆ.. ಅಕ್ಕ ಧಾರಾವಾಹಿಯ ಅನುಪಮಾ ಗೌಡ ಮತ್ತು ಗಾಂಧಾರಿ ಧಾರಾವಾಹಿಯ ಜಗನ್ನಾಥ ಈ ಮಾಜಿ ಲವರ್ಸ್ ಗಳು. ಮುಂದೆ ಓದಿ

 

 

ಬಿಗ್‌ಬಾಸ್‌ ಪ್ರಾರಂಭವಾದಾಗಿನಿಂದಲೂ ಮನೆಯಲ್ಲಿ ಅನುಪಮಾ ಗೌಡ ಮತ್ತು ಜಗನ್‌ ಮಧ್ಯೆ ಏನು ನಡೀತಿದೆ ಎಂಬ ಗೊಂದಲ ಪ್ರೇಕ್ಷಕರನ್ನು ಕಾಡುತ್ತಿತ್ತು. ಕಳೆದ ವಾರ ತೇಜಸ್ವಿನಿ ಬಳಿ ಮಾತನಾಡುತ್ತಿದ್ದ ಅನುಪಮಾ ಜಗನ್ ವಿಚಾರ ಪ್ರಸ್ತಾಪಿಸಿ ಜಗನ್ ಹೆಸರು ಹೇಳದೇ ಪರೋಕ್ಷವಾಗಿ ತಮ್ಮಿಬ್ಬರ ನಡುವಿನ ಸ್ನೇಹವನ್ನು ಮತ್ತು ತಮ್ಮ ಪ್ರೀತಿ ಮುರಿದು ಬಿದ್ದಿರುವುದನ್ನು ನೆನೆದು ಗಳಗಳನೆ ಕಣ್ಣೇರು ಸುರಿಸಿದ್ದರು. ಜಗನ್‌-ಅನುಪಮಾ ಮಧ್ಯೆ ಬಿಗ್‌ಬಾಸ್‌ ಮುಂಚಿತವಾಗಿ ಏನೆಲ್ಲ ನಡೆದಿದೆ? ಎಂಬ ಪ್ರಶ್ನೆಯನ್ನು ವೀಕ್ಷಕರಲ್ಲಿ ಹುಟ್ಟುಹಾಕಿದ್ದರು.

 

 

ಈಕಡೆ ಜಗನ್ನಾಥ್ ತನ್ನ ಮಾಜಿ ಲವರ್ ಅನುಪಮಾ ಗೌಡ ಎದುರಿಗೆ ಓಡಾಡುತ್ತಿದ್ದರೂ ತನಗೆ ಸಂಬಂಧವೇ ಇಲ್ಲ ಎಂಬಂತೆ ಕೃಷಿ, ಆಶಿತಾ ಜೊತೆ ಕಾಲಕಳೆಯುತ್ತಾರೆ..ಜಗನ್ನಾಥ್, ಆಶಿತಾ, ಹಾಗೂ ಕೃಷಿ ಸೇರಿ ಟ್ರೂತ್ ಅಂಡ್ ಡೇರ್ ಆಟ ಆಡುತ್ತಿದ್ದರು. ಜಗನ್ನಾಥ್ ಸರದಿ ಬಂದಾಗ ಅನುಪಮಾ ಬಳಿ ಹೋಗಿ ತಬ್ಬಿಕೊಂಡು, ಹಣೆ ಮೇಲೆ ಮುತ್ತು ಕೊಡಬೇಕು ಎಂಬ ಸವಾಲನ್ನು ಜಗನ್ನಾಥ್ ಗೆ ಕೃಷಿ ತಾಪಂಡ ನೀಡಿದರು. ಅಂತೆಯೇ ಅನುಪಮಾ ಗೌಡ ಬಳಿ ತೆರಳಿದ ಜಗನ್ ಆಕೆಯನ್ನ ಅಪ್ಪಿಕೊಂಡು ಹಣೆ ಮೇಲೆ ಮುತ್ತಿತ್ತು ಸವಾಲನ್ನು ಗೆದ್ದರು.

 

 

ಡೇರ್ ಅಂಡ್ ಟ್ರೂತ್ ಆಟದ ಕಾರಣ ಜಗನ್ ತಬ್ಬಿಕೊಂಡು, ಮುತ್ತಿತ್ತಿದು ಎಂದು ತಿಳಿದುಕೊಂಡ ಅನುಪಮಾ ಕಿರಿಕಿರಿಗೊಳ್ಳದೇ ಆಟವನ್ನ ಆಟದ ರೀತಿಯಲ್ಲಿ ಪರಿಗಣಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top