fbpx
ಕಿರುತೆರೆ

‘ಡವ್ ರಾಣಿ’ ಕಿರಿಕಿರಿ ಅನುಪಮಾ ವಿರುದ್ಧ ವೀಕ್ಷಕರ ಸಿಟ್ಟು.

‘ಡವ್ ರಾಣಿ’ ಕಿರಿಕಿರಿ ಅನುಪಮಾ ವಿರುದ್ಧ ವೀಕ್ಷಕರ ಸಿಟ್ಟು..!

 

 

ಬಿಗ್ ಬಾಸ್ ಕಾರ್ಯಕ್ರಮದಲ್ಲಿರುವ ಅಕ್ಕ ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ವರ್ತನೆಯನ್ನು ಕಂಡು ವೀಕ್ಷಕರು ಗರಂ ಆಗಿದ್ದಾರೆ.ಕುಡಿಯ ಹಾಲನ್ನು ಕದ್ದು ಮುಚ್ಚಿಡುವಾಗ ಇದು ಸರಿಯೋ ತಪ್ಪೋ ಅಂತ ಯೋಚನೆ ಮಾಡದೇ ಬಚ್ಚಿಟ್ಟು ಅದನ್ನು ಸಮರ್ಥಿಸಿಕೊಂಡ ಅನುಪಮಾ ಈಗ ಅಡುಗೆ ಮನೆಯ ವಿಚಾರಕ್ಕೆ ಉರ್ಕೊಳ್ತಿದ್ದಾರೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಮುಂದೆ ಓದಿ

 

 

ಅಡುಗೆ ಸಾಮಾನು ಮೇಲೆ ಕ್ಯಾಪ್ಟನ್ ಹಾಗೂ ಅಡುಗೆ ಮನೆಯ ಡಿಪಾರ್ಟ್ಮೆಂಟ್’ನ ರಿಯಾಜ್ ಕಣ್ಣಿಟ್ಟಿದ್ದಾರೆ ಇದನ್ನು ಅನುಪಮಾಗೆ ಸಹಿಸಿಕೊಳ್ಳಲು ಆಗುತ್ತಿಲ್ಲವಂತೆ ಹಾಗಂತ ತಮ್ಮ ಸೆಲೆಬ್ರೆಟಿಗಳ ಗುಂಪಿನಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಟೀ ಮಾಡುವಾಗ ಮೂರು ನಾಲ್ಕು ಹಿಂದೆ ಬಂದು ನೀಲ್ಕೋತಾರೆ, ಪ್ರತಿಯೊಂದನ್ನೂ ಲೆಕ್ಕ ಮಾಡ್ತಾರೆ ಪದಾರ್ಥಗಳನ್ನು ಚೆಕ್ ಮಾಡೋದು ಹಾಕುವುದು ನನಗೆ ಉರಿಯುತ್ತೆ” ಎಂದು ಹೇಳಿಕೊಂಡಿದ್ದಾರೆ.

 

 

“ಅಡುಗೆ ಮನೆಯ ಸಾಮಾನು, ರೇಷನ್ ನ ರಿಯಾಝ್ ಚೆಕ್ ಮಾಡೋಕೆ.. ಅವನ್ನೆಲ್ಲಾ ಏನು ಅವರ ಮನೆಯಿಂದ ತಂದಿದ್ದಾ ಅಂತ ಅನುಪಮಾ ಕೇಳ್ತಾರೆ.” ಅದೇ ಪ್ರಶ್ನೆಯನ್ನ ಅವರಿಗೆ ಕೇಳಬೇಕು ಅಂದ್ರೆ ಕಳೆದ ವಾರ ಹಾಲನ್ನ ಬಚ್ಚಿಟ್ಟಿದ್ದ ಆ ಹಾಲನ್ನ ಅವರ ಮನೆಯಿಂದ ತಂದಿದ್ದರಾ.? ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ. 300 ಚಿತ್ರಗಳನ್ನು ಮಾಡಿರೋ ರೇಂಜಿಗೆ ಅನುಪಮಾ ಮಾತನಾಡುತ್ತಾರೆ ಅವರ ಧಾಟಿ ತುಂಬಾ ಅಹಂಕಾರದಿಂದ ಕೂಡಿರುತ್ತದೆ ಎಂದು ವೀಕ್ಷಕರು ಆರೋಪಿಸಿದ್ದಾರೆ

 

 

ಕಳೆದ ವಾರ ಗ್ಯಾಸ್ ನಿಲ್ಲಿಸಿದಾಗ ಸಮೀರ್ ಆಚಾರ್ ತನ್ನ ಒಲೆಯಲ್ಲಿ ಮಾಡಿಕೊಟ್ಟಿದ್ದ ಬೇಳೆಬಾತ್ ಅನ್ನು ಸಕ್ಕಾತಾಗಿದೆ ಎಂದು ತಿಂದಿದ್ದ ಅನುಪಮಾ ಈಗ ಅಡುಗೆ ಮನೆ ಡಿಪಾರ್ಟ್ಮೆಂಟ್’ನಲ್ಲಿ ಇರುವವರು ಚೆನ್ನಾಗಿ ಅಡುಗೆ ಮಾಡುತ್ತಿಲ್ಲ. ಗಲೀಜು ಅಂತೆಲ್ಲ ಅಂತೆಲ್ಲಾ ಹೇಳುತ್ತಿದ್ದಾರೆ. ಅಲ್ಲದೆ ಅಡುಗೆಯಲ್ಲಿ ಉಳಿದ ಆಹಾರವನ್ನು ಅನುಪಮಾ ಗೌಡ ಚೆಲ್ಲಿದ್ದಾರಂತೆ.. ಅಲ್ಲದೆ ಸದಾಕಾಲ ಚಂದನ್ ವಿರುದ್ಧ ಮಾತನಾಡುವ ಅನುಪಮಾ ನೋಡುಗರಿಗೆ ಸಕತ್ ಕಿರಿಕಿರಿ ಮಾಡ್ತಿದ್ದಾರೆ.

 

 

 

ತನ್ನ ಓವರ್ ಆಕ್ಟಿಂಗ್’ನಿಂದ ‘ಡವ್ ರಾಣಿ’ ಎಂದು ಹೆಸರು ಪಡೆದುಕೊಂಡಿಯುವ ಅನುಪಮಾ ಬಿಗ್ ಬಾಸ್ ಮನೆಯಲ್ಲಿ ತಾನು ಮಾತ್ರ ಅರಚುತ್ತಾ ಕಿರುಚುತ್ತಾ ಇರುತ್ತಾರೆ ಅದೇ ಯಾರಾದರೂ ಕಾಮನ್ ಪೀಪಲ್ ಮಾಡಿದರೆ ಅವರ ಮೇಲೆ ಸಿಟ್ಟಾಗುತ್ತಾರೆ.. ಒಟ್ಟಿನಲ್ಲಿ ಆದಷ್ಟು ಬೇಗ ಅನುಪಮಾ ರನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸಿ ಅವರ ಕಿರಿಕಿರಿಯನ್ನು ತಡೆದುಕೊಳ್ಳಲು ಆಗುತ್ತಿಲ್ಲ ಎನ್ನುವುದು ವೀಕ್ಷಕರ ಆಗ್ರಹ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top