fbpx
ಭವಿಷ್ಯ

ನವೆಂಬರ್ 9 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ನವೆಂಬರ್ 9 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಬೆಂಗಳೂರು, ಭಾರತ
ಗುರುವಾರ, ೦೯ ನವೆಂಬರ್ ೨೦೧೭
ಸೂರ್ಯೋದಯ : ೦೬:೧೯
ಸೂರ್ಯಾಸ್ತ : ೧೭:೪೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಕಾರ್ತಿಕ
ಪಕ್ಷ : ಕೃಷ್ಣ ಪಕ್ಷ
ತಿಥಿ : ಷಷ್ಠೀ
ನಕ್ಷತ್ರ : ಪುನರ್ವಸು
ಯೋಗ : ಸಾಧ್ಯ
ಪ್ರಥಮ ಕರಣ : ವಣಿಜ
ಸೂರ್ಯ ರಾಶಿ : ತುಲಾ
ಅಭಿಜಿತ್ ಮುಹುರ್ತ : ೧೧:೪೦ – ೧೨:೨೬
ಅಮೃತಕಾಲ : ೧೧:೨೫ – ೧೨:೫೪
ರಾಹು ಕಾಲ: ೧೩:೨೯ – ೧೪:೫೫
ಗುಳಿಕ ಕಾಲ: ೦೯:೧೧ – ೧೦:೩೭
ಯಮಗಂಡ: ೦೬:೧೯ – ೦೭:೪೫

ಮೇಷ (Mesha)

 

ಸ್ನೇಹಿತರ ಮನೆ ಇಲ್ಲವೆ ಬಂಧುಗಳ ಮನೆಯಲ್ಲಿ ಮೃಷ್ಠಾನ್ನ ಭೋಜನ ಸವಿಯುವಿರಿ. ಮನೋಲ್ಲಾಸ. ಸಂತೋಷ ಸಂಭ್ರಮದಿಂದ ದಿನ ಕಳೆಯುವಿರಿ. ವ್ಯಾಪಾರ ಸಾಕಷ್ಟು ತೃಪ್ತಿಯನ್ನು ನೀಡಲಿದೆ.

 

ವೃಷಭ (Vrushabha)

ಆರೋಗ್ಯದ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವಿರಿ. ಆದರೆ, ನಿಮಗೆ ನಿರಾಶೆ ಕಾದಿರುವುದು. ಸೂಕ್ತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ. ಸಂಗಾತಿಯ ಪೂರ್ಣ ಸಹಕಾರ ದೊರೆಯಲಿದೆ.

 

ಮಿಥುನ (Mithuna)

ಬೆಲೆಬಾಳುವ ವಸ್ತುಗಳ ಖರೀದಿಗೆ ಮನೆಯಲ್ಲಿ ಆಕ್ಷೇಪ ವ್ಯಕ್ತವಾಗುವುದು. ಹಿರಿಯರ ಮನ ಒಲಿಸುವುದು ಸುಲಭವಲ್ಲ. ಅವರಂತೆಯೇ ಮಾತನಾಡಿ ನಿಮ್ಮ ಕಾರ್ಯ ಸಾಧಿಸಿಕೊಳ್ಳಿ. ಹಣಕಾಸು ಒದಗಿ ಬರುವುದು.

 

ಕರ್ಕ (Karka)

ಉತ್ತಮ ಆರೋಗ್ಯ, ವ್ಯಾಪಾರ ಕ್ಷೇತ್ರದಲ್ಲಿ ಪ್ರತಿಕೂಲ ವಾತಾವರಣವಿದ್ದರೂ ಸಂಜೆಯ ವೇಳೆಗೆ ತಹಬಂದಿಗೆ ಬರುವುದು. ಕೆಲವರು ನೌಕರಿಯನ್ನು ಬದಲಾಯಿಸುವ ಯೋಚನೆ ಮಾಡುತ್ತಿರುವರು. ಉತ್ತಮ ದಿನ.

