fbpx
ಸಮಾಚಾರ

ಡೆಲ್ಲಿ ಗ್ಯಾಂಗ್ ರೇಪ್ ಬಲಿಪಶು ‘ನಿರ್ಭಯಾ’ ತಮ್ಮನಿಗೆ ರಾಹುಲ್ ಗಾಂಧಿ ಮಾಡಿದ ಸಹಾಯ ಕೇಳಿದರೆ ಭೇಷ್ ಅಂತೀರಾ !

ಡೆಲ್ಲಿ ಗ್ಯಾಂಗ್ ರೇಪ್ ಬಲಿಪಶು ‘ನಿರ್ಭಯಾ’ ತಮ್ಮನಿಗೆ ರಾಹುಲ್ ಗಾಂಧಿ ಮಾಡಿದ ಕೆಲಸ ಕೇಳಿದರೆ ಭೇಷ್ ಅಂತೀರಾ !

 

ದೆಹಲಿಯಲ್ಲಿ ಧಾರುಣವಾಗಿ ರೇಪ್ ಆದ ನಿರ್ಭಯಾ ಯಾರಿಗೆ ನೆನಪಿಲ್ಲ ಹೇಳಿ ? ಹೌದು ಕಾಮುಕರ ಹಟ್ಟಹಾಸಕ್ಕೆ ಬಲಿಯಾಗಿ ತನ್ನ ಅಮೂಲ್ಯ ಜೀವವನ್ನು ಕಳೆದುಕೊಂಡ ಅದೇ ಹುಡುಗಿ , ಆ ಹುಡುಗಿಯ ಕುಟುಂಬ ಈಗ ಹೇಗಿದೆ ಎಷ್ಟೋ ಜನಕ್ಕೆ ಗೊತ್ತಿಲ್ಲ .

 

ಈಗ ಆ ಹುಡುಗಿಯ ಕುಟುಂಬ ಬಹಳಷ್ಟು ಸುಧಾರಿಸಿದೆ

 

ನಿರ್ಭಯಾ ಒಬ್ಬ ಪ್ರತಿಭಾವಂತ ಹುಡುಗಿ ಆಕೆಯ ಡಾಕ್ಟರ್ ಆಗಬೇಕೆಂಬ ಕನಸು ನನಸಾಗದೇ ಹೋಯಿತು ಆಕೆಯ ಪ್ರಕಾಶಮಾನವಾದ ಭವಿಷ್ಯವು ಅವರ ಕುಟುಂಬಕ್ಕೆ ಹೆಚ್ಚಿನ ಸೌಕರ್ಯವನ್ನು ಮತ್ತು ಬೆಂಬಲವನ್ನು ತರುವ ನಿರೀಕ್ಷೆ ಹುಟ್ಟಿಸಿತ್ತು ಆದರೆ ಅದೆಲ್ಲವೂ ಹುಸಿಯಾಗಿತ್ತು , ಆಕೆಯ ಸಾವಿನ ನಂತರ ಅವರ ಕುಟುಂಬ ತೀರಾ ಅಸ್ತವ್ಯಸ್ತ ಸ್ಥಿತಿ ತಲುಪಿತ್ತು , 2012 ರ ಡಿಸೆಂಬರ್ನಲ್ಲಿ ತನ್ನ ಸಹೋದರಿ ಸಾವಿಗೀಡಾಗಿದ್ದಾಗ ರಾಜಕೀಯ ಹಾಗು ಮಾಧ್ಯಮಗಳ ನಡುವೆ ಸಿಕ್ಕಿ ನಲುಗಿತ್ತು ಇಡೀ ಕುಟುಂಬ ಆಗಿನ್ನೂ 12 ನೇ ತರಗತಿ ಓದುತ್ತಿದ್ದ ಪುಟ್ಟ ಹುಡುಗ ನಿರ್ಭಯ ತಮ್ಮ ತನ್ನ ಪರೀಕ್ಷೆಗೂ ಸರಿಯಾಗಿ ಗಮನ ಹರಿಸಲು ಸಾಧ್ಯವಾಗಲಿಲ್ಲ.
ಆ ಸಂಧರ್ಭದಲ್ಲಿ ಅವ್ರ ಕುಟುಂಬಕ್ಕೆ ಮಾನಸಿಕ ಧೈರ್ಯ ತುಂಬಿದವರು ರಾಹುಲ್ ಗಾಂಧಿ !.

 

 

ರಾಹುಲ್ ಗಾಂಧಿ ನಿರ್ಭಯ ತಮ್ಮನ ಓದಿನ ಬಗೆಗಿನ ಮುಂದಿನ ಆಲೋಚನೆಯನ್ನು ತಿಳಿದು ಅವರಿಗೆ ಸಲಹೆ ನೀಡಿ ಕುಟುಂಬಕ್ಕೆ ಬೆಂಬಲ ನೀಡಲು ಜೀವನದಲ್ಲಿ ಒಳ್ಳೆಯದನ್ನು ಸಾಧಿಸಲು ಪ್ರೇರೇಪಿಸಿದರು, ರಕ್ಷಣಾ ಪಡೆಯಲ್ಲಿ ಸೇರಲು ಬಯಸಿದರೆಂದು ತಿಳಿದು ಓದು ಮುಗಿದ ನಂತ್ರ ಪೈಲಟ್ ತರಬೇತಿಯನ್ನು ಮುಂದುವರಿಸಲು ರಾಹುಲ್ ನಿರ್ಭಯ ತಮ್ಮನನ್ನ ಕೇಳಿಕೊಂಡರು.

12 ನೇ ತರಗತಿ ಓದು ಮುಗಿಸಿದ ನಂತರ ನಿರ್ಭಯಾ ಸಹೋದರ ರಾಯ್ ಬರೇಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಯುರನ್ ಅಕಾಡೆಮಿಗೆ ಸೇರಿದರು .

 

 

ಆ ನಂತ್ರ 18 ತಿಂಗಳ ಪೈಲಟ್ ತರಬೇತಿ ಮುಗಿಸಿ ಪ್ರಸ್ತುತ ಗುರ್ ಗಾವ್ ನ ವಾಣಿಜ್ಯ ವಿಮಾನಯಾನ ಸಂಸ್ಥೆಯೊಂದರಲ್ಲಿ ಅಂತಿಮ ತರಬೇತಿ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ವಿಮಾನವನ್ನು ಹಾರಿಸಿಲಿದ್ದಾರೆ , ಈ ಎಲ್ಲ ಬೆಳವಣಿಗೆಗಳ ಹಿಂದೆ ನಿಂತು ಮಾನಸಿಕ ಧೈರ್ಯ ಹಾಗು ಆರ್ಥಿಕ ಶಕ್ತಿಯನ್ನು ತುಂಬಿದವರು ರಾಹುಲ್ ಗಾಂಧಿಯವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top