fbpx
ಕಿರುತೆರೆ

ತೇಜಸ್ವಿನಿ ವಿರುದ್ಧ ಬಿಗ್’ಬಾಸ್ ವೀಕ್ಷಕರು ಗರಂ: ಯಾಕೆ ಗೊತ್ತಾ?

ತೇಜಸ್ವಿನಿ ವಿರುದ್ಧ ಬಿಗ್’ಬಾಸ್ ವೀಕ್ಷಕರು ಗರಂ: ಯಾಕೆ ಗೊತ್ತಾ?

 

 

ಬಿಗ್’ಬಾಸ್ ಕಾರ್ಯಕ್ರಮದ ಸ್ಪರ್ಧಿಯಾಗಿರುವ ನಟಿ ತೇಜಸ್ವಿನಿ ವಿರುದ್ಧ ಬಿಗ್ ಬಾಸ್ ವೀಕ್ಷಕರು ಗರಂ ಆಗಿದ್ದಾರೆ. ಅಷ್ಟಕ್ಕೂ ತೇಜಸ್ವಿನಿ ಮೇಲ್ಯಾಕೆ ಕೋಪ ಅಂತೀರಾ ಮುಂದೆ ಓದಿ. ತೇಜಸ್ವಿನಿ ತಂದೆಯವರಿಗೆ ಕಿಡ್ನಿ ಆಪರೇಷನ್ ಆಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಟವನ್ನು ನಿಲ್ಲಿಸಿ ಹೊರ ಹೋಗುತ್ತೀರಾ ಎಂಬ ಪ್ರಶ್ನೆಯನ್ನ ಬಿಗ್ ಬಾಸ್ ತೇಜಸ್ವಿನಿಯನ್ನು ಕೇಳಿದ್ದರು ಆಗ ತನ್ನ ತಾಯಿಯ ಜೊತೆ ಮಾತನಾಡಲು ದೂರವಾಣಿ ಸಂಪರ್ಕವನ್ನು ಕಲ್ಪಿಸಿಕೊಡಿ ಅವರೊಂದಿಗೆ ಮಾತನಾಡಿ ನಿರ್ಧಾರ ತಿಳಿಸುತ್ತೇನೆ ಎಂದು ತೇಜಸ್ವಿನಿ ಕೇಳಿಕೊಂಡರು.

 

 

ತೇಜಸ್ವಿನಿಯವರ ಕೋರಿಕೆಯನ್ನು ಸಮ್ಮತಿಸಿದ ಬಿಗ್ ಬಾಸ್ ಅವರ ತಾಯಿಯನ್ನು ದೂರವಾಣಿಯ ಮೂಲಕ ಸಂಪರ್ಕಿಸಿದರು ತಾಯಿಯೊಂದಿಗೆ ಮಾತನಾಡಿದ ತೇಜಸ್ವಿನಿ ತಂದೆಯ ಪರಿಸ್ಥಿಯನ್ನು ತಿಳಿದುಕೊಂಡರು “ಅವರ ತಾಯಿ ನಿಮ್ಮನಿಗೆ ಕಿಡ್ನಿ ಆಪರೇಷನ್ ಆಗಿದೆ. ಅಪ್ಪ ನಿನ್ನನ್ನ ನೋಡಬೇಕು ಅಂತ ಕೇಳ್ತಿದ್ದಾರೆ. ಯಾವ ಸಮಯದಲ್ಲಿ ಏನಾಗುತ್ತೆ ಹೇಳಕ್ಕಾಗಲ್ಲ “ಎಂದು ಹೇಳಿದರು ಆಗ ತೇಜಸ್ವಿನಿ ನಾನು ಬಂದ್ರೆ ಅಪ್ಪ ಹುಷಾರಾಗ್ತಾರೆ ಅನ್ನೋ ಹಾಗಿದ್ರೆ ಬರ್ತೀನಿ ಸುಮ್ನೆ ಟೆನ್ಷನ್ ಆಗಿ ನನ್ನನ್ನ ಕರೆಸಿಕೊಳ್ಳಬೇಡ ನಾನು ನಾಲ್ಕುವಾರ ಇಲ್ಲಿ ಇದ್ದೀನಿ ಕೊನೆವರೆಗೂ ಇರಬೇಕು ಅನ್ನೋ ಆಸೆ ಇದೆ” ಎಂದು ಹೇಳಿದರು. ಅಲ್ಲದೆ ತೇಜಸ್ವಿನಿ ತಾವು ಹೊರ ಹೋಗುವ ಬಗ್ಗೆ ಸ್ಪಷ್ಟವಾಗಿ ಹೇಳಲಿಲ್ಲ.

