fbpx
ಕನ್ನಡ

ಕನ್ನಡ ಮಾತನಾಡಿದ್ದಕ್ಕೆ ಯುವತಿಯ ಕತ್ತು ಸೀಳಿ ಪರಾರಿಯಾದ ಪುಂಡರು: ಬೆಂಗಳೂರಿನಲ್ಲಿ ಮಿತಿಮೀರಿದ ಪರಭಾಷಿಕರ ಅಟ್ಟಹಾಸ.

ಕನ್ನಡ ಮಾತನಾಡಿದ್ದಕ್ಕೆ ಯುವತಿಯ ಕತ್ತು ಸೀಳಿ ಪರಾರಿಯಾದ ಪುಂಡರು: ಬೆಂಗಳೂರಿನಲ್ಲಿ ಮಿತಿಮೀರಿದ ಪರಭಾಷಿಕರ ಅಟ್ಟಹಾಸ.

 

 

ಕರ್ನಾಟಕದಲ್ಲಿ ಕನ್ನಡವನ್ನು ಮಾತನಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ್ರೇನೇ ತಪ್ಪು ಎನ್ನುವ ದುಸ್ಥಿತಿ ನಿರ್ಮಾಣವಾಗಿದೆ. ಹೌದು ಕಳೆದ ರಾತ್ರಿ ಕನ್ನಡದಲ್ಲಿ ಮಾತನಾಡಿದ ಯುವತಿಯೊಬ್ಬಳನ್ನ ಉತ್ತರ ಭಾರತ ಮೂಲದ ಹಿಂದಿ ಪುರುಷರು ಕತ್ತು ಸೀಳಿ ಪರಾರಿಯಾಗಿದ್ದಾರೆ. ಮುಂದೆ ಓದಿ

 

 

ಮಾರತಳ್ಳಿ ಬಳಿಯಲ್ಲಿ ಶಿಲ್ಪ ಎಂಬ ಕನ್ನಡ ಯುವತಿಯನ್ನ ಉತ್ತರ ಭಾರತದ ಯುವಕರು ಹಿಂದಿಯಲ್ಲಿ ವಿಳಾಸವನ್ನು ಕೇಳಿದ್ದಾರೆ ಆಗ ಶಿಲ್ಪ ಕನ್ನಡಲ್ಲಿ ಮಾತನಾಡಿದ್ದಾರೆ ಆಗ ಪರಸ್ಪರ ಭಾಷೆಗಳು ಅರ್ಥವಾಗಿಲ್ಲ ಆದರೂ ಆ ಯುವಕರು ಪದೇ ಪದೇ ಹಿಂದಿಯಲ್ಲಿ ಕೇಳಿದ್ದಾರೆ. ಶಿಲ್ಪಾಳಿಗೆ ಕನ್ನಡ ಬಿಟ್ಟರೆ ಬೇರೆ ಯಾವ ಭಾಷೆಗಳು ಬರುತ್ತಿರಲಿಲ್ಲ ಹಾಗಾಗಿ ಕನ್ನಡದಲ್ಲಿ ಉತ್ತರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಆ ಪುಂಡರು ತಕ್ಷಣವೇ ಆ ಹುಡುಗಿಯ ಕತ್ತನ್ನು ಚಾಕುವಿನಿಂದ ಸೀಳಿ ಪರಾರಿಯಾಗಿದ್ದಾರೆ.

 

 

ಗಂಭೀರವಾಗಿ ಗಾಯಗೊಂಡಿದ್ದ ಶಿಲ್ಪಾರನ್ನ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಸಂಭಂದ ಮಾರತಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಉತ್ತರ ಭಾರತ ಮೂಲದ ಪುರುಷರಿಂದ ಆಗುತ್ತಿರುವ ಹಾವಳಿ ಮಿತಿಮೀರಿದ್ದು ಈ ಸಂಭಂದ ಪೊಲೀಸರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top