fbpx
ಕಿರುತೆರೆ

ಕುಟುಂಬದಲ್ಲಿ ದಿಢೀರ್ ಆಘಾತ: ‘ಬಿಗ್ ಬಾಸ್’ ಮನೆಯಿಂದ ಹೊರಬಂದ ತೇಜಸ್ವಿನಿ..?

ಕುಟುಂಬದಲ್ಲಿ ದಿಢೀರ್ ಆಘಾತ: ‘ಬಿಗ್ ಬಾಸ್’ ಮನೆಯಿಂದ ಹೊರಬಂದ ತೇಜಸ್ವಿನಿ..?

 

 

ಬಿಗ್ ಬಾಸ್ ಕಾರ್ಯಕ್ರಮ ದಿನೇ ದಿನೇ ಕುತೂಹಲವನ್ನು ಹೆಚ್ಚಿಸುತ್ತಿದೆ. ಈ ಮದ್ಯೆ ನಟಿ ತೇಜಸ್ವಿನೀ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ನಿರ್ಧಾರನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಾರ ‘ಬಿಗ್ ಬಾಸ್’ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಎಲಿಮಿನೇಷನ್ ಗೂ ಮುಂಚೆಯೇ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ತೇಜಸ್ವಿನಿ ನಿರ್ಧರಿಸಿದ್ದಾರೆ. ಮುಂದೆ ಓದಿ

 

 

ತೇಜಸ್ವಿನಿ ತಂದೆಯವರಿಗೆ ಕಿಡ್ನಿ ಆಪರೇಷನ್ ಆಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಟವನ್ನು ನಿಲ್ಲಿಸಿ ಹೊರ ಹೋಗುತ್ತೀರಾ ಎಂಬ ಪ್ರಶ್ನೆಯನ್ನ ಬಿಗ್ ಬಾಸ್ ತೇಜಸ್ವಿನಿಯನ್ನು ಕೇಳಿದ್ದಾರೆ. ತನ್ನ ತಾಯಿಯ ಜೊತೆ ಮಾತನಾಡಲು ದೂರವಾಣಿ ಸಂಪರ್ಕವನ್ನು ಕಲ್ಪಿಸಿಕೊಡಬೇಕೆಂದು ತೇಜಸ್ವಿನಿ ಕೇಳಿಕೊಂಡಾಗ ಅದಕ್ಕೆ ಬಿಗ್ ಬಾಸ್ ಸಮ್ಮತಿಸಿ ಅವರ ತಾಯಿಯನ್ನು ದೂರವಾಣಿಯ ಮೂಲಕ ಸಂಪರ್ಕಿಸಿದ್ದಾರೆ.

 

 

ತಾಯಿಯೊಂದಿಗೆ ಮಾತನಾಡಿದ ತೇಜಸ್ವಿನಿ ತಂದೆಯ ಪರಿಸ್ಥಿಯನ್ನು ತಿಳಿದು, ಅಮ್ಮನ ಬಳಿ ಮಾತನಾಡುತ್ತಿರುವಾಗ, ”ನಾನು ಬರುತ್ತೇನೆ” ಎಂದು ತೇಜಸ್ವಿನಿ ಭರವಸೆ ನೀಡಿದರು. ಮನೆಯಿಂದ ಹೊರ ಹೋಗುವ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸಲು ತೇಜಸ್ವಿನಿಗೆ ‘ಬಿಗ್ ಬಾಸ್’ ಕಾಲಾವಕಾಶ ನೀಡಿದ್ದಾರೆ, ಆದರೆ ‘ಬಿಗ್ ಬಾಸ್’ ಮನೆಯಿಂದ ತೇಜಸ್ವಿನಿ ಹೊರಹೋದ್ರಾ ಇಲ್ವಾ ಎಂಬುದನ್ನು ತಿಳಿಯಲು ಇಂದಿನ ಸಂಚಿಕೆ ಪ್ರಸಾರವಾಗುವವರೆಗೂ ಕಾಯಲೇಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top