 

 

ತೇಜಸ್ವಿನಿಯವರ ಈ ನಿಲುವಿಗೆ ವೀಕ್ಷಕರು ಗರಂ ಆಗಿದ್ದಾರೆ ಇವಳಿಗೆ ಅಪ್ಪನಿಗಿಂತ ಬಿಗ್ಗ್ ಬಾಸ್ ಮನೆಯ ದುಡ್ಡೇ ಮುಖ್ಯ ಅನ್ಸುತ್ತೆ ಅವರ ಅಮ್ಮ ಬೇಗ ಬಾ ಅಂತ ಹೇಳಿದ್ರು ಯೋಚನೆ ಮಾಡ್ತಾ ಇದ್ದಾರೆ, ದುಡ್ಡನ್ನ ನಾಳೆ ಸಂಪಾದನೆ ಮಾಡಬಹುದು ಆದರೆ ಅಪ್ಪನನ್ನ ಸಂಪಾದನೆ ಮಾಡೋಧಿಕ್ಕೆ ಆಗೋಲ್ಲ. ಬಿಗ್ ಬಾಸ್ ಮನೆಯಿಂದ ಹೊರಹೋದರೆ ಮತ್ತೆ ಬಿಗ್ ಬಾಸ್ ಗೆ ಹೋಗಲು ಸಾಧ್ಯವಾಗೋಲ್ಲ ಎಂದು ತೇಜಸ್ವಿನಿ ಹೇಳುತ್ತಿದ್ದಾರೆ ಆದರೆ ಅವರು ಮತ್ತೊಬ್ಬ ತಂದೆಯನ್ನ ಪಡೆಯಲಾಗುವುದಿಲ್ಲ ಎಂದು ಮರೆತುಬಿಟ್ಟಿದ್ದಾರೆ ಈ ಸಮಯದಲ್ಲಿ ಹೋಗಬೇಕೆ ಬೇಡವೇ ಎಂಬ ಎರಡೆರಡು ಚಿಂತನೆಗಳು ಇರಬಾರದು ಎಂದು ವೀಕ್ಷಕರು ತೇಜಸ್ವಿನಿಯ ಮೇಲೆ ಗರಂ ಆಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments
ನಾಗರಾಜ್ ಶೆಟ್ಟಿ says:

ಸಂಬಂಧಗಳಿಗೆ ಬೆಲೆಯೇ ಇಲ್ಲವೇ,ಹಣ ಯಾವಾಗಬೇಕಾದರೂ,ಸಂಪಾದಿಸಬಹುದು,ಜನ್ಮ ಕೊಟ್ಟ ತಂದೆ ಕಣ್ಣಿಗೆ ಕಣೋ ದೇವರು,ಅದೇ ಕ್ಷಣವೇ ಬಿಗ್ಬಾಸ್ ಮನೆ ಬಿಟ್ಟು,ಬರಬೇಕಿತ್ತು,ಯೋಚನೆ ಮಾಡೋ ಸಂದರ್ಭವೇ ಅಲ್ಲ ಇದು

sunitha says:

ninantha makkalanna padeda appa amma dhanaru annabeku.nivella ondu celebrity anno kerreta bere kedu nimage

To Top