ಸಿಂಹ (Simha)

ಮನೋಕಾಮನೆಗಳು ಪೂರ್ಣಗೊಳ್ಳುವವು. ನೌಕರಿಯಲ್ಲಿ ಬಡ್ತಿ ಸಾಧ್ಯತೆ. ವರ್ಗಾವಣೆ ಯೋಗ, ಖಾಸಗಿ ಸಂಸ್ಥೆಯಲ್ಲಿ ದುಡಿಯುವ ವ್ಯಕ್ತಿಗಳಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಆದರೂ ಅದು ಹಣದ ರೂಪದಲ್ಲಿ ಇರುವುದಿಲ್ಲ.

 

ಕನ್ಯಾರಾಶಿ (Kanya)

ಆರೋಗ್ಯ ಪದೇ ಪದೆ ಕೈಕೊಡುತ್ತಿರುವುದರಿಂದ ನಿತ್ಯದ ಕೆಲಸ ಕಾರ್ಯಗಳಿಗೆ ಅಡೆತಡೆಯುಂಟಾಗುವುದು. ಆರೋಗ್ಯದ ಸಲುವಾಗಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ತುಲಾ (Tula)

ಮನದನ್ನೆಯ ಮಾತು ಮೀರದಿರಿ. ನೀವು ಅಂದದ್ದು ಸರಿ ಎನಿಸಿದರೂ ಸಂಗಾತಿಯೇ ತಿಳಿದುಕೊಂಡಿದ್ದು ಬೇರೆ. ಹಾಗೆ ಅಪಾರ್ಥ ಮಾಡಿಕೊಂಡರೆ ಸಂಸಾರದಲ್ಲಿ ಸುಖ ಇರುವುದಿಲ್ಲ. ಈ ವಿಷಯದಲ್ಲಿ ಸೋತು ಗೆಲ್ಲುವುದು ಒಳ್ಳೆಯದು.

 

ವೃಶ್ಚಿಕ (Vrushchika)

ಬಂಧುಮಿತ್ರರ ಆಗಮನದಿಂದ ಮನೋಲ್ಲಾಸ, ಮಾತೃ ಸಂಬಂಧದವರ ಆರೋಗ್ಯದಲ್ಲಿ ಚೇತರಿಕೆ. ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಆದಾಯ. ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ಪಡೆಯುವಿರಿ.

 

ಧನು ರಾಶಿ (Dhanu)

ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸುವುದು ಒಳ್ಳೆಯದು. ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುವುದರಿಂದ ಮನೋವ್ಯಾಕುಲತೆ, ಧನಹಾನಿ. ಕುಲದೇವತಾ ಪ್ರಾರ್ಥನೆಯಿಂದ ಒಳಿತಾಗುವುದು.

 

ಮಕರ (Makara)

ನಿಮ್ಮ ಬಾಳಿಗೆ ಸಂತೋಷ ತುಂಬುವ ದಿನ. ಒಳ್ಳೆಯ ಸುದ್ದಿಗಳನ್ನೇ ಕೇಳುವಿರಿ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಆರೋಗ್ಯ ಸ್ಥಿತಿ ಉತ್ತಮವಾಗಿರುವುದು.

 

ಕುಂಭರಾಶಿ (Kumbha)

ವಾಣಿಜ್ಯ ರಂಗದವರಿಗೆ ಲಾಭ. ಗೆಳೆಯರಿಂದ ಸಹಾಯ ಸಾಧ್ಯತೆ. ನಿಮ್ಮ ಅನಿಸಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಇದರಿಂದ ಅಪಾರ್ಥಕ್ಕೆಡೆ ಮಾಡಿಕೊಟ್ಟಂತಾಗುವುದು. ಹಣವನ್ನು ಉಳಿಸುವಿರಿ.

 

ಮೀನರಾಶಿ (Meena)

ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ. ಯಾವುದೇ ವಿಷಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಸಲ್ಲದು. ನಿಮ್ಮ ಶ್ರಮಕ್ಕೆ ತಕ್ಕ ಫಲವನ್ನು ಗುರುವಿನ ಅನುಗ್ರಹದಿಂದ ಪಡೆಯುವಿರಿ. ಆರೋಗ್ಯ ಸುಸ್ಥಿರವಾಗಿರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top