fbpx
ಮನೋರಂಜನೆ

ಸುದೀಪ್ ಅಂಬಿ ಚಿತ್ರಕ್ಕೆ 26ರ ಪೋರ ನಿರ್ದೇಶಕ! ಈತ ಯಾರು ಗೊತ್ತಾ?

ಸುದೀಪ್ ಅಂಬಿ ಚಿತ್ರಕ್ಕೆ 26ರ ಪೋರ ನಿರ್ದೇಶಕ! ಈತ ಯಾರು ಗೊತ್ತಾ?

 

 

ರೆಬೆಲ್‌ ಸ್ಟಾರ್‌ ಅಂಬರೀಶ್‌ ಅಭಿನಯದ ಚಿತ್ರವೊಂದನ್ನು ಕಿಚ್ಚ ಸುದೀಪ್‌ ನಿರ್ಮಾಣ ಮಾಡುತ್ತಿದ್ದಾರೆ ಮತ್ತು ಆ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ ಆ ಚಿತ್ರಕ್ಕೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಎಂಬ ಟೈಟಲ್‌ ಇಟ್ಟಿರುವುದು ಎನ್ನುವ ವಿಷಯ ಈಗ ಎಲ್ಲರಿಗೂ ಗೊತ್ತು? ಈಗ ಈ ಚಿತ್ರಕ್ಕೆ ಹೊಸದೊಂದು ಸೇರ್ಪಡೆಯಾಗಿದೆ. ಅಂದರೆ ಚಿತ್ರದ ನಿರ್ದೇಶಕ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

 

 

ಯುವಹೊಸ ಪ್ರತಿಭೆಗಳ ಬೆನ್ನುತಟ್ಟಿ ಪ್ರೋತ್ಸಾಹ ನೀಡುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರಕ್ಕಾಗಿ ಯುವ ನಿರ್ದೇಶಕನನ್ನ ಆಯ್ಕೆ ಮಾಡಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಗುರುದತ್ ಎಂಬ ಹೊಸ ಪ್ರತಿಭೆ ಸ್ಯಾಂಡಲ್’ವುಡ್ ಪ್ರವೇಶಿಸುತ್ತಿದೆ. ತಮ್ಮ ಮೊದಲ ಚಿತ್ರದಲ್ಲೇ ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳುವ ಸೌಭಾಗ್ಯ ಗುರುದತ್ ಗೆ ಒಲಿದಿದೆ.

 

 

ಗುರುದತ್ ಗಣಿಗ ಸುಮಾರು 6 ವರ್ಷದಿಂದ ಕಿಚ್ಚ ಸುದೀಪ್ ಅವರ ಹತ್ತಿರ ಸಹಾಯಕ ನಿರ್ದೇಶಕನಾಗಿ ಕೆಲಸಮಾಡುತ್ತಿದ್ದು..ಸುದೀಪ್ ಅವರೇ ನಟಿಸಿ ನಿರ್ದೇಶಿಸಿದ್ದ ಮಾಣಿಕ್ಯ ಮತ್ತು ರನ್ನ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಆಗ ಗುರು ದತ್ ಅವರ ಕೆಲಸ ಸುದೀಪ್ ಅವರ ಗಮನ ಸೆಳೆದಿದ್ದು ಆತನ ಮೇಲೆ ನಂಬಿಕೆ ಇಟ್ಟು ಈ ಸಿನಿಮಾ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಅಂಬರೀಷ್ ಗೆ ಸುಮಲತಾ ನಾಯಕಿಯಾಗಿ ನಟಿಸುತ್ತಿದ್ದು ಅಂಬರೀಷ್ ಅವರ ಫ್ಲಾಷ್ ಬ್ಯಾಕ್ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ.ಡಿಸೆಂಬರ್ ನಲ್ಲಿ ಶೂಟಿಂಗ್ ಶುರು ಮಾಡುವ ನಿರೀಕ್ಷೆಯಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top