fbpx
ಕ್ರೀಡೆ

ಟಿ-20 ಪಂದ್ಯದಲ್ಲಿ ಒಂದೇ ಒಂದು ರನ್ ಕೂಡ ನೀಡದೆ ಎಲ್ಲಾ ಹತ್ತು ವಿಕೆಟ್’ಗಳನ್ನೂ ಕಬಳಿಸಿದ ಭಾರತೀಯ ಬೌಲರ್..!

ಟಿ-20 ಪಂದ್ಯದಲ್ಲಿ ಒಂದೇ ಒಂದು ರನ್ ಕೂಡ ನೀಡದೆ ಎಲ್ಲಾ ಹತ್ತು ವಿಕೆಟ್’ಗಳನ್ನೂ ಕಬಳಿಸಿದ ಭಾರತೀಯ ಬೌಲರ್..!

 

 

ರಾಜಸ್ಥಾನ ಮೂಲದ 15 ವರ್ಷದ ಎಡಗೈ ವೇಗದ ಬೌಲರ್ ಆಗಿರುವ ಆಕಾಶ್ ಆಕಾಶ್ ಚೌಧರಿ ಜೈಪುರದಲ್ಲಿ ನಡೆದ ದೇಸಿ ಟಿ20 ಪಂದ್ಯವೊಂದರಲ್ಲಿ ಒಂದೂ ರನ್ ನೀಡದೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಭಾವೇಶ್ ಸಿಂಗ್ ಸ್ಮಾರಕ ಟೂರ್ನಿಯಲ್ಲಿ ಆಡಿರುವ ಆಕಾಶ್ ಈ ಅಪರೂಪದ ಸಾಧನೆಯನ್ನ ಮಾಡಿದ್ದಾರೆ. ಮುಂದೆ ಓದಿ

 

 

ಟೂರ್ನಿಯಲ್ಲಿ ಆಕಾಶ್‌ ದೀಕ್ಷಾ ಅಕಾಡೆಮಿ ತಂಡದ ಪರವಾಗಿ ಆಡಿದ್ದರು. ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪರ್ಲ್ ಅಕಾಡೆಮಿ ತಂಡವು 20 ಓವರ್‍ಗಳಲ್ಲಿ ದೀಕ್ಷಾ ತಂಡವನ್ನು 156 ರನ್‍ಗಳಿಗೆ ಕಟ್ಟಿ ಹಾಕಿತು. ನಂತರ ದೀಕ್ಷಾ ತಂಡ ನೀಡಿದ್ದ 156 ರನ್ನುಗಳ ಗುರಿಯನ್ನು ಬೆನ್ನತ್ತಿದ ಪರ್ಲ್ ಅಕಾಡೆಮಿ ತಂಡ ಕೇವಲ 36 ರನ್ ಗಳಿಸುವಷ್ಟರಲ್ಲಿ ಆಕಾಶ್ ಚೌಧರಿ ಬೌಲಿಂಗ್‍ ಪ್ರಭಾವದಿಂದ ತನ್ನೆಲ್ಲಾ ವಿಕೆಟ್ ಗಳನ್ನೂ ಕಳೆದುಕೊಂಡು ಸೋಲೊಪ್ಪಿಕೊಂಡಿತು.

 

 

 

ಎಡಗೈ ವೇಗದ ಬೌಲರ್ ಆಗಿರುವ ಆಕಾಶ್‌ ತಮ್ಮ ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಉರುಳಿಸಿದರು. ಎರಡು ಮತ್ತು ಮೂರನೇ ಓವರ್‌ಗಳಲ್ಲೂ ಕೂಡ ತಲಾ ಎರಡು ವಿಕೆಟ್’ಗಳಂತೆ ಪಡೆದರು. ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿ ಒಟ್ಟು ನಾಲ್ಕು ವಿಕೆಟ್ ತಮ್ಮದಾಗಿಸಿಕೊಂಡರು. ಈ ನಾಲ್ಕೂ ಓವರ್ ಗಳಲ್ಲಿ ಒಂದೇ ಒಂದು ರನ್ ಕೂಡ ಬಿಟ್ಟು ಕೊಡಲಿಲ್ಲ. ಪಂದ್ಯ ಮುಗಿದಾಗ ಅವರ ಬೌಲಿಂಗ್‌ ವಿವರ ಹೀಗಿತ್ತು: 4–4–0–10.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top